For the best experience, open
https://m.newskannada.com
on your mobile browser.
Advertisement

ಡಿವೈಡರ್‌ಗೆ ಡಿಕ್ಕಿ ಹೊಡೆದು ಬೈಕ್‌ ಸವಾರ ಮೃತ್ಯು

ಭೀಕರ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸಾವನ್ನಪ್ಪಿದ ಘಟನೆ ಬೆಂಗಳೂರಲ್ಲಿ ನಡೆದಿದೆ.
03:38 PM May 17, 2024 IST | Chaitra Kulal
ಡಿವೈಡರ್‌ಗೆ ಡಿಕ್ಕಿ ಹೊಡೆದು ಬೈಕ್‌ ಸವಾರ ಮೃತ್ಯು

ಬೆಂಗಳೂರು: ಭೀಕರ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸಾವನ್ನಪ್ಪಿದ ಘಟನೆ ಬೆಂಗಳೂರಲ್ಲಿ ನಡೆದಿದೆ.

Advertisement

ವರುಣ್ ಮೃತ ಬೈಕ್ ಸವಾರ. ಕೋಲಾರ ಮೂಲದವನಾದ ವರುಣ್, ಪೀಣ್ಯಾ ಇಂಡಸ್ಟ್ರಿಯಲ್ ಏರಿಯಾದಲ್ಲಿ ಏಷಿಯನ್ ಪೇಂಟ್ಸ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು.

ನಿನ್ನೆ ಗೆಳೆಯನ ಬರ್ತ್‌ ಡೇ ಪಾರ್ಟಿಗೆ ಮುಗಿಸಿ ಮೂಡಲಪಾಳ್ಯಕ್ಕೆ ವಾಪಸ್ ಬರೋ ವೇಳೆ ರಸ್ತೆ ಮಧ್ಯೆ ಇರುವ ಡಿವೈಡರ್‌ಗೆ ಗುದ್ದಿದ್ದಾನೆ. ಬೈಕ್ ಓಡಿಸುತ್ತಿದ್ದ ವರುಣ್‌ ರಸ್ತೆ ಮಧ್ಯದ ಸರ್ವೀಸ್ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ತಲೆಗೆ ಗಂಭೀರ ಗಾಯವಾಗಿದೆ. ಸ್ಥಳದಲ್ಲೇ ವರುಣ್‌ಗೆ ಅತಿಯಾದ ರಕ್ತಸ್ರಾವ ಆಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾನೆ.

Advertisement

ಗೆಳೆಯನ ಬರ್ತ್‌ ಡೇ ಪಾರ್ಟಿಗೆ ಹೋಗಿದ್ದ ವರುಣ್‌ ಹೆಲ್ಮೆಟ್ ಧರಿಸದೇ ವೇಗವಾಗಿ ಬೈಕ್‌ ಚಾಲನೆ ಮಾಡಿಕೊಂಡು ಬಂದಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ.

Advertisement
Tags :
Advertisement