ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಚುನಾವಣಾ ರ್‍ಯಾಲಿ ವೇಳೆ ಶೋಭಾ ಕರಂದ್ಲಾಜೆ ಕಾರಿಗೆ ಬೈಕ್ ಡಿಕ್ಕಿ; ಸವಾರ ಸಾವು

ಚುನಾವಣಾ ರ್ಯಾಲಿ ವೇಳೆ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರ ಕಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.
02:48 PM Apr 08, 2024 IST | Ashitha S

ಬೆಂಗಳೂರು: ಚುನಾವಣಾ ರ್ಯಾಲಿ ವೇಳೆ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರ ಕಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.

Advertisement

ಕೆ.ಆರ್ ಪುರಂನ ಗಣೇಶ ದೇವಸ್ತಾನದ ಬಳಿ ನಡೆದ ಘಟನೆ ನಡೆದಿದ್ದು, ಸ್ಕೂಟರ್​ ಸವಾರ ಪ್ರಕಾಶ್ (35) ಸಾವನ್ನಪ್ಪಿದ್ದಾರೆ.

ಸಿಬ್ಬಂದಿ ನಿಂತಿದ್ದ ಕಾರಿನ ಡೋರ್ ಒಪನ್ ಮಾಡಿದ್ದು, ಹಿಂಬದಿಯಿಂದ ಬಂದ ಪ್ರಕಾಶ್​ಗೆ ಡೋರ್​ಗೆ ಡಿಕ್ಕಿ ಹೊಡೆದು ಬಿದ್ದಿದ್ದಾರೆ. ಈ ವೇಳೆ ಬಸ್​ ಅವರ ಮೇಲೆ ಹರಿದಿದ್ದು, ಗಂಭೀರ ಗಾಯಗೊಂಡಿದ್ದಾರೆ.

Advertisement

ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪ್ರಕಾಶ್​ ಸಾವನ್ನಪ್ಪಿದ್ದಾರೆ. ಕೆಆರ್​ ಪುರಂ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
BJPCongressdeathGOVERNMENTindiaKARNATAKAಶೋಭಾ ಕರಂದ್ಲಾಜೆ
Advertisement
Next Article