ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪಾಕ್ ಸುಂದರಿಗೆ ಭಾರತದ ಗೌಪ್ಯ ಮಾಹಿತಿ ನೀಡುತ್ತಿದ್ದ ವ್ಯಕ್ತಿಯ ಬಂಧನ

ಮುಂಬೈನಲ್ಲಿ ಭಯೋತ್ಪಾದನಾ ನಿಗ್ರಹ ದಳ (ATS) ಪಾಕಿಸ್ತಾನದ ಐಎಸ್‌ಐ ಏಜೆಂಟ್‌ಗಳಿಂದ ಹನಿಟ್ರ್ಯಾಪ್‌ಗೆ ಒಳಗಾಗಿದ್ದ ಕಲ್ಪೇಶ್ ಬೈಕರ್ ಎಂಬಾತನನ್ನು  ಬಂಧಿಸಿದ್ದಾರೆ. 31 ವರ್ಷದ ಕಲ್ಪೇಶ್ ಬೈಕರ್ ಮುಂಬೈನ ಮಜಾಗಾವ್ ಡಾಕ್‌ನಲ್ಲಿ ಫ್ಯಾಬ್ರಿಕೇಟರ್ ಆಗಿ ಕೆಲಸ ಮಾಡುತ್ತಿದ್ದ. ಪಾಕ್‌ ಐಎಸ್ಐ ಏಜೆಂಟ್ ಮಹಿಳೆಯ ಜೊತೆಗೆ ಕಲ್ಪೇಶ್ ಬೈಕರ್ ಚಾಟಿಂಗ್ ಮಾಡುತ್ತಿದ್ದರು.
12:41 PM Mar 12, 2024 IST | Ashitha S

ಮುಂಬೈ: ಮುಂಬೈನಲ್ಲಿ ಭಯೋತ್ಪಾದನಾ ನಿಗ್ರಹ ದಳ (ATS) ಪಾಕಿಸ್ತಾನದ ಐಎಸ್‌ಐ ಏಜೆಂಟ್‌ಗಳಿಂದ ಹನಿಟ್ರ್ಯಾಪ್‌ಗೆ ಒಳಗಾಗಿದ್ದ ಕಲ್ಪೇಶ್ ಬೈಕರ್ ಎಂಬಾತನನ್ನು  ಬಂಧಿಸಿದ್ದಾರೆ. 31 ವರ್ಷದ ಕಲ್ಪೇಶ್ ಬೈಕರ್ ಮುಂಬೈನ ಮಜಾಗಾವ್ ಡಾಕ್‌ನಲ್ಲಿ ಫ್ಯಾಬ್ರಿಕೇಟರ್ ಆಗಿ ಕೆಲಸ ಮಾಡುತ್ತಿದ್ದ. ಪಾಕ್‌ ಐಎಸ್ಐ ಏಜೆಂಟ್ ಮಹಿಳೆಯ ಜೊತೆಗೆ ಕಲ್ಪೇಶ್ ಬೈಕರ್ ಚಾಟಿಂಗ್ ಮಾಡುತ್ತಿದ್ದರು.

Advertisement

ಪಾಕ್‌ ISI ಏಜೆಂಟ್‌ಗಳ ಹನಿಟ್ರ್ಯಾಪ್‌ ಬಲೆಗೆ ಬಿದ್ದಿದ್ದ ಕಲ್ಪೇಶ್ ಬೈಕರ್ ಮಜಾಗಾವ್ ಡಾಕ್‌ನಲ್ಲಿ ನಿರ್ಮಾಣವಾಗುತ್ತಿದ್ದ ಜಲಾಂತರ್ಗಾಮಿ ನೌಕೆಗಳ ಮಹತ್ವದ ಮಾಹಿತಿಗಳನ್ನು ಸೋರಿಕೆ ಮಾಡಿದ್ದಾರೆ. ಹಣಕ್ಕಾಗಿ ತನ್ನ ಸೋಷಿಯಲ್ ಮೀಡಿಯಾ ಸ್ನೇಹಿತರ ಜೊತೆಗೆ ಜಲಾಂತರ್ಗಾಮಿ ನೌಕೆಗಳ ಗೌಪ್ಯ ಮಾಹಿತಿಯನ್ನು ಹಂಚಿಕೆ ಮಾಡಿದ್ದಾರೆ ಎನ್ನಲಾಗಿದೆ.

ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದ ಕಲ್ಪೇಶ್ ಬೈಕರ್ ಅವರು ಒಂದೂವರೆ ವರ್ಷದಿಂದ ಮೋಹಕ ಸುಂದರಿಯ ಜೊತೆ ಸಂಪರ್ಕದಲ್ಲಿದ್ದರು. ನವೆಂಬರ್ 2021ರಿಂದ ಮೇ 2023ರವರೆಗೂ ವಾಟ್ಸಾಪ್‌ನಲ್ಲಿ ಇವರು ಗೌಪ್ಯತೆಯ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ. ಈ ಬಗ್ಗೆ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿದ್ದರು. ಈ ಆಧಾರದ ಮೇಲೆ ಕಲ್ಪೇಶ್ ಬೈಕರ್ ಅವರನ್ನ ಬಂಧಿಸಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.

Advertisement

Advertisement
Tags :
ARRESTcrimeindiaNewsKannadaPOLICEನವದೆಹಲಿ
Advertisement
Next Article