ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಡಾಲಿ ಚಾಯ್‌ವಾಲಾ ಬಳಿ 'ಒನ್ ಚಾಯ್ ಪ್ಲೀಸ್' ಎಂದ ಬಿಲ್ ಗೇಟ್ಸ್: ನೆಟ್ಟಿಗರು ಫಿದಾ

ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಈಗ ಭಾರತಕ್ಕೆ ಭೇಟಿ ನೀಡಿದ್ದಾರೆ ಮತ್ತು ಅವರ ವೈವಿಧ್ಯಮಯ ವಿಹಾರಗಳು ಅಂತರ್ಜಾಲದಲ್ಲಿ ವ್ಯಾಪಕ ಆಸಕ್ತಿ ಮತ್ತು ಚರ್ಚೆಯನ್ನು ಹುಟ್ಟುಹಾಕಿವೆ.
10:56 AM Feb 29, 2024 IST | Ashitha S

ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಈಗ ಭಾರತಕ್ಕೆ ಭೇಟಿ ನೀಡಿದ್ದಾರೆ ಮತ್ತು ಅವರ ವೈವಿಧ್ಯಮಯ ವಿಹಾರಗಳು ಅಂತರ್ಜಾಲದಲ್ಲಿ ವ್ಯಾಪಕ ಆಸಕ್ತಿ ಮತ್ತು ಚರ್ಚೆಯನ್ನು ಹುಟ್ಟುಹಾಕಿವೆ.

Advertisement

ಇತ್ತೀಚೆಗೆ ಗೇಟ್ಸ್ ಹಂಚಿಕೊಂಡಿರುವ ವಿಡಿಯೋದಲ್ಲಿ ಅವರು ದಾರಿ ಬದಿಯಲ್ಲಿ ಚಹಾ ಸವಿಯುವುದನ್ನು ಕಾಣಬಹುದು. ಈ ಬಗ್ಗೆ ಪೋಸ್ಟ್ ಜೊತೆ ಬರೆದುಕೊಂಡಿರುವ ಗೇಟ್ಸ್, 'ಭಾರತದಲ್ಲಿ ನೀವು ಎಲ್ಲಿ ನೋಡಿದರಲ್ಲಿ ನಾವೀನ್ಯತೆಯನ್ನು ಕಾಣಬಹುದು. ಸರಳ ಚಹಾ ತಯಾರಿಕೆಯಲ್ಲಿ ಕೂಡಾ' ಎಂದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿ ಪಡೆದಿರುವ "ಡಾಲಿ ಚಾಯ್‌ವಾಲಾ" ಬಳಿ ಹೋಗಿ 'ಒನ್ ಚಾಯ್ ಪ್ಲೀಸ್' ಎಂದಿದ್ದಾರೆ ಬಿಲ್ ಗೇಟ್ಸ್. ನಂತರ ಚಾಯ್‌ವಾಲಾ ತನ್ನ ವಿಶಿಷ್ಟ ವಿಧಾನ ಬಳಸಿ ಚಹಾವನ್ನು ತಯಾರಿಸುತ್ತಾನೆ. ಬಳಿಕ ಗೇಟ್ಸ್ ಒಂದು ಕಪ್ ಚಾಯ್ ಅನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ವೀಡಿಯೊದ ಕೊನೆಯಲ್ಲಿ ಡಾಲಿ ಚಾಯ್‌ವಾಲಾ ಅವರೊಂದಿಗೆ ಫೋಟೋಗೆ ಪೋಸ್ ನೀಡಿ, ತಾವು ಬಹಳಷ್ಟು ಚಾಯ್ ಪೇ ಚರ್ಚಾಕ್ಕಾಗಿ ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.

Advertisement

ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದ್ದು ನೆಟ್ಟಿಗರು ಕೂಡ ಗೇಟ್ಸ್‌ನ ಸರಳತೆಗೆ ಫಿದಾ ಆಗಿದ್ದಾರೆ. ಸ್ಥಳೀಯ ಸಂಸ್ಕೃತಿಯನ್ನು ಅರಿಯುವ, ಅದರೊಂದಿಗೆ ಬೆರೆಯುವ ಗೇಟ್ಸ್ ಗುಣ ಬಹಳ ವಿಶೇಷವಾದದ್ದು ಎನ್ನುತ್ತಿದ್ದಾರೆ ನೆಟ್ಟಿಗರು.

ಸ್ವಿಗ್ಗಿ ಪ್ರತಿಕ್ರಿಯಿಸಿ, 'ಬಿಲ್ ಎಷ್ಟು' ಎಂದು ಕೇಳಿದ್ದರೆ, ನೆಟ್ಟಿಗರೊಬ್ಬರು, 'ಡಾಲಿ ಚಾಯ್‌ವಾಲಾನೇ ಅದೃಷ್ಟವಂತ. ಆತನ ಅದೃಷ್ಟ ಇನ್ನು ಬದಲಾದಂತೆಯೇ' ಎಂದಿದ್ದಾರೆ.

Advertisement
Tags :
bill-gatechaiindiaLatestNewsNewsKannada
Advertisement
Next Article