For the best experience, open
https://m.newskannada.com
on your mobile browser.
Advertisement

ಹಕ್ಕಿ ಜ್ವರ ಭೀತಿ: ಗಡಿಭಾಗ ದ.ಕದಲ್ಲಿ ಮುಂಜಾಗ್ರತಾ ಕ್ರಮ, ಚೆಕ್ ಪೋಸ್ಟ್ ನಿರ್ಮಾಣ

ಕೇರಳ ರಾಜ್ಯದಲ್ಲಿ ಹಕ್ಕಿ ಜ್ವರ ಭೀತಿ ಹಿನ್ನೆಲೆಯಲ್ಲಿ ಕೇರಳದ ಗಡಿಭಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮ ವಹಿಸಲಾಗಿದೆ.
12:31 PM Apr 30, 2024 IST | Chaitra Kulal
ಹಕ್ಕಿ ಜ್ವರ ಭೀತಿ  ಗಡಿಭಾಗ ದ ಕದಲ್ಲಿ ಮುಂಜಾಗ್ರತಾ ಕ್ರಮ  ಚೆಕ್ ಪೋಸ್ಟ್ ನಿರ್ಮಾಣ

ಮಂಗಳೂರು: ಕೇರಳ ರಾಜ್ಯದಲ್ಲಿ ಹಕ್ಕಿ ಜ್ವರ ಭೀತಿ ಹಿನ್ನೆಲೆಯಲ್ಲಿ ಕೇರಳದ ಗಡಿಭಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮ ವಹಿಸಲಾಗಿದೆ.

Advertisement

ಜಿಲ್ಲೆಗೆ ಹಕ್ಕಿ ಜ್ವರ ವ್ಯಾಪಿಸದಂತೆ ಪಶುಸಂಗೋಪನೆ ಇಲಾಖೆಯಿಂದ ನಿಗಾ ಇಡಲಾಗಿದೆ. ಹಕ್ಕಿಜ್ವರ ಹರಡದಂತೆ ಸುಳ್ಯದ ಜಾಲ್ಸೂರು, ಬಂಟ್ವಾಳದ ಸಾರಡ್ಕ, ತಲಪಾಡಿಯಲ್ಲಿ‌ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ.

ಮೂರು ಚೆಕ್ ಪೋಸ್ಟ್‌ಗಳಲ್ಲಿ ಕೇರಳದಿಂದ ಬರುವ ಕೋಳಿ ಸಾಗಾಟ ವಾಹನಗಳ ಸ್ಯಾನಿಟೈಜ್ ಮಾಡಲಾಗ್ತಿದೆ. ಅಪರಿಚಿತರನ್ನು ಕೋಳಿ ಸಾಕಣೆ ಕೇಂದ್ರದೊಳಗೆ ಬಿಡದಂತೆ ಕೋಳಿ ಫಾರ್ಮ್ ಮಾಲಕರಿಗೆ ಸೂಚನೆ ನೀಡಲಾಗಿದೆ

Advertisement

ಗಡಿಭಾಗದಲ್ಲಿ ಹರಿಜ್ವರದ ಬಾರದಂತೆ ತಡೆಗಟ್ಟವ ಮುಂಜಾಗ್ರತಾ ಕ್ರಮದ ಬಗ್ಗೆ ಕರಪತ್ರ ವಿತರಣೆ ಮಾಡುತ್ತಿದ್ದಾರೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಕ್ಕಿ ಪ್ರಕರಣ ಕಂಡು ಬಂದಲ್ಲಿ ನಿರ್ಮೂಲನೆ ಮಾಡಲು ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಡಾ ಅನಿಲ್ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ತಿಳಿಸಿದ್ದಾರೆ.

Advertisement
Tags :
Advertisement