For the best experience, open
https://m.newskannada.com
on your mobile browser.
Advertisement

ಹಕ್ಕಿಗೆ ಆಟ ಬೆಕ್ಕಿಗೆ ಸಂಕಟ; ವೈರಲ್ ಆಯ್ತು ವೀಡಿಯೋ

ರಾಜಗಾಂಭೀರ್ಯದೊಂದಿಗೆ ನಡೆದು ಹೋಗುತ್ತಿದ್ದ ಮಾರ್ಜಾಲನಿಗೆ ಪುಟ್ಟ ಹಕ್ಕಿಯೊಂದು ಕಿರಿಕಿರಿ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
08:41 PM Jan 09, 2024 IST | Maithri S
ಹಕ್ಕಿಗೆ ಆಟ ಬೆಕ್ಕಿಗೆ ಸಂಕಟ  ವೈರಲ್ ಆಯ್ತು ವೀಡಿಯೋ

ಕಳ್ಳಹೆಜ್ಜೆಯನ್ನಿಡುತ್ತ ತನ್ನ ಬೇಟೆಯ ಕಡೆ ನಡೆಯುವ ಬೆಕ್ಕಿನ ಬರುವಿಕೆಗೆ ಹಕ್ಕಿ-ಪಕ್ಕಿಗಳು ಬೆಚ್ಚುವುದು ಸಾಮಾನ್ಯ. ಆದರೆ ಅದರ ತದ್ವಿರುದ್ಧವದ ಘಟನೆಯೊಂದು ನಡೆದಿದೆ. ರಾಜಗಾಂಭೀರ್ಯದೊಂದಿಗೆ ನಡೆದು ಹೋಗುತ್ತಿದ್ದ ಮಾರ್ಜಾಲನಿಗೆ ಪುಟ್ಟ ಹಕ್ಕಿಯೊಂದು ಕಿರಿಕಿರಿ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Advertisement

ಮಾರ್ಜಾಲನ ಬೇಟೆಯಾಗಿರುವ ಪುಟ್ಟ ಮ್ಯಾಗ್ಪಿ ಹಕ್ಕಿಯೊಂದು ನಿರ್ಭೀತಿಯಿಂದ ಅದನ್ನು ಹಿಂಬಾಲಿಸುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

ಮನೆಯೊಂದರ ಮುಂದೆ ನಡೆದು ಹೋಗುತ್ತಿದ್ದ ಬೆಕ್ಕಿಗೆ ತನ್ನ ಹಿಂದೆ ಯಾರೋ ಬರುತ್ತಿರುವಂತೆ ಭಾಸವಾಗಿ ತಿರುಗಿದಾಗ ಪುಟ್ಟ ಕಪ್ಪು ಹಕ್ಕಿಯೊಂದು ಕಾಣಿಸುತ್ತದೆ. ಬೆಕ್ಕು ಮುಂದುವರಿದಂತೆ ಹಕ್ಕಿಯ ಹಿಂಬಾಲಿಸುವಿಕೆ ಮುಂದುವರಿಯುತ್ತದೆ. ಈ ಪ್ರಕ್ರಿಯೆಯು ಪದೇಪದೇ ನಡೆಯುತ್ತಿದ್ದು, ವೀಕ್ಷಕರು ಖುಷಿ ಪಟ್ಟು ಹಂಚಿಕೊಳ್ಳುತ್ತಿದ್ದಾರೆ.

Advertisement

ಬೆಕ್ಕಿನ ಬಿರುಸಿನ ನೋಟಕ್ಕೂ ಬೆಚ್ಚದೆ ಹಿಂಬಾಲಿಸುವ ಹಕ್ಕಿಯ ಬಗ್ಗೆ ಜನ ವಿವಿಧ ಬಗೆಯ ಕಾಮೆಂಟ್ ಮಾಡುತ್ತಿದ್ದು, ಅದರ ನಟನೆ ಹಾಗು ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ.

Advertisement
Tags :
Advertisement