For the best experience, open
https://m.newskannada.com
on your mobile browser.
Advertisement

ಮೂರು ಕಾಲು, ನಾಲ್ಕು ಕೈ ಹಾಗೂ ಒಂದು ಶಿಶ್ನವನ್ನು ಹೊಂದಿದ ಸಯಾಮಿ ಅವಳಿ ಮಕ್ಕಳಿಗೆ ಜನ್ಮ

ಒಂದು ದೇಹ ಎರು ಜೀವ ಎಂಬಂತೆ ಮಹಿಳೆಯೊಬ್ಬರು ಮೂರು ಕಾಲು, ನಾಲ್ಕು ಕೈ ಹಾಗೂ ಒಂದು ಶಿಶ್ನವನ್ನು ಹೊಂದಿರುವ ಸಯಾಮಿ ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.
05:20 PM May 16, 2024 IST | Chaitra Kulal
ಮೂರು ಕಾಲು  ನಾಲ್ಕು ಕೈ ಹಾಗೂ ಒಂದು ಶಿಶ್ನವನ್ನು ಹೊಂದಿದ ಸಯಾಮಿ ಅವಳಿ ಮಕ್ಕಳಿಗೆ ಜನ್ಮ

ಇಂಡೋನೇಷ್ಯಾ: ಒಂದು ದೇಹ ಎರು ಜೀವ ಎಂಬಂತೆ ಮಹಿಳೆಯೊಬ್ಬರು ಮೂರು ಕಾಲು, ನಾಲ್ಕು ಕೈ ಹಾಗೂ ಒಂದು ಶಿಶ್ನವನ್ನು ಹೊಂದಿರುವ ಸಯಾಮಿ ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.

Advertisement

ಮಹಿಳೆಯೊಬ್ಬರು 2018 ರಲ್ಲಿ ಇಶಿಯೋಪಾಗಸ್ ಟ್ರಿಪಸ್ ಕಂಜಾಯಿಂಡ್ ಟ್ವಿನ್ಸ್ ಎಂದು ಕರೆಯಲ್ಪಡುವ ಅಪರೂಪದ ಸಯಾಮಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸಾಮಾನ್ಯವಾಗಿ ಇಂತಹ ಸಯಾಮಿ ಅವಳಿ ಜನಿಸಿದರೆ ಶಿಶು ಸಾಯುವಂತಹ ಸಾಧ್ಯತೆಯಿರುತ್ತವೆ. ಆದರೆ ಈ ಅವಳಿ ಮಕ್ಕಳು ಆರೋಗ್ಯಕರವಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಈ ಅವಳಿ ಮಕ್ಕಳು ಮೂರು ಕಾಲುಗಳು, ನಾಲ್ಕು ಕೈ ಹಾಗೂ ಒಂದು ಶಿಶ್ನ, ಒಂದು ಮೂತ್ರ ಕೋಶ, ಗುದನಾಳವನ್ನು ಹೊಂದಿದ್ದು, ಈ ಸ್ಥಿತಿಯಿಂದಾಗಿ ಈ ಅವಳಿ ಮಕ್ಕಳಿಗೆ ಕೂರಲು ಸಾಧ್ಯವಾಗದೆ 3 ವರ್ಷಗಳ ಕಾಲ ಹಾಸಿಗೆಯಲ್ಲಿಯೇ ಮಲಗಬೇಕಾಗಿತ್ತು.

Advertisement

ಇತ್ತೀಚಿಗೆ ವೈದ್ಯರ ತಂಡವೊಂದು ಶಸ್ತ್ರ ಚಿಕಿತ್ಸೆಯ ಮೂಲಕ ಸಯಾಮಿ ಅವಳಿ ಮಕ್ಕಳ ಮೂರನೇ ಕಾಲನ್ನು ತೆಗೆದಿದ್ದಾರೆ. ಮತ್ತು ಸೊಂಟದ ಮೂಲೆಗಳನ್ನು ಸರಿಪಡಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಿ, ಅವರು ಸರಿಯಾಗಿ ಕುಳಿತುಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ.

50 ಸಾವಿರದಿಂದ 2 ಲಕ್ಷ ಗರ್ಭಾಧಾರಣೆಗಳಲ್ಲಿ ಒಂದು ಇಂತಹ ಪ್ರಕರಣಗಳು ಕಾಣಿಸಿಕೊಳ್ಳುತ್ತವೆ. ಗರ್ಭಾಶಯದಲ್ಲಿ ಒಂದು ಫಲವತ್ತಾದ ಮೊಟ್ಟೆ ವಿಭಜನೆಗೊಂಡು ಎರಡು ಭಾಗವಾಗಿ ಬೆಳವಣಿಗೆ ಹೊಂದಲು ಆರಂಭಿಸಿದಾಗ ಸಯಾಮಿ ಅವಳಿ ಮಕ್ಕಳು ಜನಿಸುತ್ತವೆ.

Advertisement
Tags :
Advertisement