ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬಿಜೆಪಿ ಮುಕ್ತ ಭಾರತ ಆಗುತ್ತಿದೆ: ದಿನೇಶ್‌ ಗುಂಡೂರಾವ್‌

ಬಿಜೆಪಿ ತ್ಯಜಿಸಲು ಕಾರಣ ಯಾರು ಎಂದು ಜಗದೀಶ್ ಶೆಟ್ಟರ್ ಆವತ್ತೇ ಸ್ಪಷ್ಟನೆ ನೀಡಿದ್ದಾರೆ.
11:53 AM Dec 02, 2023 IST | Ramya Bolantoor

ಮಂಗಳೂರು: ಬಿಜೆಪಿ ತ್ಯಜಿಸಲು ಕಾರಣ ಯಾರು ಎಂದು ಜಗದೀಶ್ ಶೆಟ್ಟರ್ ಆವತ್ತೇ ಸ್ಪಷ್ಟನೆ ನೀಡಿದ್ದಾರೆ. ಆದರೂ ಕೂಡ ದಾರಿ ತಪ್ಪಿಸುವ ಹೇಳಿಕೆ ನೀಡುವುದರಲ್ಲಿ ನಿಸ್ಸೀಮರಾಗಿರುವ ಈಶ್ವರಪ್ಪ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದರು.

Advertisement

ಇದೀಗ ಈಶ್ವರಪ್ಪ ಅವರಿಗೆ ಅವರ ತಪ್ಪುಗಳು ಅವರಿಗೆ ಅರ್ಥ ಆಗ್ತಾ ಇದೆ. ಹಾಗಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿಯವರು ಅಪರೇಷನ್ ಕಮಲ ಕೂಡ ಮಾಡುತ್ತಾರೆ. ಅದೇ ರೀತಿ ತಮ್ಮ ಪಕ್ಷದಲ್ಲಿರುವವರನ್ನು ಕಳುಹಿಸುತ್ತಾರೆ ಎಂದರು. ಪಂಚರಾಜ್ಯ ಚುನಾವಣೆ ಫಲಿತಾಂಶ ಬಗ್ಗೆ ಮಾತನಾಡಿದ ದಿನೇಶ್‌, ಪಂಚ ರಾಜ್ಯ ಚುನಾವಣೆಗಳಲ್ಲಿ ‌ಕಾಂಗ್ರೆಸ್ ಎಲ್ಲ ಕಡೆ ತೀವ್ರ ಪೈಪೋಟಿ ಕೊಟ್ಟಿದೆ.

ಆದರೆ ಬಿಜೆಪಿಯವರು ಕಾಂಗ್ರೆಸ್ ಮುಕ್ತ ಎಂದು ಹೇಳಿಕೊಂಡು ಅವರೇ ಎಲ್ಲ ಕಡೆಯಿಂದ ಮುಕ್ತ ಆಗುತ್ತಿದ್ದಾರೆ. ಸದ್ಯ‌ಕ್ಕೆ ದ.ಕ ಭಾರತದಲ್ಲಿ ಬಿಜೆಪಿ ಮುಕ್ತ ಆಗಿದೆ ಎಂದರು. ಹೀಗಾಗಿ ಇವರು ಮುಕ್ತ ಅನ್ನೋ ಮಾತು ಬಿಡಲಿ, ಬಿಜೆಪಿಯೇ ಮುಕ್ತ‌ ಆಗುತ್ತಿದೆ. ಬಿಜೆಪಿ ಅಹಂಕಾರದ ಮಾತುಗಳನ್ನು ಬಿಟ್ಟು ಬಿಡಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಇರಬೇಕು . ಸರ್ವಾಧಿಕಾರ ಮತ್ತು ಪ್ರಶ್ನಾತೀತ ಯೋಚನೆ ಇರಬಾರದು. ಇದೀಗ ಜನರು ಈ ಕುರಿತು ಪ್ರಶ್ನೆ ಮಾಡಲು ಶುರು ಮಾಡಿದ್ದಾರೆ ಎಂದು ಹೇಳಿದ್ದಾರೆ.

Advertisement

Advertisement
Tags :
BJPCongressKARNATAKALatestNewsminsterNewsKannadaದಿನೇಶ್ ಗುಂಡೂರಾವ್ಮಂಗಳೂರು
Advertisement
Next Article