For the best experience, open
https://m.newskannada.com
on your mobile browser.
Advertisement

ಮಾವನ ಬಗ್ಗೆ ಕೇಳಿದ್ದಕ್ಕೆ ಧಮ್ಕಿ ಹಾಕಿದ ಜಡೇಜಾ ಪತ್ನಿ ರಿವಾಬಾ: ವಿಡಿಯೋ ವೈರಲ್‌

ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ತಂದೆ ಅನಿರುದ್ಧ ಸಿನ್ಹ, ತಮ್ಮ ಮಗ ಮತ್ತು ಸೊಸೆ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಸೊಸೆ ಬಂದ ಮೇಲೆ ಮಗ ನನ್ನಿಂದ ದೂರ ಆಗಿದ್ದಾನೆ. ಅದಕ್ಕೆಲ್ಲ ಕಾರಣ ಸೊಸೆ ರಿವಾಬಾ ಜಡೇಜಾ ಎಂದು ಸಂದರ್ಶನ ಒಂದರಲ್ಲಿ ಗಂಭೀರ ಆರೋಪ ಮಾಡಿದ್ದರು.
05:54 PM Feb 12, 2024 IST | Ashitha S
ಮಾವನ ಬಗ್ಗೆ ಕೇಳಿದ್ದಕ್ಕೆ  ಧಮ್ಕಿ ಹಾಕಿದ ಜಡೇಜಾ ಪತ್ನಿ ರಿವಾಬಾ  ವಿಡಿಯೋ ವೈರಲ್‌

ಗುಜರಾತ್: ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ತಂದೆ ಅನಿರುದ್ಧ ಸಿನ್ಹ, ತಮ್ಮ ಮಗ ಮತ್ತು ಸೊಸೆ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಸೊಸೆ ಬಂದ ಮೇಲೆ ಮಗ ನನ್ನಿಂದ ದೂರ ಆಗಿದ್ದಾನೆ. ಅದಕ್ಕೆಲ್ಲ ಕಾರಣ ಸೊಸೆ ರಿವಾಬಾ ಜಡೇಜಾ ಎಂದು ಸಂದರ್ಶನ ಒಂದರಲ್ಲಿ ಗಂಭೀರ ಆರೋಪ ಮಾಡಿದ್ದರು.

Advertisement

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗುಜರಾತ್ ಮಾಧ್ಯಮಗಳು ರಿವಾಬಾರ ಪ್ರತಿಕ್ರಿಯೆಗೆ ಮುಂದಾಗಿದ್ದವು. ಈ ವೇಳೆ ಮಾಧ್ಯಮದ ಪ್ರತಿನಿಧಿ ವಿರುದ್ಧ ಜಡೇಜಾ ಪತ್ನಿ ಕಿಡಿಕಾರಿದ್ದಾರೆ. ಮಾಧ್ಯಮಗೋಷ್ಟಿ ವೇಳೆ ಆಕ್ರೋಶ ಸಿಡಿಮಿಡಿಗೊಂಡು ಪ್ರತಿಕ್ರಿಯಿಸಿದ ರಿವಾಬಾ.. ‘ನಾವು ಯಾಕೆ ಇಲ್ಲಿಗೆ ಬಂದಿದ್ದೇವೆ?, ಅದರ ಬಗ್ಗೆ ನೀವು ತಿಳಿದುಕೊಳ್ಳಬೇಕು .ಇದಕ್ಕೆ ಉತ್ತರಿಸಬೇಕಾದರೇ ನನ್ನನ್ನು ಡೈರೆಕ್ಟ್ ಆಗಿ ಭೇಟಿಯಾಗು’ ಎಂದು ಧಮ್ಕಿ ಹಾಕಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಜಡೇಜಾ ಪತ್ನಿ ಬಿಜೆಪಿಯ ಶಾಸಕರಾಗಿದ್ದಾರೆ. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಜಮ್ನಾನಗರದಿಂದ ಸ್ಪರ್ಧಿಸಿ ಶಾಸಕರಾಗಿದ್ದಾರೆ.

Advertisement

https://www.instagram.com/p/C3Kb5pbJIOR/?utm_source=ig_embed&utm_campaign=embed_video_watch_again

Advertisement
Tags :
Advertisement