ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ದಕ್ಷಿಣ ಕನ್ನಡದಲ್ಲಿ ಬಿಜೆಪಿಯಿಂದ ಈ ಬಾರಿ ಒಬ್ಬಂಟಿ ಹೋರಾಟ

ದಕ್ಷಿಣ ಕನ್ನಡದಲ್ಲಿ ಬಿಜೆಪಿಯಿಂದ ಈ ಬಾರಿ ಒಬ್ಬಂಟಿ ಹೋರಾಟಕ್ಕೆ ಮುಂದಾಗಿದೆ. ಕಾರಣ ಬಿಜೆಪಿ ಸೋಲಿಸಲು ಎಡ ಪಕ್ಷಗಳು ಕಾಂಗ್ರೆಸ್ ಬೆನ್ನಿಗೆ ನಿಂತಿವೆ. ಬಿಜೆಪಿ ವಿರುದ್ಧ ಸಿಪಿಐಎಂ ಭರ್ಜರಿ ಪ್ರಚಾರ ನಡೆಸಲು ಮುಂದಾಗಿದೆ.
10:07 AM Apr 08, 2024 IST | Ashika S

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಬಿಜೆಪಿಯಿಂದ ಈ ಬಾರಿ ಒಬ್ಬಂಟಿ ಹೋರಾಟಕ್ಕೆ ಮುಂದಾಗಿದೆ. ಕಾರಣ ಬಿಜೆಪಿ ಸೋಲಿಸಲು ಎಡ ಪಕ್ಷಗಳು ಕಾಂಗ್ರೆಸ್ ಬೆನ್ನಿಗೆ ನಿಂತಿವೆ. ಬಿಜೆಪಿ ವಿರುದ್ಧ ಸಿಪಿಐಎಂ ಭರ್ಜರಿ ಪ್ರಚಾರ ನಡೆಸಲು ಮುಂದಾಗಿದೆ.

Advertisement

ಇನ್ನು ಬಿಜೆಪಿಯನ್ನು ಸೋಲಿಸಲು ಎಸ್ ಡಿ ಪಿ ಐ ಸ್ಪರ್ಧೆಯಿಂದ ಹಿಂದೆ ಸರಿದಿದೆ. ಹೀಗಾಗಿ ಈ ಬಾರಿ ಎಸ್ ಡಿ ಪಿ ಐ ಮತಗಳು ನೇರವಾಗಿ ಕಾಂಗ್ರೆಸ್ ತೆಕ್ಕೆಗೆ ಬೀಳಲಿದೆ. ಹೀಗಾಗಿ ಇತ್ತ ಬಿಜೆಪಿ ಈ ಬಾರಿ ಒಬ್ಬಂಟಿ ಹೋರಾಟ ನಡೆಸಲಿದೆ.

ಮೈತ್ರಿ ಪಕ್ಷ ಜೆ ಡಿಎಸ್ ಇದ್ದರೂ , ದಕ್ಷಿಣ ಕನ್ನಡದಲ್ಲಿ ಅಷ್ಟರ ಮಟ್ಟಿಗೆ ಜೆಡಿಎಸ್ ಪ್ರಭಾವ ಹೊಂದಿಲ್ಲ. ದ. ಕದಲ್ಲಿ ಎನ್ ಡಿಎ ಹಾಗು ಐಎನ್ ಡಿ ಎ ನಡುವೆ ತೀವ್ರ ಸೆಣೆಸಾಟ ನಡೆಯುತ್ತಿದೆ. ಬಿಜೆಪಿ ಸೋಲಿಸಲೇ ಬೇಕು ಎಂದು ಎಡ ಪಕ್ಷಗಳು ಪಣ ತೊಟ್ಟಿವೆ.

Advertisement

ಹೀಗಾಗಿ ಕಮ್ಯುನಿಸ್ಟ್ ಪಕ್ಷದಿಂದ ಚುನಾವಣಾ ಪ್ರಚಾರ ತೀವ್ರಗೊಂಡಿದೆ. ಇತ್ತ ಸ್ಪರ್ಧೆಯಿಂದ ಹಿಂದೆ ಸರಿದರೂ, ಕಾಂಗ್ರೆಸ್ ಬೆಂಬಲಿಸುವ ಬಗ್ಗೆ ಎಸ್ ಡಿ ಪಿ ಐ ಯಾವುದೇ ನಿಲುವು ತೋರಿಲ್ಲ. ಬಿಜೆಪಿಯನ್ನ ಸೋಲಿಸುವುದಷ್ಟೇ ನಮ್ಮ ಗುರಿ. ಬಿಜೆಪಿಯ ಫ್ಯಾಸಿಸ್ಟ್ ರಾಜಕಾರಣ ಅಂತ್ಯವಾಗಬೇಕು. ಭಾರತದ ಸಂವಿಧಾನದ ಆಶಯಗಳಿಗೆ ಧಕ್ಕೆಯಾಗಬಾರದು. ಈ ಹಿನ್ನಲೆ ನಾವು ಸ್ಪರ್ಧೆಯಿಂದ ಸರಿಯುವ ಮೂಲಕ ಬಿಜೆಪಿ ವಿರುದ್ಧ ಹೋರಾಡಲಿದ್ದೇವೆ ಎಂದು ದಕ್ಷಿಣ ಕನ್ನಡ ಎಸ್ ಡಿ ಪಿ ಜಿಲ್ಲಾಧ್ಯಾಕ್ಷ ಅನ್ವರ್ ಸಾದಾತ್ ಬಜತ್ತೂರು ಪ್ರತಿಕ್ರಿಯೆ ನೀಡಿದ್ದಾರೆ.

Advertisement
Tags :
2024 LOKSABHA ELECTIONBJPDAKSHINA KANNADALatetsNewsNewsKarnataka
Advertisement
Next Article