For the best experience, open
https://m.newskannada.com
on your mobile browser.
Advertisement

ರೈತ ಸಂಘಟನೆಗಳಿಂದ ಭಾರತ್ ಬಂದ್ ಗೆ ಕರೆ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

ಬೆಳೆಗೆ ಕನಿಷ್ಠ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಫೆ.೧೬ರಂದ ರೈತ ಸಂಘಟನೆಗಳ ಒಕ್ಕೂಟ ಭಾರತ್ ಬಂದ್ ಮಾಡಲು ಮುಂದಾಗಿದೆ.
06:31 PM Jan 24, 2024 IST | Maithri S
ರೈತ ಸಂಘಟನೆಗಳಿಂದ ಭಾರತ್ ಬಂದ್ ಗೆ ಕರೆ  ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

ನವದೆಹಲಿ: ಬೆಳೆಗೆ ಕನಿಷ್ಠ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಫೆ.೧೬ರಂದ ರೈತ ಸಂಘಟನೆಗಳ ಒಕ್ಕೂಟ ಭಾರತ್ ಬಂದ್ ಮಾಡಲು ಮುಂದಾಗಿದೆ.

Advertisement

ಈ ಕುರಿತು ನೋಯ್ಡಾದಲ್ಲಿ ಮಾಹಿತಿ ನೀಡಿದ ಭಾರತ ರಾಷ್ಟ್ರೀಯ ಕಿಸಾನ್ ಯೂನಿಯನ್ (BKU)ನ ವಕ್ತಾರ ರಾಕೇಶ್ ಟಿಕಾಯತ್, ರೈತರ ಬಹುದಿನದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಾವು ಬಂದ್ ಗೆ ಕರೆ ಕೊಟ್ಟಿದ್ದೇವೆ. ಅಂದು ರೈತರು ಹೊಲಗಳಿಗೆ ಹೋಗದೆ ಬಂದ್ ನಲ್ಲಿ ಭಾಗವಹಿಸುತ್ತಾರೆ. ಈ ಮೂಲಕ ದೊಡ್ಡ ಸಂದೇಶ ರವಾನೆಯಾಗಲಿದ್ದು, ವ್ಯಾಪಾರಿಗಳೂ ಸಹ ತಮ್ಮ ವ್ಯಾಪರವನ್ನು ಸ್ಥಗಿತಗೊಳಿಸಬೇಕು ಎಂದು ಕೇಳಿಕೊಂಡಿದ್ದಾರೆ.

ಬಂದ್ ಗೆ ರೈತ ಸಂಘಟನೆಗಳು, ವ್ಯಾಪಾರಿಗಳು ಮತ್ತು ಸಾರಿಗೆ ಸಂಸ್ಥೆಗಳ ಬೆಂಬಲ ಬೇಕೆಂದು ಅವರು ಮನವಿ ಮಾಡಿದ್ದಾರೆ.

Advertisement

ರೈತರ ಬೆಳೆಗೆ ಸರ್ಕಾರದಿಂದ ಸಿಗಬೇಕಾದ ಕನಿಷ್ಠ ಬೆಂಬಲ ಬೆಲೆ(MSP), ನಿರುದ್ಯೋಗ, ಅಗ್ನಿವೀರ್ ಯೋಜನೆಗೆ ವಿರೋಧ ಮತ್ತು ನಿವೃತ್ತರಾದವರಿಗೆ ಪಂಚಣೆ ಸಿಗದಿರುವುದು ಇತ್ಯಾದಿ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ನೀಡಲಾದ ಬಂದ್ ಕರೆಗೆ ರೈತ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿದ್ದಾವೆ.

Advertisement
Tags :
Advertisement