For the best experience, open
https://m.newskannada.com
on your mobile browser.
Advertisement

2 ವರ್ಷದಲ್ಲಿ ಕಪ್ಪು ಬಣ್ಣದಿಂದ ಬಿಳಿ ಬಣ್ಣಕ್ಕೆ ತಿರುಗಿದ ನಾಯಿ !

ಕೆಲವು ರೋಗಗಳು ಮನುಷ್ಯರಲ್ಲಿ ಮಾತ್ರವಲ್ಲದೆ ವಿವಿಧ ರೀತಿಯ ಪ್ರಾಣಿಗಳಲ್ಲಿಯೂ ಕಂಡುಬರುತ್ತವೆ. ಪ್ರಸ್ತುತ ವಿಚಾರ ನೋಡುವುದಾದರೇ ಹೌದು ಎರಡು ವರ್ಷದ ಹಿಂದೆ ಕಪ್ಪು ಬಣ್ಣದಲ್ಲಿದ್ದ ಶ್ವಾನವೊಂದು ಇದೀಗ ಸಂಪೂರ್ಣವಾಗಿ ಬಿಳಿ ಬಣ್ಣಕ್ಕೆ ತಿರುಗಿದೆ.
12:49 PM May 01, 2024 IST | Ashitha S
2 ವರ್ಷದಲ್ಲಿ ಕಪ್ಪು ಬಣ್ಣದಿಂದ ಬಿಳಿ ಬಣ್ಣಕ್ಕೆ ತಿರುಗಿದ ನಾಯಿ

ವೈರಲ್:‌ ಕೆಲವು ರೋಗಗಳು ಮನುಷ್ಯರಲ್ಲಿ ಮಾತ್ರವಲ್ಲದೆ ವಿವಿಧ ರೀತಿಯ ಪ್ರಾಣಿಗಳಲ್ಲಿಯೂ ಕಂಡುಬರುತ್ತವೆ. ಪ್ರಸ್ತುತ ವಿಚಾರ ನೋಡುವುದಾದರೇ ಹೌದು ಎರಡು ವರ್ಷದ ಹಿಂದೆ ಕಪ್ಪು ಬಣ್ಣದಲ್ಲಿದ್ದ ಶ್ವಾನವೊಂದು ಇದೀಗ ಸಂಪೂರ್ಣವಾಗಿ ಬಿಳಿ ಬಣ್ಣಕ್ಕೆ ತಿರುಗಿದೆ.

Advertisement

ಈ ಶ್ವಾನ ವಿಟಲಿಗೋ ರೋಗಕ್ಕೆ ತುತ್ತಾಗಿ ಕೇವಲ ಎರಡು ವರ್ಷಗಳಲ್ಲಿ ಕಪ್ಪು ಬಣ್ಣದಿಂದ ಬಿಳಿ ಬಣ್ಣಕ್ಕೆ ತಿರುಗಿದೆ ಎಂದು ತಿಳಿದುಬಂದಿದೆ. ಆಡಿಟಿ ಸೆಂಟ್ರಲ್ ವೆಬ್‌ಸೈಟ್‌ನ ವರದಿಯ ಪ್ರಕಾರ, 2021 ರಲ್ಲಿ ಈ ನಾಯಿಗೆ ವಿಟಲಿಗೋ ರೋಗವಿರುವುದು ಪತ್ತೆ ಮಾಡಲಾಯಿತು.

ವಿಟಲಿಗೋ ಚರ್ಮದ ಕಾಯಿಲೆಯಾಗಿದ್ದು , ಮೆಲನಿನ್ ಉತ್ಪಾದಿಸಲು ಕಾರಣವಾಗುವ ಮೆಲನೋಸೈಟ್ಗಳು ನಾಶವಾದಾಗ ಚರ್ಮದಲ್ಲಿ ಈ ಬದಲಾವಣೆಗಳು ಸಂಭವಿಸುತ್ತದೆ. ಮೆಲನಿನ್ ಎಂಬುದು ಚರ್ಮ, ಕೂದಲು ಮತ್ತು ಕಣ್ಣುಗಳಿಗೆ ಬಣ್ಣವನ್ನು ನೀಡುವ ಪ್ರಮುಖ ಕೆಲಸವನ್ನು ನಿರ್ವಹಿಸುತ್ತದೆ.

Advertisement

ಮೆಲನೋಸೈಟ್ ನಷ್ಟದ ಪರಿಣಾಮವಾಗಿ, ಮುಖ, ಕೈಗಳು, ಪಾದಗಳು ಮತ್ತು ಜನನಾಂಗಗಳು ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ತೆಳು ಅಥವಾ ಬಿಳಿ ತೇಪೆಗಳು ಕಾಣಿಸಿಕೊಳ್ಳುತ್ತವೆ. ಇದು ದೀರ್ಘಕಾಲದ ಕಾಯಿಲೆಯಾಗಿದ್ದರೂ ಸಹ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ.

ನಾಯಿಯ ಮಾಲೀಕರಾದ ಮ್ಯಾಟ್ ಸ್ಮಿತ್ ಅವರು ತಮ್ಮ ನಾಯಿಯ ಕಾಯಿಲೆಯ ಬಗ್ಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ರೆಡ್ಡಿಟ್‌ನಲ್ಲಿ ಪೋಸ್ಟ್ ಅನ್ನು ಸಹ ಹಂಚಿಕೊಂಡಿದ್ದಾರೆ. ಇದರಲ್ಲಿ ಎರಡು ವರ್ಷಗಳಲ್ಲಿ ನಾಯಿ ಸಂಪೂರ್ಣವಾಗಿ ಬಣ್ಣ ಬದಲಾಯಿಸಿಕೊಂಡಿರುವ ಫೋಟೋಗಳನ್ನು ಕಾಣಬಹುದು.

Advertisement
Tags :
Advertisement