ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕೇರಳದ ಬಾಂಬ್ ಸ್ಫೋಟದ ಆರೋಪಿ ಅಸಾಧಾರಣ ಬುದ್ಧಿವಂತ: ಪೊಲೀಸ್‌ ಮಾಹಿತಿ

ಕೊಚ್ಚಿ: ಮೂರು ದಿನಗಳ ಹಿಂದೆ ಕ್ರಿಶ್ಚಿಯನ್ ಪ್ರಾರ್ಥನಾ ಸಭೆಯೊಂದರಲ್ಲಿ ಸ್ಫೋಟ ನಡೆಸಿ ಆಮೇಲೆ ಪೊಲೀಸರಿಗೆ ಶರಣಾಗಿದ್ದ ಡೊಮಿನಿಕ್ ಮಾರ್ಟಿನ್ ತುಂಬ ಬುದ್ಧಿವಂತ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಆತ ಗಲ್ಫ್ ನಲ್ಲಿದ್ದ ಒಳ್ಳೆಯ ಕೆಲಸ ತೊರೆದಿದ್ದ, ಇದು ಆತನ ಉದ್ದೇಶಗಳನ್ನು ಪ್ರಶ್ನಿಸುವಂತೆ ಮಾಡಿದೆ. ಭಾನುವಾರ ಸ್ಫೋಟದ ಕೆಲವು ಗಂಟೆಗಳ ನಂತರ ಶರಣಾಗಿದ್ದ ಮಾರ್ಟಿನ್‌ನ ಬಂಧನವನ್ನು ಪೊಲೀಸರು ಸೋಮವಾರ ಔಪಚಾರಿಕವಾಗಿ ದಾಖಲಿಸಿದ್ದರು.
01:16 PM Nov 01, 2023 IST | Ashitha S

ಕೊಚ್ಚಿ: ಮೂರು ದಿನಗಳ ಹಿಂದೆ ಕ್ರಿಶ್ಚಿಯನ್ ಪ್ರಾರ್ಥನಾ ಸಭೆಯೊಂದರಲ್ಲಿ ಸ್ಫೋಟ ನಡೆಸಿ ಆಮೇಲೆ ಪೊಲೀಸರಿಗೆ ಶರಣಾಗಿದ್ದ ಡೊಮಿನಿಕ್ ಮಾರ್ಟಿನ್ ತುಂಬ ಬುದ್ಧಿವಂತ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಆತ ಗಲ್ಫ್ ನಲ್ಲಿದ್ದ ಒಳ್ಳೆಯ ಕೆಲಸ ತೊರೆದಿದ್ದ, ಇದು ಆತನ ಉದ್ದೇಶಗಳನ್ನು ಪ್ರಶ್ನಿಸುವಂತೆ ಮಾಡಿದೆ. ಭಾನುವಾರ ಸ್ಫೋಟದ ಕೆಲವು ಗಂಟೆಗಳ ನಂತರ ಶರಣಾಗಿದ್ದ ಮಾರ್ಟಿನ್‌ನ ಬಂಧನವನ್ನು ಪೊಲೀಸರು ಸೋಮವಾರ ಔಪಚಾರಿಕವಾಗಿ ದಾಖಲಿಸಿದ್ದರು.

Advertisement

ಮಾರ್ಟಿನ್ ಭಾನುವಾರ ಪೊಲೀಸರ ಮುಂದೆ ಶರಣಾದಾಗ, ಆತ ಖರೀದಿಸಿದ ಸಾಮಗ್ರಿಗಳ ಬಿಲ್‌ಗಳನ್ನು ನೀಡಿದ್ದ , ಇದು ಆತನ ವಿರುದ್ಧದ ಪ್ರಕರಣವನ್ನು ಮತ್ತಷ್ಟು ಬಲಪಡಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ಫೋಟಕ ಮಾಡಲು ಪೆಟ್ರೋಲ್ ಖರೀದಿಯ ಬಿಲ್‌ಗಳು ಅವರು ತಯಾರಿಸಿದ ದಾಖಲೆಗಳಲ್ಲಿ ಸೇರಿವೆ.

ʼಅಸಾಧಾರಣ ಬುದ್ಧಿವಂತಿಕೆ ಮತ್ತು ಶ್ರದ್ಧೆಯʼ ವ್ಯಕ್ತಿ ಆತ. ಅಂತಹ ಆಘಾತಕಾರಿ ಕೃತ್ಯಕ್ಕಾಗಿ ಹೆಚ್ಚಿನ ಸಂಭಾವನೆ ಪಡೆಯುವ ಕೆಲಸವನ್ನು ತ್ಯಜಿಸುವ ಮಾರ್ಟಿನ್ ನಿರ್ಧಾರವು ಅಧಿಕಾರಿಗಳನ್ನು ಗೊಂದಲಕ್ಕೀಡು ಮಾಡಿದೆ. ಎಲೆಕ್ಟ್ರಾನಿಕ್ಸ್‌ನಲ್ಲಿ ಆತನಿಗೆ ಪ್ರಾವೀಣ್ಯತೆ ಇದೆ ಎಂದಿದ್ದಾರೆ ಪೊಲೀಸರು.

Advertisement

Advertisement
Tags :
indiaKARNATAKALatestNewsLatetsNewsNewsKannadaಕೇರಳಬಾಂಬ್ ಸ್ಫೋಟಬೆಂಗಳೂರು
Advertisement
Next Article