For the best experience, open
https://m.newskannada.com
on your mobile browser.
Advertisement

‘ರವಿಕೆ ಪ್ರಸಂಗ’ ಸಿನಿಮಾಗೆ ‘ಯು/ಎ’ ಪ್ರಮಾಣಪತ್ರ

‘ರವಿಕೆ ಪ್ರಸಂಗ’ ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಮುಗಿದಿದ್ದು, ‘ಯು/ಎ’ ಪ್ರಮಾಣಪತ್ರ ಪಡೆದುಕೊಂಡಿದೆ. ಈ ಸಿನಿಮಾವನ್ನು ಸಂತೋಷ್ ಕೊಡೆಂಕೇರಿ ನಿರ್ದೇಶನ ಮಾಡಿದ್ದು, ‘ದೃಷ್ಟಿ ಮೀಡಿಯಾ ಪ್ರೊಡಕ್ಷನ್’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ.
08:18 PM Feb 02, 2024 IST | Gayathri SG
‘ರವಿಕೆ ಪ್ರಸಂಗ’ ಸಿನಿಮಾಗೆ ‘ಯು ಎ’ ಪ್ರಮಾಣಪತ್ರ

‘ರವಿಕೆ ಪ್ರಸಂಗ’ ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಮುಗಿದಿದ್ದು, ‘ಯು/ಎ’ ಪ್ರಮಾಣಪತ್ರ ಪಡೆದುಕೊಂಡಿದೆ. ಈ ಸಿನಿಮಾವನ್ನು ಸಂತೋಷ್ ಕೊಡೆಂಕೇರಿ ನಿರ್ದೇಶನ ಮಾಡಿದ್ದು, ‘ದೃಷ್ಟಿ ಮೀಡಿಯಾ ಪ್ರೊಡಕ್ಷನ್’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ.

Advertisement

ಈಗಾಗಲೇ ‘ರವಿಕೆ ಪ್ರಸಂಗ’ ಟ್ರೇಲರ್​ ಬಿಡುಗಡೆ ಆಗಿದ್ದು ಜನಮೆಚ್ಚುಗೆ ಪಡೆದಿದೆ. ಇನ್ನು ಈ ಸಿನಿಮಾ ಫೆಬ್ರವರಿ 16ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಗೀತಾ ಭಾರತಿ ಭಟ್ ನಟಿಸಿದ್ದಾರೆ. ‘ಮಾರ್ಸ್​ ಡಿಸ್ಟ್ರಿಬ್ಯುಟರ್ಸ್’ ಮೂಲಕ ಈ ಸಿನಿಮಾ ಬಿಡುಗಡೆ ಆಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುತ್ತಮುತ್ತ ಶೂಟಿಂಗ್​ ಮಾಡಲಾಗಿದೆ. ಈ ಚಿತ್ರಕ್ಕೆ ಪಾವನಾ ಸಂತೋಷ್ ಕಥೆ, ಸಂಭಾಷಣೆ ಬರೆದಿದ್ದಾರೆ.

ಮಹಿಳೆಯರಿಗೆ ಸೀರೆ ಅಂದರೆ ಇಷ್ಟ. ಸೀರೆ ರೀತಿ ಬ್ಲೌಸ್ ಕೂಡ ಚೆನ್ನಾಗಿರಬೇಕು. ಅದಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿ ರವಿಕೆ ಹೊಲಿಸಲಾಗುತ್ತದೆ. ರವಿಕೆ ಪರ್ಫೆಕ್ಟ್ ಆಗಿ ಇರಬೇಕು ಎಂದು ಹೆಣ್ಮಕ್ಕಳು ಭಾರಿ ಕಾಳಜಿ ವಹಿಸುತ್ತಾರೆ. ಇಂಥ ಒಂದು ವಿಷಯವನ್ನು ಕಾಮಿಡಿ ಶೈಲಿಯಲ್ಲಿ ಹೇಳಲು ಪ್ರಯತ್ನಿಸಲಾಗಿದೆ.

Advertisement

Advertisement
Tags :
Advertisement