For the best experience, open
https://m.newskannada.com
on your mobile browser.
Advertisement

ನೋಡ ನೋಡುತ್ತಿದ್ದಂತೆ ಧಗಧಗನೆ ಹೊತ್ತಿ ಉರಿದ 30 ಜನ ಪ್ರಯಾಣಿಕರಿದ್ದ ಬಿಎಂಟಿಸಿ ಬಸ್​

ಇಂದು ಬೆಳಗ್ಗೆ 8:50ರ ಸಮಾರಿಗೆ ನಗರದ ಎಂ.ಜಿ ರೋಡ್​ನ ಅನಿಲ್​ ಕುಂಬ್ಳೆ ಸರ್ಕಲ್​ ಬಳಿ 144ಈ ಮಾರ್ಗದ ಬಿಎಂಟಿಸಿ ಬಸ್​ವೊಂದು ದಿಢೀರ್​ ಅಗ್ನಿಗೆ ಆಹುತಿಯಾಗಿದೆ.
10:53 AM Jul 09, 2024 IST | Ashitha S
ನೋಡ ನೋಡುತ್ತಿದ್ದಂತೆ ಧಗಧಗನೆ ಹೊತ್ತಿ ಉರಿದ 30 ಜನ ಪ್ರಯಾಣಿಕರಿದ್ದ ಬಿಎಂಟಿಸಿ ಬಸ್​

ಬೆಂಗಳೂರು: ಇಂದು ಬೆಳಗ್ಗೆ 8:50ರ ಸಮಾರಿಗೆ ನಗರದ ಎಂ.ಜಿ ರೋಡ್​ನ ಅನಿಲ್​ ಕುಂಬ್ಳೆ ಸರ್ಕಲ್​ ಬಳಿ 144ಈ ಮಾರ್ಗದ ಬಿಎಂಟಿಸಿ ಬಸ್​ವೊಂದು ದಿಢೀರ್​ ಅಗ್ನಿಗೆ ಆಹುತಿಯಾಗಿದೆ. ಬಸ್​ನಲ್ಲಿ 30 ಜನ ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.

Advertisement

ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೇ ಎಲ್ಲಾ ಪ್ರಯಾಣಿಕರನ್ನು ಬಸ್​ನಿಂದ ಕೆಳಗಿಳಿಸಿದ ಚಾಲಕ ಮತ್ತು ನಿರ್ವಾಹಕ, ತಕ್ಷಣವೇ ಸ್ಥಳದಿಂದ ದೂರ ಓಡಿದ್ದಾರೆ. ಕ್ಷಣಮಾತ್ರದಲ್ಲಿ ಬಸ್​ ಧಗಧಗನೆ ಹೊತ್ತಿ ಉರಿದ ದೃಶ್ಯ ಸ್ಥಳೀಯರ ಕ್ಯಾಮರಾದಲ್ಲಿ ಸೆರೆಯಾಗಿದೆ.

Advertisement
Advertisement
Tags :
Advertisement