For the best experience, open
https://m.newskannada.com
on your mobile browser.
Advertisement

25ನೇ ತಾರೀಕಿನಿಂದ 5,8,9, 11ನೇ ತರಗತಿಗಳಿಗೆ ಬೋರ್ಡ್​​ ಎಕ್ಸಾಮ್ ಪ್ರಾರಂಭ

ರಾಜ್ಯದ ಪಠ್ಯಕ್ರಮ ಅನುಸರಿಸುವ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ 5,8,9, 11ನೇ ತರಗತಿಗಳಿಗೆ ಕರ್ನಾಟಕ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್​ ಗ್ರೀನ್​ ಸಿಗ್ನಲ್​ ನೀಡಿದೆ.
07:52 PM Mar 22, 2024 IST | Ashika S
25ನೇ ತಾರೀಕಿನಿಂದ 5 8 9  11ನೇ ತರಗತಿಗಳಿಗೆ ಬೋರ್ಡ್​​ ಎಕ್ಸಾಮ್ ಪ್ರಾರಂಭ

ಬೆಂಗಳೂರು: ರಾಜ್ಯದ ಪಠ್ಯಕ್ರಮ ಅನುಸರಿಸುವ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ 5,8,9, 11ನೇ ತರಗತಿಗಳಿಗೆ ಕರ್ನಾಟಕ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್​ ಗ್ರೀನ್​ ಸಿಗ್ನಲ್​ ನೀಡಿದೆ.

Advertisement

25ನೇ ತಾರೀಕಿನಿಂದ ಬೋರ್ಡ್​​ ಎಕ್ಸಾಮ್​ ನಡೆಸುವುದಾಗಿ ಶಿಕ್ಷಣ ಇಲಾಖೆ ಹೇಳಿದೆ. ಇನ್ನು, 25ನೇ ತಾರೀಕಿನಿಂದ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯಲಿದೆ. ಎಸ್​ಎಸ್​ಎಲ್​ಸಿ ಪರೀಕ್ಷೆ ಇಲ್ಲದ ದಿನ ಬೆಳಿಗ್ಗೆ ಬೋರ್ಡ್​ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಪ್ಲಾನ್​ ಮಾಡಿದೆ. ಇನ್ನು, ಉಳಿದ ದಿನ ಮಧ್ಯಾಹ್ನ ಅವಧಿಯಲ್ಲೇ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.

ಎಕ್ಸಾಮ್​ ಟೈಮ್​ ಟೇಬಲ್​ ಹೀಗಿದೆ..!

Advertisement

5ನೇ ತರಗತಿ ವೇಳಾಪಟ್ಟಿ
25-03-2024- ಪರಿಸರ ಅಧ್ಯಯನ
26-03-2024- ಗಣಿತ

8ನೇ ತರಗತಿ ವೇಳಾಪಟ್ಟಿ
25-03-2024- ತೃತೀಯ ಭಾಷೆ
26-03-2024- ಗಣಿತ
27-03-2024- ವಿಜ್ಞಾನ
28-03-2024- ಸಮಾಜ ವಿಜ್ಞಾನ

9ನೇ ತರಗತಿ ವೇಳಾಪಟ್ಟಿ
25-03-2024- ತೃತೀಯ ಭಾಷೆ
26-03-2024- ಗಣಿತ
27-03-2024- ವಿಜ್ಞಾನ
28-03-2024- ಸಮಾಜ ವಿಜ್ಞಾನ

Advertisement
Tags :
Advertisement