ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸಮುದ್ರ ಪಾಲಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತ ದೇಹ ಸೋಮೇಶ್ವರದ ಬಳಿ ಪತ್ತೆ

ಸಮುದ್ರ ಕಿನಾರೆಯಲ್ಲಿ ನೀರಾಟಕ್ಕಿಳಿದ ಸಂದರ್ಭದಲ್ಲಿ ಶನಿವಾರ ಸಮುದ್ರ ಪಾಲಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತ ದೇಹ ಸೋಮೇಶ್ವರ ಬಳಿ ರವಿವಾರ ಬೆಳಿಗ್ಗೆ ಪತ್ತೆಯಾಗಿದೆ.
11:42 AM Dec 10, 2023 IST | Ashika S

ಉಳ್ಳಾಲ: ಸಮುದ್ರ ಕಿನಾರೆಯಲ್ಲಿ ನೀರಾಟಕ್ಕಿಳಿದ ಸಂದರ್ಭದಲ್ಲಿ ಶನಿವಾರ ಸಮುದ್ರ ಪಾಲಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತ ದೇಹ ಸೋಮೇಶ್ವರ ಬಳಿ ರವಿವಾರ ಬೆಳಿಗ್ಗೆ ಪತ್ತೆಯಾಗಿದೆ.

Advertisement

ಸೋಮೇಶ್ವರದ ಕಾಲೇಜೊಂದರ ಆರು ಮಂದಿ ವಿದ್ಯಾರ್ಥಿಗಳು ಶನಿವಾರ ಬೀಚ್ ಗೆ ತೆರಳಿದ್ದರು. ಈ ವೇಳೆ ನೀರಾಟಕ್ಕೆ ಇಳಿದಿದ್ದ ದ್ವಿತೀಯ ಪಿಯು ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳಾದ ಮಂಜೇಶ್ವರ, ಕುಂಜತ್ತೂರು ಅಡ್ಕ ನಿವಾಸಿ ಯಶ್ವಿತ್ (17) ಮತ್ತು ಕುಂಜತ್ತೂರು ಮಜಲ್ ನಿವಾಸಿ ಯುವರಾಜ್(17) ಸಮುದ್ರ ದ ಅಲೆಗೆ ಸಿಲುಕಿ ಕೊಚ್ಚಿ ಕೊಂಡು ಹೋಗಿದ್ದರು.

ನಾಪತ್ತೆಯಾಗಿದ್ದ ಇಬ್ಬರ‌ ಮೃತ ದೇಹ ಪತ್ತೆಗಾಗಿ ಅಗ್ನಿ ಶಾಮಕ ದಳ ಹಾಗೂ ಉಳ್ಳಾ ಲ ಪೊಲೀಸರು ಶನಿವಾರ ರಾತ್ರಿ ವೇಳೆ ಬಟ್ಟಪ್ಪಾಡಿ,ಉಚ್ಚಿಲ ಪ್ರದೇಶದಲ್ಲಿ ಶೋಧ ನಡೆಸಿದ್ದರು. ಇವರ ಜೊತೆ ಮೊಗವೀರ ಪಟ್ನದ ಕೆಲವು ಈಜುಗಾರರು ಶೋಧ ಕಾರ್ಯದಲ್ಲಿ ಪೊಲೀಸರ‌ ಜತೆ‌ ಕೈಜೋಡಿಸಿದ್ದರು.

Advertisement

ಇಂದು ಬೆಳಗ್ಗೆ ಇಬ್ಬರ ಮೃತ ದೇಹಗಳು ಪತ್ತೆಯಾಗಿದ್ದು, ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ

Advertisement
Tags :
LatetsNewsNewsKannadaಕಿನಾರೆಮೃತ ದೇಹವಿದ್ಯಾರ್ಥಿಸಮುದ್ರ
Advertisement
Next Article