ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ʼಟಾಕ್ಸಿಕ್ʼ ಮೂವಿಯಲ್ಲಿ ಯಶ್​ಗೆ ಈ ಬಾಲಿವುಡ್ ಬ್ಯೂಟಿ ಜೋಡಿ ಆಗ್ತಾರಾ?

ಕೆಜಿಎಫ್ ನಂತರ ಯಶ್ ಸಿನಿಮಾ ಆಯ್ಕೆಯಲ್ಲಿ ಬಹಳ ಹುಷಾರಾಗಿದ್ದಾರೆ. ಹೆಚ್ಚಿನ ಅವಸರ ಮಾಡದೆ ಒಳ್ಳೆಯ ಸಿನಿಮಾಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಕೆಜಿಎಫ್ ಆದ ಮೇಲೆ ಒಂದೂವರೆ ವರ್ಷಗಳ ನಂತರ, ಅವರು ತಮ್ಮ ಮುಂದಿನ ಚಿತ್ರ 'ಟಾಕ್ಸಿಕ್' ಎಂದು ಘೋಷಿಸಿದರು.
04:23 PM Jan 04, 2024 IST | Ashitha S

ಕೆಜಿಎಫ್ ನಂತರ ಯಶ್ ಸಿನಿಮಾ ಆಯ್ಕೆಯಲ್ಲಿ ಬಹಳ ಹುಷಾರಾಗಿದ್ದಾರೆ. ಹೆಚ್ಚಿನ ಅವಸರ ಮಾಡದೆ ಒಳ್ಳೆಯ ಸಿನಿಮಾಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಕೆಜಿಎಫ್ ಆದ ಮೇಲೆ ಒಂದೂವರೆ ವರ್ಷಗಳ ನಂತರ, ಅವರು ತಮ್ಮ ಮುಂದಿನ ಚಿತ್ರ 'ಟಾಕ್ಸಿಕ್' ಎಂದು ಘೋಷಿಸಿದರು.

Advertisement

ಗೀತು ಮೋಹನ್ ದಾಸ್ ಈ ಚಿತ್ರವನ್ನು ನಿರ್ದೇಶಿಸಲಿದ್ದು, ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಹಿಂದಿ ಚಲನಚಿತ್ರ ವಲಯಗಳಿಂದ ಕೇಳಿಬರುತ್ತಿರುವ ವದಂತಿಗಳ ಪ್ರಕಾರ, ಈ ಸಿನಿಮಾದಲ್ಲಿ ನಟಿಸುವಂತೆ ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ ಖಾನ್ ಅವರನ್ನು ಚಿತ್ರತಂಡ ಸಂಪರ್ಕಿಸಿದ್ದು, ನಟಿ ಸಕಾರಾತ್ಮಕ ಒಪ್ಪಿಗೆಯೊಂದಿಗೆ ಪ್ರತಿಕ್ರಿಯಿಸಿದ್ದಾರೆಂದು ಮಾಹಿತಿ ದೊರಕಿದೆ.

ಕರೀನಾ ಯಶ್​​​​ಗೆ ಜೋಡಿಯಾಗಿದ್ದಾರೆಯೇ ಅಥವಾ ಟಾಕ್ಸಿಕ್‌ನಲ್ಲಿ ಪ್ರಮುಖ ಪಾತ್ರಕ್ಕಾಗಿ ಅವರನ್ನು ಸಂಪರ್ಕಿಸಲಾಗಿದೆಯೇ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿ ತಿಳಿದುಬಂದಿಲ್ಲ.

Advertisement

ಇನ್ನು ಜನವರಿ 8 ರಂದು ಕೆಜಿಎಫ್​ ಸ್ಟಾರ್ ಯಶ್ ಅವರ ಹುಟ್ಟು ಹಬ್ಬವಿದ್ದು ಅಂದೇ ಟಾಕ್ಸಿಕ್ ಮೂವಿಯ ಗ್ಲಿಂಪ್ಸ್ ರಿಲೀಸ್ ಮಾಡೋ ಸಾಧ್ಯತೆ ಇದೆ. ಇದರ ಜೊತೆಗೆ ಟಾಕ್ಸಿಕ್​ನ ಹೀರೋಯಿನ್​ ಆಗಿ ಬಾಲಿವುಡ್​ ಅಂಗಳದ ಬೆಳದಿಂಗಳ ಚೆಲುವೆ ಕರಿನಾ ಕಪೂರ್ ಇರುತ್ತಾರ ಎಂಬುದಕ್ಕೆ ಉತ್ತರ ಸಿಗುವ ಸಾಧ್ಯತೆಯಿದೆ. ಆದರೆ ಈ ಬಗ್ಗೆ ಎಲ್ಲಿಯು ಯಶ್ ಆಗಲಿ ಅಥವಾ ಚಿತ್ರತಂಡವಾಗಲಿ ಈ ವರೆಗೆ ಅಧಿಕೃತ ಮಾಹಿತಿ ನೀಡಿಲ್ಲ. ಹೀಗಾಗಿ ಜ. 8ರಂದು ಆದರೂ ಉತ್ತರ ಸಿಗುತ್ತಾ ಕಾದುನೋಡಬೇಕಿದೆ.

Advertisement
Tags :
GOVERNMENTindiaLatestNewsNewsKannadaSANDALWOODಟಾಕ್ಸಿಕ್ನವದೆಹಲಿಬಾಲಿವುಡ್​​ ಬ್ಯೂಟಿಯಶ್ರಾಕಿಂಗ ಸ್ಟಾರ್‌
Advertisement
Next Article