For the best experience, open
https://m.newskannada.com
on your mobile browser.
Advertisement

ಬೊಳ್ನಾಡು ಶ್ರೀ ಚಿರುಂಭ ಭಗವತೀ ಕ್ಷೇತ್ರ : ದ್ವಜ ಸ್ತಂಭ (ಕೊಡಿಮರ) ಪ್ರತಿಷ್ಠಾಪನೆ

ತೀಯಾ ಸಮುದಾಯದ ಹದಿನೆಂಟು ಭಗವತೀ ಕ್ಷೇತ್ರಗಳಲ್ಲಿ ಒಂದಾದ ಬೊಳ್ನಾಡು ಶ್ರೀ ಚಿರುಂಭ ಭಗವತೀ ಕ್ಷೇತ್ರ ಎರುಂಬು - ಅಳಿಕೆ ಬಂಟ್ವಾಳ ತಾಲೂಕು ಇದರ ಸಂಪೂರ್ಣ ಜೀರ್ಣೋದ್ದಾರ ಕಾರ್ಯವು ಅಂತಿಮ ಹಂತದಲ್ಲಿದ್ದು ಮೇ. ೧೦ ರಂದು ದ್ವಜ ಸ್ತಂಭ (ಕೊಡಿಮರ) ಪ್ರತಿಷ್ಠಾಪನೆಯು ನಡೆಯಿತು.
01:04 PM May 13, 2024 IST | Nisarga K
ಬೊಳ್ನಾಡು ಶ್ರೀ ಚಿರುಂಭ ಭಗವತೀ ಕ್ಷೇತ್ರ   ದ್ವಜ ಸ್ತಂಭ  ಕೊಡಿಮರ  ಪ್ರತಿಷ್ಠಾಪನೆ
ಬೊಳ್ನಾಡು ಶ್ರೀ ಚಿರುಂಭ ಭಗವತೀ ಕ್ಷೇತ್ರ : ದ್ವಜ ಸ್ತಂಭ (ಕೊಡಿಮರ) ಪ್ರತಿಷ್ಠಾಪನೆ

ಮಂಗಳೂರು : ತೀಯಾ ಸಮುದಾಯದ ಹದಿನೆಂಟು ಭಗವತೀ ಕ್ಷೇತ್ರಗಳಲ್ಲಿ ಒಂದಾದ ಬೊಳ್ನಾಡು ಶ್ರೀ ಚಿರುಂಭ ಭಗವತೀ ಕ್ಷೇತ್ರ ಎರುಂಬು - ಅಳಿಕೆ ಬಂಟ್ವಾಳ ತಾಲೂಕು ಇದರ ಸಂಪೂರ್ಣ ಜೀರ್ಣೋದ್ದಾರ ಕಾರ್ಯವು ಅಂತಿಮ ಹಂತದಲ್ಲಿದ್ದು ಮೇ. ೧೦ ರಂದು ದ್ವಜ ಸ್ತಂಭ (ಕೊಡಿಮರ) ಪ್ರತಿಷ್ಠಾಪನೆಯು ನಡೆಯಿತು.

Advertisement

ಮುಂಬಯಿಯ ಉದ್ಯಮಿ, ಕೊಡುಗೈ ದಾನಿ, ತೀಯಾ ಸಮಾಜ ಮುಂಬಯಿಯ ಅಧ್ಯಕ್ಷ, ಬೊಳ್ನಾಡು ಶ್ರೀ ಭಗವತೀ ತೀಯಾ ಸಮಾಜ ಸೇವಾ ಸಮಿತಿಯ ಆಡಳಿತ ಮೊಕ್ತೇಸರರಾದ ಕೃಷ್ಣ ಎನ್. ಉಚ್ಚಿಲ್ ಇವರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ದ ಜೀರ್ಣೋದ್ದಾರ ಕಾರ್ಯವು ನಡೆಯುತ್ತಿದ್ದು ಇವರ ನೇತೃತ್ವದಲ್ಲಿ ಬ್ರಹ್ಮಶ್ರೀ ತಂತ್ರಿವರ್ಯ ಉಳಿಯತ್ತಾಯ ವಿಷ್ಣು ಅಸ್ರರ ಮಾರ್ಗದರ್ಶನದಲ್ಲಿ ತೀಯಾ ಸಮುದಾಯದ ವಿವಿಧ ಕ್ಷೇತ್ರಗಳ ಆಚಾರಪಟ್ಟವರ ದಿವ್ಯ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಮೇ. 10ರಂದು ಪೂರ್ವಾಹ್ನ ದ್ವಜ ಸ್ತಂಭ (ಕೊಡಿಮರ) ಪ್ರತಿಷ್ಠಾಪನೆಯು ನಡೆಯಿತು.

Advertisement

ಕಾರ್ಯಕ್ರಮದ ಯಶಸ್ಸಿಗೆ ಬೊಳ್ನಾಡು ಶ್ರೀ ಭಗವತೀ ತೀಯಾ ಸಮಾಜ ಸೇವಾ ಸಮಿತಿ, ಬೊಳ್ನಾಡು ಶ್ರೀ ಭಗವತೀ ಯುವಜನ ಸಂಘ, ಬೊಳ್ನಾಡು ಶ್ರೀ ಭಗವತೀ ಮಹಿಳಾ ಸಂಘ, ಬೊಳ್ನಾಡು ಶ್ರೀ ಭಗವತೀ ಭಜನಾ ಸಂಘ, ತೀಯಾ ಲಿಟಲ್ ಟೈಗರ್ಸ್ ಬೊಳ್ನಾಡು ನ ಎಲ್ಲಾ ಸದಸ್ಯರು ಹಾಗೂ ಭಕ್ತರು ಸಹಕರಿಸಿದರು.

Advertisement
Tags :
Advertisement