For the best experience, open
https://m.newskannada.com
on your mobile browser.
Advertisement

ಯೆಮನ್ ನಲ್ಲಿ ಬಾಂಬ್ ಸ್ಪೋಟ : ಮೂವರು ಯೋಧರು ಸಾವು

ಬಾಂಬ್ ದಾಳಿಯಲ್ಲಿ ಸರ್ಕಾರಿ ಪಡೆಗಳ ಮೂವರು ಸೈನಿಕರು ಮೃತಪಟ್ಟಿದ್ದು, ಇತರ ಮೂವರು ಗಾಯಗೊಂಡಿರುವ ಘಟನೆ ಯೆಮನ್ ನ ದಕ್ಷಿಣ ಅಬ್ಯಾನ್ ಪ್ರಾಂತ್ಯದಲ್ಲಿ ನಡೆದಿದೆ.
09:35 AM Jan 20, 2024 IST | Ramya Bolantoor
ಯೆಮನ್ ನಲ್ಲಿ  ಬಾಂಬ್ ಸ್ಪೋಟ   ಮೂವರು ಯೋಧರು ಸಾವು

ಅಡೆನ್ : ಬಾಂಬ್ ದಾಳಿಯಲ್ಲಿ ಸರ್ಕಾರಿ ಪಡೆಗಳ ಮೂವರು ಸೈನಿಕರು ಮೃತಪಟ್ಟಿದ್ದು, ಇತರ ಮೂವರು ಗಾಯಗೊಂಡಿರುವ ಘಟನೆ ಯೆಮನ್ ನ ದಕ್ಷಿಣ ಅಬ್ಯಾನ್ ಪ್ರಾಂತ್ಯದಲ್ಲಿ ನಡೆದಿದೆ.

Advertisement

ಪೂರ್ವ ಅಬ್ಯಾನ್ ನ ಮುದಿಯಾ ಜಿಲ್ಲೆಯ ವಾಡಿ ಒಮೈರಾನ್ ಪ್ರದೇಶದಲ್ಲಿ ಮಿಲಿಟರಿ ಗಸ್ತು ಬಳಿ ಶುಕ್ರವಾರ ಸ್ಫೋಟಕ ಸಾಧನ ಸ್ಫೋಟಗೊಂಡಾಗ ಈ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಈ ಸ್ಫೋಟದಿಂದ ಗಸ್ತು ವಾಹನ ಸುಟ್ಟು ಹೋಗಿದ್ದು, ಮೂವರು ಸೈನಿಕರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಅವರು ದೃಢಪಡಿಸಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

Advertisement

Advertisement
Tags :
Advertisement