For the best experience, open
https://m.newskannada.com
on your mobile browser.
Advertisement

ಭಾರತದ 30 ವಿಮಾನ ನಿಲ್ದಾಣಗಳಿಗೆ ಬಾಂಬ್​ ಬೆದರಿಕೆ ಕರೆ

ಭಾರತದ 30 ವಿಮಾನ ನಿಲ್ದಾಣಗಳಿಗೆ ಇಮೇಲ್​​ ಮೂಲಕ ಬಾಂಬ್​ ಬೆದರಿಕೆ ಕರೆ ಬಂದಿದ್ದು, ಈ ಬಗ್ಗೆ ಏರ್​ಪೋರ್ಟ್​ ಸುತ್ತುಮುತ್ತ ಎಚ್ಚರಿಕೆ ವಹಿಸಲಾಗಿದ್ದು, ತೀವ್ರ ತಪಾಸಣೆ ನಡೆಯುತ್ತಿದೆ.
01:37 PM Apr 30, 2024 IST | Chaitra Kulal
ಭಾರತದ 30 ವಿಮಾನ ನಿಲ್ದಾಣಗಳಿಗೆ ಬಾಂಬ್​ ಬೆದರಿಕೆ ಕರೆ

ಭಾರತದ 30 ವಿಮಾನ ನಿಲ್ದಾಣಗಳಿಗೆ ಇಮೇಲ್​​ ಮೂಲಕ ಬಾಂಬ್​ ಬೆದರಿಕೆ ಕರೆ ಬಂದಿದ್ದು, ಈ ಬಗ್ಗೆ ಏರ್​ಪೋರ್ಟ್​ ಸುತ್ತುಮುತ್ತ ಎಚ್ಚರಿಕೆ ವಹಿಸಲಾಗಿದ್ದು, ತೀವ್ರ ತಪಾಸಣೆ ನಡೆಯುತ್ತಿದೆ.

Advertisement

ನಿನ್ನೆ ಸಂಜೆ ಅಧಿಕೃತ ಇಮೇಲ್​ ವಿಳಾಸಕ್ಕೆ ಹಿಂದಿಯಲ್ಲಿ ಬರೆಯಲಾಗಿದ್ದ ಬೆದರಿಕೆ ಮೇಲ್​ ಬಂದಿದ್ದು, ಎಲ್ಲಾ ನಿಲ್ದಾಣಗಳಲ್ಲಿ ಬಾಂಬ್​ ಇಡಲಾಗಿದೆ. ಬಟನ್​ ಒತ್ತುವ ಮೂಲಕ ನಿಲ್ದಾಣವನ್ನು ಸ್ಫೋಟಿಸಲಾಗುವುದು ಎಂದು ಮೇಲ್​ನಲ್ಲಿ ತಿಳಿಸಲಾಗಿದೆ.

ಇಮೇಲ್​ ಪರಿಶೀಲಿಸಿದ ಅಧಿಕಾರಿಗಳು ಈ ವಿಚಾರವನ್ನು ಸಿಐಎಸ್​ಎಫ್​ ಮತ್ತು ಉತ್ತರ ಪ್ರದೇಶ ಭದ್ರತಾ ಅಧಿಕಾರಿಗಳಿಗೆ ತಿಳಿಸಿ ತುರ್ತು ಸಭೆ ನಡೆಸಿದ್ದಾರೆ. ನಂತರ ನಿಲ್ದಾಣದ ಆವರಣದಲ್ಲಿ ಎಚ್ಚರ ವಹಿಸಿದ್ದು, ಪರಿಶೀಲಿಸಿದ್ದಾರೆ. ತಡರಾತ್ರಿವರೆಗೆ ತಪಾಸಣೆ ಮಾಡಿದ್ದಾರೆ.

Advertisement

ಬೆದರಿಕೆ ಇಮೇಲ್​ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಇದುವರೆಗೆ ಬೆದರಿಕೆ ಇಮೇಲ್​ ಕಳುಹಿಸಿದವರ ಕುರಿತು ಯಾವುದೇ ಮಾಹಿತಿ ಬಹಿರಂಗಗೊಂಡಿಲ್ಲ.

ವಿಮಾನ ನಿಲ್ದಾಣದ ಹಿರಿಯ ಸಿಐಎಸ್​ಎಫ್​ ಕಮಾಂಡೆಂಟ್​​ ಅಜಯ್​ ಕುಮಾರ್​​ ಮಾತನಾಡಿದ್ದು, ವಿಮಾನ ನಿಲ್ದಾಣ ನಿರ್ದೇಶಕರಿಗೆ ಸೋಮವಾರದಂದು ಅಪರಿಚಿತ ಇಮೇಲ್​ ಬಂದಿದೆ. ಅದರಲ್ಲಿ ದೇಶದ 30 ವಿಮಾನ ನಿಲ್ದಾಣಗಳನ್ನು ಸ್ಫೋಟಿಸುವ ಬೆದರಿಕೆ ಹಾಕಲಾಗಿದೆ. ಇದನ್ನು ಯಾರೋ ಮಾನಸಿಕ ಅಸ್ವಸ್ಥ ವ್ಯಕ್ತಿ ಮಾಡಿರಬೇಕು ಎಂದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಹೇಳಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

Advertisement
Tags :
Advertisement