For the best experience, open
https://m.newskannada.com
on your mobile browser.
Advertisement

ಬಾಂಬ್ ಬೆದರಿಕೆ ಕೇಸ್: ವಿದೇಶಿ ಕೋರ್ಟ್ ಮೊರೆ ಹೋದ ‌ ಪೊಲೀಸರು

ಇತ್ತೀಚೆಗೆ ಖಾಸಗಿ ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದ ಪ್ರಕರಣವನ್ನು ವಿದೇಶಿ ಕೋರ್ಟ್ ಮೂಲಕವು ಭೇದಿಸಲು ನಗರ ಪೊಲೀಸರು ಮುಂದಾಗಿದ್ದಾರೆ.
01:47 PM Dec 21, 2023 IST | Ramya Bolantoor
ಬಾಂಬ್ ಬೆದರಿಕೆ ಕೇಸ್  ವಿದೇಶಿ ಕೋರ್ಟ್ ಮೊರೆ ಹೋದ ‌  ಪೊಲೀಸರು

ಬೆಂಗಳೂರು: ಇತ್ತೀಚೆಗೆ ಖಾಸಗಿ ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದ ಪ್ರಕರಣವನ್ನು ವಿದೇಶಿ ಕೋರ್ಟ್ ಮೂಲಕವು ಭೇದಿಸಲು ನಗರ ಪೊಲೀಸರು ಮುಂದಾಗಿದ್ದಾರೆ. ಎಂಲಾಟ್ ಹಾಗೂ ಲೆಟರ್ ರೆಗೊರೇಟರಿ ಪ್ರೊಸೆಸ್ ಮೂಲಕ ಸಹಾಯ ಕೋರಿ ಪೊಲೀಸರು ವಿದೇಶಿ ಕೋರ್ಟ್​ ಮೊರೆ ಹೋಗಿದ್ದಾರೆ.

Advertisement

ಎಂಲಾಟ್ ಹಾಗೂ ಲೆಟರ್ ರೆಗೊರೇಟರಿ ಪ್ರೋಸಸ್ ಮೂಲಕ ಆರೋಪಿಯ ಪತ್ತೆಗೆ ತನಿಖೆ‌ ನಡೆಸಲು ಪೊಲೀಸರು ಯತ್ನಿಸುತ್ತಿದ್ದಾರೆ. ಇಮೇಲ್ ಮಾಡಿರುವ ಆರೋಪಿಯ ಪತ್ತೆಗೆ ಸಹಕಾರ ನೀಡುವ ಸಂಬಂಧ ಎಂಲಾಟ್ ಪ್ರಕ್ರಿಯೆ ನಡೆಸಲಾಗುತ್ತದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದೇಶಗಳ ಕೋರ್ಟ್ ಮೂಲಕ ಮಾಹಿತಿ ಹಂಚಿಕೆ ಮಾಡಲಾಗಿದೆ. ಮಾಹಿತಿ ಒದಗಿಸಬೇಕಾದ ಸಂಸ್ಥೆಗೆ ಅಲ್ಲಿನ ಕೋರ್ಟ್ ಮೂಲಕ ನಿರ್ದೇಶನ ನೀಡುವ ಉದ್ದೇಶ ಪೊಲೀಸರದ್ದಾಗಿದೆ.

Advertisement

ಸ್ವಿಜರ್ಲ್ಯಾಂಡ್ ಮೂಲದ ವಿಪಿಎನ್ ಫೋರ್ಟಲ್ ಬಳಸಿ ಮೇಲ್‌ ಮಾಡಿರುವ ದುಷ್ಕರ್ಮಿಯ ಸಂಪೂರ್ಣ ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಪ್ರಕ್ರಿಯೆಯಿಂದ ಸುಲಭವಾಗಿ ಮಾಹಿತಿ ಕಲೆ ಹಾಕಿ ಆರೋಪಿಯನ್ನ ಬಂಧಿಸಬಹುದು. ಪೊಲೀಸರು ಸಿಬಿಐ ಇಂಟರ್ ಪೋಲ್ ಮೂಲಕ ತನಿಖಾ ಪ್ರಕ್ರಿಯೆ ಆರಂಭಿಸಿದ್ದಾರೆ.

Advertisement
Tags :
Advertisement