ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಶಾಲೆಗಳಿಗೆ ಬಾಂಬ್​ ಬೆದರಿಕೆ ಮೇಲ್​,​ ತನಿಖೆಗೆ ಸೂಚಿಸಿದ ಸಿಎಂ: ಮೇಲ್‌ ನಲ್ಲಿ ಏನಿದೆ ಸಂದೇಶ ?

ನಗರದ ಶಾಲೆಗಳಿಗೆ ಇ-ಮೇಲ್ ಮುಖಾಂತರ​​ ಬಾಂಬ್​​ ಬೆದರಿಕೆ ಸಂದೇಶ ಬಂದಿದೆ. ಈ ಕುರಿತು ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಎಲ್ಲಿಂದ ಸಂದೇಶ ಬಂದಿದೆ ಎಂಬುದರ ಕುರಿತು ತನಿಖೆ ನಡೆಸುವಂತೆ ಸೂಚಿಸಿದ್ದೇನೆ. ಎಲ್ಲಾ ‌ಶಾಲೆಗಳಿಗೂ ಭದ್ರತೆ ಕೊಡಲು ಸೂಚನೆ ನೀಡಿದ್ದೇನೆ ಎಂದರು.
01:58 PM Dec 01, 2023 IST | Ashitha S

ಬೆಂಗಳೂರು: ನಗರದ ಶಾಲೆಗಳಿಗೆ ಇ-ಮೇಲ್ ಮುಖಾಂತರ​​ ಬಾಂಬ್​​ ಬೆದರಿಕೆ ಸಂದೇಶ ಬಂದಿದೆ. ಈ ಕುರಿತು ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಎಲ್ಲಿಂದ ಸಂದೇಶ ಬಂದಿದೆ ಎಂಬುದರ ಕುರಿತು ತನಿಖೆ ನಡೆಸುವಂತೆ ಸೂಚಿಸಿದ್ದೇನೆ. ಎಲ್ಲಾ ‌ಶಾಲೆಗಳಿಗೂ ಭದ್ರತೆ ಕೊಡಲು ಸೂಚನೆ ನೀಡಿದ್ದೇನೆ ಎಂದರು.

Advertisement

ಇನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿ, ಪೋಷಕರು ಅತಂಕಪಡುವ ಅಗತ್ಯವಿಲ್ಲ, ರಕ್ಷಣೆ ನಮ್ಮ ಕರ್ತವ್ಯ. ನಿಮ್ಮ ಜೊತೆಗೆ ಸರ್ಕಾರ ಇದೆ. ಯಾರೋ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ ಎಂದಿದ್ದಾರೆ.

"ಶಾಲೆಯ ಆವರಣದಲ್ಲಿ ಸ್ಫೋಟಕ ವಸ್ತುಗಳು ಇವೆ. ನವೆಂಬರ್ 26 ರಂದು, ಅಲ್ಲಾಹ್​ನ ದಾರಿಯಲ್ಲಿರುವ ಹುತಾತ್ಮರು, ನೂರಾರು ವಿಗ್ರಹ ಆರಾಧಕರನ್ನ ಹತ್ಯೆ ಮಾಡಿದ್ರು. ಕೋಟ್ಯಂತರ ಕಾಫಿರ್​ಗಳ ನಡುವೆ ಕೈನಲ್ಲಿ ಚಾಕು ಹಿಡಿದು, ನಿಲ್ಲುವುದು ನಿಜಕ್ಕೂ ಎದೆಗಾರಿಕೆ. ಅವನು ಬೀಳುತ್ತಾನೆ, ಮತ್ತೆ ಮತ್ತೆ ಬೀಳುತ್ತಾನೆ.

Advertisement

ಹುತಾತ್ಮರಾಗುವ ಉದ್ದೇಶದಿಂದ ಅಲ್ಲಾಹ್​ನ ದಾರಿಯಲ್ಲಿ ನೂರಾರು ಮುಜಾಹಿದ್ದೀನ್​ಗಳು ಯುದ್ಧ ಪ್ರದೇಶಕ್ಕೆ ಹರಿದು ಬಂದಿದ್ದಾರೆ. ನೀವು ಅಲ್ಲಾಹ್​ನ ಶತ್ರುಗಳು, ನಿಮ್ಮನ್ನ ಮತ್ತು ನಿಮ್ಮ ಮಕ್ಕಳನ್ನ ಕೊಲ್ಲುತ್ತೇವೆ. ನಿಮಗೆ ನಮ್ಮ ಅಡಿಯಾಳುಗಳಾಗುವ ಅವಕಾಶವಿದೆ. ಅಥವಾ ಅಲ್ಲಾಹ್​ನ ನಿಜವಾದ ಧರ್ಮವನ್ನ ಒಪ್ಪಿಕೊಳ್ಳಿ.

ದೇವಸ್ಥಾನಗಳು ನಿಮ್ಮ ವಿಗ್ರಹಗಳು, ಬುದ್ಧನಿಂದ ಅನಂತದವರೆಗೆ ಎಲ್ಲವೂ ನಮ್ಮ ಸ್ಫೋಟದಿಂದ ಛಿದ್ರಛಿದ್ರವಾಗಲಿದೆ. ಬಿಸ್ಮಿಲ್ಲಾ, ನಾಳೆ ಇದು ರಾಜಧಾನಿಯಾಗಲಿದೆ ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಇಸ್ಲಾಂ ಖಡ್ಗದಡಿಯಲ್ಲಿ ಸಾಯಿರಿ. ನೀವು ಇಸ್ಲಾಂ ಒಪ್ಪಿಕೊಳ್ಳದವರನ್ನ ಕಂಡರೆ ಅವರ ತಲೆಗಳನ್ನ ಕತ್ತರಿಸಿ. ಅವರ ತಲೆಗಳನ್ನ ಕತ್ತರಿಸಿ, ಅವರ ಎಲ್ಲಾ ಬೆರಳುಗಳನ್ನ ತುಂಡರಿಸಿ. ಬಹು ದೇವತೆಗಳನ್ನ ಪೂಜಿಸುವವರು ನಿಮ್ಮನ್ನ ಎದುರಿಸುವಂತೆ ಅವರೆಲ್ಲರನ್ನೂ ನೀವೂ ಎದುರಿಸಿ ಅಲ್ಲಾಹು ಅಕ್ಬರ್" ಎಂದು ಮೇಲ್​ನಲ್ಲಿ ಬರೆಯಲಾಗಿದೆ ಎಂದು ತಿಳಿದು ಬಂದಿದೆ.

https://newskannada.com/karnataka/bengaluru/threat-mail-to-bng-school-suresh-kumar-statement/01122023#google_vignette

https://newskannada.com/karnataka/bengaluru/threat-mail-to-bng-school-suresh-kumar-statement/01122023#google_vignette

 

Advertisement
Tags :
Bomb Threat MessageCMcrimeGOVERNMENTindiaKARNATAKALatestNewsNewsKannadaನವದೆಹಲಿಬಾಂಬ್ ಬೆದರಿಕೆ
Advertisement
Next Article