For the best experience, open
https://m.newskannada.com
on your mobile browser.
Advertisement

ಮುಂಬೈನ ಮೆಕ್​ಡೊನಾಲ್ಡ್ಸ್​ಗೆ ಬಾಂಬ್​ ಬೆದರಿಕೆ

ಇತ್ತೀಚೆಗೆ ದೇಶದಾದ್ಯಂತ ಬಾಂಬ್‌ ಬೆದರಿಕೆ ಕೇಳಿಬರುತ್ತವೆ ಇದರ ಹಿಂದೆ ಯಾರ ಕೈಚಳಕವಿದೆ ಎಂದು ಇನ್ನು ಬೆಳಕಿಗೆ ಬಂದಿಲ್ಲ. ಈಗಾಗಲೇ ಶಾಲೆಗಳಿಗ, ವಿಮಾನ ನಿಲ್ದಾಣಗಳಿಗೆ ಬೆದರಿಕೆ ಹಾಕಿದ್ದು ಇದೀಗ ಮೆಕ್​ ಡೊನಾಲ್ಡ್ಸ್​ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ.
12:36 PM May 19, 2024 IST | Nisarga K
ಮುಂಬೈನ ಮೆಕ್​ಡೊನಾಲ್ಡ್ಸ್​ಗೆ ಬಾಂಬ್​ ಬೆದರಿಕೆ
ಮುಂಬೈನ ಮೆಕ್​ಡೊನಾಲ್ಡ್ಸ್​ಗೆ ಬಾಂಬ್​ ಬೆದರಿಕೆ

ಮುಂಬೈ: ಇತ್ತೀಚೆಗೆ ದೇಶದಾದ್ಯಂತ ಬಾಂಬ್‌ ಬೆದರಿಕೆ ಕೇಳಿಬರುತ್ತವೆ ಇದರ ಹಿಂದೆ ಯಾರ ಕೈಚಳಕವಿದೆ ಎಂದು ಇನ್ನು ಬೆಳಕಿಗೆ ಬಂದಿಲ್ಲ. ಈಗಾಗಲೇ ಶಾಲೆಗಳಿಗ, ವಿಮಾನ ನಿಲ್ದಾಣಗಳಿಗೆ ಬೆದರಿಕೆ ಹಾಕಿದ್ದು ಇದೀಗ ಮೆಕ್​ ಡೊನಾಲ್ಡ್ಸ್​ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ.

Advertisement

ಮುಂಬೈ ಪೊಲೀಸ್ ಕಂಟ್ರೋಲ್​ ರೂಂಗೆ ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ ದಾದರ್​ನಲ್ಲಿರುವ ಮೆಕ್​ ಡೊನಾಲ್ಡ್ಸ್​ ಸ್ಫೋಟಿಸುವುದಾಗಿ ಯಾರೋ ಮಾತನಾಡಿಕೊಳ್ಳುತ್ತಿದ್ದರು ಎನ್ನುವ ವಿಚಾರವನ್ನು ತಿಳಿಸಿದ್ದಾರೆ.ಮುಂಬೈ ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿ ತಾನು ಬೆಸ್ಟ್ ಬಸ್ ಸಂಖ್ಯೆ 351 ರಲ್ಲಿ ಪ್ರಯಾಣಿಸುತ್ತಿದ್ದಾಗ, ಮ್ಯಾಕ್​ಡೊನಾಲ್ಡ್ ಅನ್ನು ಸ್ಫೋಟಿಸುವ ಬಗ್ಗೆ ಇಬ್ಬರು ಮಾತನಾಡುವುದನ್ನು ಕೇಳಿದೆ ಎಂದು ಹೇಳಿದರು.

ಕರೆ ಮಾಡಿದವರು ಈ ಬಗ್ಗೆ ಮಾಹಿತಿ ನೀಡಿದ್ದು, ಶನಿವಾರ ರಾತ್ರಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ. ಈ ಕರೆ ನಂತರ ಮುಂಬೈ ಪೊಲೀಸರು ಅಲರ್ಟ್ ಆದರು. ಪೊಲೀಸರು ಇಡೀ ರಾತ್ರಿ ಬಾಂಬ್‌ಗಾಗಿ ಶೋಧ ಕಾರ್ಯದಲ್ಲಿ ನಿರತರಾಗಿದ್ದರು.

Advertisement

ವ್ಯಾಪಕ ತನಿಖೆಯ ನಂತರವೂ ಪೊಲೀಸರಿಗೆ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ಮುಂಬೈ ಪೊಲೀಸರ ಬಾಂಬ್ ನಿಷ್ಕ್ರಿಯ ದಳಕ್ಕೂ ಎಚ್ಚರಿಕೆ ನೀಡಲಾಗಿದೆ. ಪೊಲೀಸರ ಶೋಧ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.

Advertisement
Tags :
Advertisement