For the best experience, open
https://m.newskannada.com
on your mobile browser.
Advertisement

ಮಿಲಾಗ್ರಿಸ್ ಕಾಲೇಜ್ ನಲ್ಲಿ ಗ್ರಂಥಪಾಲಕರ ದಿನ ಆಚರಣೆ ಹಾಗೂ ಪುಸ್ತಕ ಪ್ರದರ್ಶನ

ಇಂದು(ಮಾ.20) ಮಿಲಾಗ್ರಿಸ್ ಕಾಲೇಜಿನ ಗ್ರಂಥಾಲಯವು 'ಗ್ರಂಥಪಾಲಕರ ದಿನ ಆಚರಣೆ ಹಾಗೂ ಒಂದು ದಿನದ ಪುಸ್ತಕ ಪ್ರದರ್ಶನ ಕಾರ್ಯಕ್ರಮವನ್ನು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
06:20 PM Mar 20, 2024 IST | Nisarga K
ಮಿಲಾಗ್ರಿಸ್ ಕಾಲೇಜ್ ನಲ್ಲಿ ಗ್ರಂಥಪಾಲಕರ ದಿನ ಆಚರಣೆ ಹಾಗೂ ಪುಸ್ತಕ ಪ್ರದರ್ಶನ
ಮಿಲಾಗ್ರಿಸ್ ಕಾಲೇಜ್ ನಲ್ಲಿ ಗ್ರಂಥಪಾಲಕರ ದಿನ ಆಚರಣೆ ಹಾಗೂ ಪುಸ್ತಕ ಪ್ರದರ್ಶನ

ಮಂಗಳೂರು: ಇಂದು(ಮಾ.20) ಮಿಲಾಗ್ರಿಸ್ ಕಾಲೇಜಿನ ಗ್ರಂಥಾಲಯವು 'ಗ್ರಂಥಪಾಲಕರ ದಿನ ಆಚರಣೆ ಹಾಗೂ ಒಂದು ದಿನದ ಪುಸ್ತಕ ಪ್ರದರ್ಶನ ಕಾರ್ಯಕ್ರಮವನ್ನು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.

Advertisement

ಮುಖ್ಯ ಅತಿಥಿಯಾಗಿ ಮಿಲಾಗ್ರಿಸ್ ಕಾಲೇಜಿನ ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಕು ಶ್ರಾವ್ಯ ಎನ್ ಇವರು ದೀಪ ಬೆಳಗಿಸುವ ಮೂಲಕ ಹಾಗೂ ಗ್ರಂಥಾಲಯದ ಪಿತಾಮಹ ಡಾ| ಎಸ್.ಆರ್. ರಂಗನಾಥನ್ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Advertisement

ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಗ್ರಂಥಾಲಯವು ಶಿಕ್ಷಣಕ್ಕೆ ಹಿಡಿದ ಕೈಗನ್ನಡಿಯಾಗಿದ್ದು, ಇದು ಶಿಕ್ಷಣದ ಸಾಧಕ ಹಾಗೂ ಬಾಧಕಗಳನ್ನು ಎತ್ತಿತೋರಿಸುತ್ತದೆ. ಗ್ರಂಥಾಲಯದಲ್ಲಿ ಪುಸ್ತಕಗಳು ಓದುಗರಿಗೆ ಸ್ವವಿಮರ್ಶೆ ಜ್ಞಾನದ ಒಳಹರಿವಿಗೆ ಪ್ರೇರಣೆ ಹಾಗೂ ದಾರಿದೀಪವಾಗಬಲ್ಲದು "ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಂ ಮೈಕಲ್ ಸಾಂತುಮಾಯರ್ ಮಾತನಾಡಿ, ವಿದ್ಯಾರ್ಥಿಗಳು ಗ್ರಂಥಾಲಯದ ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ಭವಿಷ್ಯದ ಸರ್ವತೋಮುಖ ಬೆಳವಣಿಗೆಯನ್ನು ಕಂಡುಕೊಳ್ಳಲಿ ಎಂದು ಹೇಳಿದರು.

ಐಕ್ಯೂಎಸಿ ಸಂಯೋಜಕಿ ಶ್ರೀಮತಿ ಚೇತನಾ ಕೆ, ಗ್ರಂಥಪಾಲಕಿ ಪ್ರಮೀಳಾ ಡಿಸೋಜಾ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಲೀಶಾ ಉಪಸ್ಥಿತರಿದ್ದರು. ವಿದ್ಯಾರ್ಥಿ ರೊಯ್ ಸ್ಟನ್ ಸ್ವಾಗತಿಸಿ, ನಿರೂಪಿಸಿದರು. ಮರ್ವಿನ್ ಪಿಂಟೋ ವಂದಿಸಿದರು. ಕಾರ್ಯಕ್ರಮದ ಉದ್ಘಾಟನೆಯ ನಂತರ ವಿದ್ಯಾರ್ಥಿಗಳು ಅಲ್ಲಲ್ಲಿ ಪ್ರದರ್ಶಿಸಿದ ಪುಸ್ತಕಗಳನ್ನು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ 146 ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement
Tags :
Advertisement