ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಟೆಟ್ರಿಸ್ ಜಯಿಸಿದ ಮೊದಲ ಮಾನವ; 13ರ ಪೋರನ ಸಾಧನೆ

ಟೆಟ್ರಿಸ್ ಎಂಬ ಸರಳ ಹಾಗು ಅಷ್ಟೇ ಸವಾಲಿನ ಆಟವೊಂದನ್ನು ಜಯಿಸಿದ ಮೊದಲ ಮಾನವನೆಂಬ ಹೆಗ್ಗಳಿಕೆಗೆ ಅಮೆರಿಕಾದ ೧೩ ವರ್ಷದ ವಿಲ್ಲಿಸ್ ಗಿಬ್ಸನ್ ಪಾತ್ರರಾಗಿದ್ದಾರೆ.
08:20 PM Jan 04, 2024 IST | Maithri S

ಅಮೇರಿಕಾ: ಟೆಟ್ರಿಸ್ ಎಂಬ ಸರಳ ಹಾಗು ಅಷ್ಟೇ ಸವಾಲಿನ ಆಟವೊಂದನ್ನು ಜಯಿಸಿದ ಮೊದಲ ಮಾನವನೆಂಬ ಹೆಗ್ಗಳಿಕೆಗೆ ಅಮೇರಿಕಾದ 13 ವರ್ಷದ ವಿಲ್ಲಿಸ್ ಗಿಬ್ಸನ್ ಪಾತ್ರರಾಗಿದ್ದಾರೆ.

Advertisement

ಬ್ಲೂ ಸ್ಕುಟಿ ಎಂಬ ಹೆಸರಿನಿಂದಲೂ ಗುರುತಿಸಿಕೊಂಡಿರುವ ಗಿಬ್ಸನ್, ಕೃತಕ ಬುದ್ಧಿಮತ್ತೆಯಿಂದ ಮಾತ್ರ ಭೇದಿಸಲು ಸಾಧ್ಯವಾಗಿದ್ದ ಈ ಆಟವನ್ನು ಗೆದ್ದು ಅದರ 40 ನಿಮಿಷಗಳ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಹರ್ಷಿಸಿದ್ದಾರೆ.

ವಿಡಿಯೋ ಗೇಮ್ ಗಳು ಇಂದು ಬರಿ ಮನೋರಂಜನೆಗೆ ಸೀಮಿತವಾಗಿ ಉಳಿಯದೆ, ಆಟವಾಡುವವರ ನಡುವೆ ತೀವ್ರ ಸ್ಪರ್ಧೆಯೂ ಏರ್ಪಡುತ್ತಿದೆ. ಇಂತಹ ಆಟದಲ್ಲಿ ಯಾರೂ ತಲುಪಲಾಗದ ಹಂತವನ್ನು ಹೊಕ್ಕ ವಿಲ್ಲಿಸ್ ಮೆಚ್ಚುಗೆ ಗಳಿಸಿದ್ದಾನೆ.

Advertisement

ಟೆಟ್ರಿಸ್ ನ ಮುಖ್ಯ ಕಾರ್ಯನಿರ್ವಾಹಕಿ ಮಾಯಾ ರೋಜರ್ ಈ ಸಂಭ್ರಮದಲ್ಲಿ ಭಾಗಿಯಾಗಿ, ಆಟದ 40ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿನ ಅತ್ಯತ್ತಮ ಸಾಧನೆ ಎಂದಿದ್ದಾರೆ.

Advertisement
Tags :
ACHIEVEMENTLatestNewsNewsKannadatetrisUSA
Advertisement
Next Article