For the best experience, open
https://m.newskannada.com
on your mobile browser.
Advertisement

ಕೋಚಿಂಗ್ ಕ್ಲಾಸ್‌ನಲ್ಲಿಯೇ ವಿದ್ಯಾರ್ಥಿ ಕುಸಿದು ಸಾವು: ವಿಡಿಯೋ ವೈರಲ್‌

ಯುವಕನೋರ್ವನಿಗೆ ಹೃದಯಾಘಾತವಾಗುವ ಭಯಾನಕ ದೃಶ್ಯವೊಂದು ಇಂದೋರ್​ನಲ್ಲಿ ಬೆಳಕಿಗೆ ಬಂದಿದೆ. ಕೋಚಿಂಗ್ ಸೆಂಟರ್ ನಲ್ಲಿ ಕೋಚಿಂಗ್​ ಪಡೆಯುವ ವೇಳೆ ಯುವಕನಿಗೆ ಹೃದಯಾಘಾತವಾಗುತ್ತದೆ.
05:14 PM Jan 18, 2024 IST | Ashitha S
ಕೋಚಿಂಗ್ ಕ್ಲಾಸ್‌ನಲ್ಲಿಯೇ ವಿದ್ಯಾರ್ಥಿ ಕುಸಿದು ಸಾವು  ವಿಡಿಯೋ ವೈರಲ್‌

ಮಧ್ಯಪ್ರದೇಶ: ಯುವಕನೋರ್ವನಿಗೆ ಹೃದಯಾಘಾತವಾಗುವ ಭಯಾನಕ ದೃಶ್ಯವೊಂದು ಇಂದೋರ್​ನಲ್ಲಿ ಬೆಳಕಿಗೆ ಬಂದಿದೆ. ಕೋಚಿಂಗ್ ಸೆಂಟರ್ ನಲ್ಲಿ ಕೋಚಿಂಗ್​ ಪಡೆಯುವ ವೇಳೆ ಯುವಕನಿಗೆ ಹೃದಯಾಘಾತವಾಗುತ್ತದೆ.

Advertisement

ಸ್ನೇಹಿತರೊಂದಿಗೆ ಕುಳಿತುಕೊಂಡು ಕೋಚಿಂಗ್ ಪಡೆಯುತ್ತಿದ್ದಾಗ ಹಾರ್ಟ್​ ಅಟ್ಯಾಕ್​ ಸಂಭವಿಸಿದೆ. ಲೋಕಸೇವಾ ಆಯೋಗದ ಪರೀಕ್ಷೆಗೆ ಕೋಚಿಂಗ್ ಪಡೆಯುತ್ತಿದ್ದಾಗ ಈ ಘಟನೆ ನಡೆದಿದೆ. ಈ ದೃಶ್ಯ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ತಕ್ಷಣವೇ ಯುವಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಷ್ಟರಲ್ಲಾಗಲೇ ಯುವಕ ಸಾವನ್ನಪ್ಪಿದ್ದಾನೆ. 18ರ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ ಸುದ್ದಿ ಕೇಳಿ ಕುಟುಂಬಸ್ಥರು ಕಣ್ಣೀರು ಸುರಿಸಿದ್ದಾರೆ.

Advertisement

Advertisement
Tags :
Advertisement