For the best experience, open
https://m.newskannada.com
on your mobile browser.
Advertisement

ಉಡುಪಿ ಮಾರುಕಟ್ಟೆಯಲ್ಲಿ ಮರದ ಕೊಂಬೆ ಮುರಿದು ಬಿದ್ದು ಅಂಗಡಿ, ಕಾರಿಗೆ ಹಾನಿ

ಕಳೆದ ರಾತ್ರಿಯಿಂದ ಸುರಿದ ಮಳೆಯ ಪರಿಣಾಮ ಉಡುಪಿ ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಮೀಪ ಇರುವ ತರಕಾರಿ ಮಾರುಕಟ್ಟೆಯಲ್ಲಿನ ಮರವೊಂದರ ಕೊಂಬೆ ಇಂದು ಮಧ್ಯಾಹ್ನ ವೇಳೆ ಮುರಿದು ಬಿದ್ದಿದ್ದು, ಇದರಿಂದ ಎರಡು ಅಂಗಡಿಗಳು ಹಾಗೂ ಒಂದು ಕಾರಿಗೆ ಹಾನಿಯಾಗಿದೆ.
07:01 PM Apr 20, 2024 IST | Nisarga K
ಉಡುಪಿ ಮಾರುಕಟ್ಟೆಯಲ್ಲಿ ಮರದ ಕೊಂಬೆ ಮುರಿದು ಬಿದ್ದು ಅಂಗಡಿ  ಕಾರಿಗೆ ಹಾನಿ
ಉಡುಪಿ ಮಾರುಕಟ್ಟೆಯಲ್ಲಿ ಮರದ ಕೊಂಬೆ ಮುರಿದು ಬಿದ್ದು ಅಂಗಡಿ, ಕಾರಿಗೆ ಹಾನಿ

ಉಡುಪಿ: ಕಳೆದ ರಾತ್ರಿಯಿಂದ ಸುರಿದ ಮಳೆಯ ಪರಿಣಾಮ ಉಡುಪಿ ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಮೀಪ ಇರುವ ತರಕಾರಿ ಮಾರುಕಟ್ಟೆಯಲ್ಲಿನ ಮರವೊಂದರ ಕೊಂಬೆ ಇಂದು ಮಧ್ಯಾಹ್ನ ವೇಳೆ ಮುರಿದು ಬಿದ್ದಿದ್ದು, ಇದರಿಂದ ಎರಡು ಅಂಗಡಿಗಳು ಹಾಗೂ ಒಂದು ಕಾರಿಗೆ ಹಾನಿಯಾಗಿದೆ.

Advertisement

ಮಾರುಕಟ್ಟೆಯಲ್ಲಿರುವ ಅಶ್ವಥ ಮರದ ಗೆಲ್ಲು ಮುರಿದು ಬಿದ್ದಿದ್ದು, ಇದರಿಂದ ಮಾರುಕಟ್ಟೆಯಲ್ಲಿರುವ ಶಫೀಕ್ ಎಂಬವರ ತರಕಾರಿ ಅಂಗಡಿ ಹಾಗೂ ಮುಸ್ತಫ್ ಎಂಬವರ ಹಣ್ಣಿನ ಅಂಗಡಿಗೆ ಹಾನಿಯಾಗಿದೆ. ಅದೇ ರೀತಿ ಮಾರುಕಟ್ಟೆಗೆ ಆಗಮಿಸಿದ್ದ ಗ್ರಾಹಕರೊಬ್ಬರ ಕಾರು ಜಖಂಗೊಂಡಿದೆ.
ಅಲ್ಲದೆ ಮರದ ಕೊಂಬೆ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿದೆ. ಈ ಅನಾಹುತದಿಂದ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ನಗರಸಭೆ ಸಿಬಂದಿ, ಮೆಸ್ಕಾಂ ಸಿಬ್ಬಂದಿ ಮರ ತೆರವುಗೊಳಿಸುವ ಕಾರ್ಯ ನಡೆಸಿದರು.

Advertisement
Advertisement
Tags :
Advertisement