ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮೈಸೂರಿನಲ್ಲಿ ಮನೆಗೆ ಕನ್ನ ಹಾಕುತ್ತಿದ್ದ ಮೂವರ ಬಂಧನ

ಮನೆ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ,  47.42 ಲಕ್ಷ ಮೌಲ್ಯದ 832 ಗ್ರಾಂ ತೂಕದ ಚಿನ್ನದ ಒಡವೆಗಳು, 37 ಗ್ರಾಂ ತೂಕದ ಬೆಳ್ಳಿಯ ನಾಣ್ಯಗಳು ಮತ್ತು 1.70 ಲಕ್ಷ ರೂ. ಹಣ ವಶಪಡಿಸಿಕೊಳ್ಳುವಲ್ಲಿ ಮೈಸೂರಿನ ನರಸಿಂಹರಾಜ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
09:33 PM Feb 05, 2024 IST | Ashika S

ಮೈಸೂರು: ಮನೆ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ,  47.42 ಲಕ್ಷ ಮೌಲ್ಯದ 832 ಗ್ರಾಂ ತೂಕದ ಚಿನ್ನದ ಒಡವೆಗಳು, 37 ಗ್ರಾಂ ತೂಕದ ಬೆಳ್ಳಿಯ ನಾಣ್ಯಗಳು ಮತ್ತು 1.70 ಲಕ್ಷ ರೂ. ಹಣ ವಶಪಡಿಸಿಕೊಳ್ಳುವಲ್ಲಿ ಮೈಸೂರಿನ ನರಸಿಂಹರಾಜ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಕಳ್ಳರ ಗ್ಯಾಂಗ್ ನಲ್ಲಿ ಸೈಯದ್ ಅಯೂಬ್,  ಮಹಮದ್ ಮುನ್ನಾ, ಪ್ರಸಾದ್ ಅಲಿಯಾಸ್ ಆಸಿಫ್ ಮತ್ತು ಫಯಾಜ್  ಎಂಬುವರಿದ್ದು, ಇವರ ಪೈಕಿ ಒಬ್ಬ ತಲೆ ಮರೆಸಿಕೊಂಡಿದ್ದಾನೆ. ಸೈಯದ್ ಅಯೂಬ್ ಹಾಗೂ ಮಹಮದ್ ಮುನ್ನಾ ವಿರುದ್ದ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳಿವೆ. ಅಲ್ಲದೆ, ಮೈಸೂರಿನ ಪ್ರಸಾದ್ ಅಲಿಯಾಸ್ ಆಸಿಫ್ ಮತ್ತು ಫಯಾಜ್ ವಿರುದ್ದ ಮೈಸೂರಿನಲ್ಲಿ ಸಾಕಷ್ಟು ಕಳುವು ಪ್ರಕರಣಗಳಿವೆ.

ನಾಲ್ವರು ಆರೋಪಿಗಳು ಇತ್ತೀಚೆಗಷ್ಟೆ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಸೈಯದ್ ಅಯೂಬ್ ಡಿ.27 ರಂದು, ಮಹಮದ್  ಮುನ್ನ ನ.29ರಂದು, ಆಸಿಫ್ ಮತ್ತು ಫಯಾಜ್ ಜ.7ರಂದು ಬಿಡುಗಡೆ ಆಗಿದ್ದಾರೆ. ಕಳವು ಪ್ರಕರಣಗಳಲ್ಲಿ ಭಾಗಿ ಆಗಿ ಜೈಲು ವಾಸ ಅನುಭವಿಸಿದ್ದರೂ ಆರೋಪಿಗಳು ತಮ್ಮ ಚಾಳಿ ಮುಂದುವರೆಸಿದ್ದಾರೆ. ಸೈಯದ್ ಅಯೂಬ್ ಹಾಗೂ ಮಹಮದ್ ಮುನ್ನಾ ಒಂದು ತಂಡವಾದರೆ, ಪ್ರಸಾದ್ ಮತ್ತು ಫಯಾಜ್ ಮತ್ತೊಂದು ಗ್ಯಾಂಗ್ ಆಗಿದೆ.

Advertisement

ಎರಡೂ ಗ್ಯಾಂಗ್ ಗಳು ಜೈಲಿನಲ್ಲಿ ಒಂದಾಗಿ ಕಳ್ಳತನದ ಸ್ಕೆಚ್ ಹಾಕಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಈ  ಚಾಲಾಕಿಗಳು ಕೆ.ಆರ್.ನಗರದಲ್ಲಿ ಕಾರನ್ನು ಕಳುವು ಮಾಡಿ ನಂಬರ್ ಪ್ಲೇಟ್ ಬದಲಿಸಿ ನಂತರ ಬಣ್ಣದ ಸ್ಟಿಕ್ಕರ್ ಅಂಟಿಸಿ ಕೃತ್ಯವೆಸಗಿ ನಂತರ ಕಳುವು ಮಾಡಿದ ಕಾರನ್ನು ಅದೇ ಸ್ಥಳದಲ್ಲಿ ಬಿಟ್ಟು ಬಂದಿದ್ದಾರೆ. ಮಂಡ್ಯದಲ್ಲಿ ವೈದ್ಯರ ಮನೆಯಲ್ಲಿ ಕೃತ್ಯವೆಸಗಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ವೈದ್ಯರು ವಾಸ ಇರುವ ಮನೆಯ ಕೆಳಭಾಗದಲ್ಲಿ ನ್ಯಾಯಾಧೀಶರೊಬ್ಬರು ವಾಸವಿದ್ದರೂ ಖದೀಮರು ತಮ್ಮ ಕೈಚಳಕ ತೋರಿದ್ದಾರೆ.

ಉನ್ನತಿನಗರ ಜಂಕ್ಷನ್ ಬಳಿ ಚಿನ್ನದ ಒಡವೆಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಬಗ್ಗೆ  ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಮತ್ತು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಚಿನ್ನದ ಬಳೆಗಳನ್ನು ವಶಕ್ಕೆ ಪಡೆದಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಎನ್.ಆರ್ ಠಾಣೆಯ ಪೊಲೀಸರು, ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳ ಮಾಹಿತಿಯ ಮೇರೆಗೆ ಮತ್ತೊಬ್ಬ ಆರೋಪಿಯನ್ನು ಸಾತಗಳ್ಳಿ ಬಸ್ ಡಿಪೋ ಬಳಿ ವಶಕ್ಕೆ ಪಡೆದಿದ್ದಾರೆ.

ವಿಚಾರಣೆಯಲ್ಲಿ ಆರೋಪಿಗಳು ಮೈಸೂರು ನಗರ, ಮೈಸೂರು ಜಿಲ್ಲೆ, ಮಂಡ್ಯ ಜಿಲ್ಲೆಗಳ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ  ಕನ್ನ ಕಳುವು ಮಾಡಿರುವ ಬಗ್ಗೆ ತಿಳಿಸಿದರ ಮೇರೆಗೆ ಆರೋಪಿಗಳಿಂದ ಒಟ್ಟು 47.42 ಲಕ್ಷ ಮೌಲ್ಯದ 832 ಗ್ರಾಂ ತೂಕದ ಚಿನ್ನದ ಒಡವೆಗಳು, 37 ಗ್ರಾಂ ತೂಕದ ಬೆಳ್ಳಿಯ ನಾಣ್ಯಗಳು ಮತ್ತು 1.70 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳಿಂದ ಮಂಡ್ಯ ಜಿಲ್ಲೆಯ ಮದ್ದೂರು ಠಾಣೆ, ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ, ಮೈಸೂರು  ಜಿಲ್ಲೆಯ ಕೆ.ಆರ್. ನಗರ ಠಾಣೆ, ಮೈಸೂರು ದಕ್ಷಿಣ ಪೊಲೀಸ್ ಠಾಣೆ ಮತ್ತು ಮೈಸೂರು ನಗರ ವಿ.ವಿ. ಪುರಂ ಠಾಣೆಯ ತಲಾ 1 ಪ್ರಕರಣ ಪತ್ತೆಯಾಗಿದೆ. ಈ ಪ್ರಕರಣಗಳಲ್ಲಿ ಮತ್ತೊಬ್ಬ ಆರೋಪಿಯು ತಲೆಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯವನ್ನು ಪೊಲೀಸರು ಮುಂದುವರೆಸಿದ್ದಾರೆ.

ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿಗಳಾದ ಎಂ. ಮುತ್ತುರಾಜು, ಎಸ್. ಜಾಹ್ನವಿ, ಎನ್.ಆರ್. ಉಪ  ವಿಭಾಗದ ಎಸಿಪಿ ಅಶ್ವತ್ಥನಾರಾಯಣ್ ಅವರ ಮಾರ್ಗದರ್ಶನದಲ್ಲಿ ಎನ್.ಆರ್. ಠಾಣೆಯ ಇನ್ಸ್ ಪೆಕ್ಟರ್ ಲಕ್ಷ್ಮಿಕಾಂತ್ ತಳವಾರ್, ಎಸ್‌ಐ ಎಸ್.ಕೆ. ಗಣೇಶ್ ಮತ್ತು ಸಿಬ್ಬಂದಿ ಟಿ.ಎಂ. ಆದಂ, ಎಂ. ಮೋಹನ್ ಕುಮಾರ್, ಸಿ. ಸುನೀಲ್ ಕುಮಾರ್, ಡಿ.ಎಸ್. ದೊಡ್ಡೇಗೌಡ, ಕೆ. ಈರೇಶ, ಸಿ. ಬಸವರಾಜು, ಪರಶುರಾಮ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Advertisement
Tags :
LatetsNewsNewsKannadaಕಳ್ಳತನಚಿನ್ನದ ಒಡವೆನರಸಿಂಹರಾಜ ಠಾಣೆನಾಣ್ಯಮನೆ
Advertisement
Next Article