For the best experience, open
https://m.newskannada.com
on your mobile browser.
Advertisement

27 ವರ್ಷಗಳ ಬಳಿಕ ಆಸೀಸ್ ವಿರುದ್ಧ ಟೆಸ್ಟ್ ಗೆದ್ದ ವೆಸ್ಟ್‌ ಇಂಡೀಸ್: ಭಾವುಕರಾದ ಲೆಜೆಂಡ್ಸ್

ಆಸ್ಟ್ರೇಲಿಯಾ ವಿರುದ್ಧ ವೆಸ್ಟ್ ಇಂಡೀಸ್ ಕ್ರಿಕೆಟ್‌ ತಂಡ ಐತಿಹಾಸಿಕ ಗೆಲುವು ಸಾಧಿಸಿದೆ. 27 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ಗೆದ್ದಿದೆ. 2ನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆಲ್ಲುತ್ತಿದ್ದಂತೆ ವಿಜಯೋತ್ಸವ ಶುರುವಾಗಿದೆ. ವೆಸ್ಟ್‌ ಇಂಡೀಸ್ ಟೆಸ್ಟ್‌ನಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಕಾಮೆಂಟರಿ ಬಾಕ್ಸ್‌ನಲ್ಲಿದ್ದ ವೆಸ್ಟ್ ಇಂಡೀಸ್ ಲೆಜೆಂಡ್ರಿ ಕ್ರಿಕೆಟರ್ ಬ್ರಿಯಾನ್ ಲಾರಾ ಕಣ್ಣೀರಿಟ್ಟಿದ್ದಾರೆ.
04:54 PM Jan 28, 2024 IST | Ashitha S
27 ವರ್ಷಗಳ ಬಳಿಕ ಆಸೀಸ್ ವಿರುದ್ಧ ಟೆಸ್ಟ್ ಗೆದ್ದ ವೆಸ್ಟ್‌ ಇಂಡೀಸ್  ಭಾವುಕರಾದ ಲೆಜೆಂಡ್ಸ್

ಬ್ರಿಸ್ಬೇನ್‌: ಆಸ್ಟ್ರೇಲಿಯಾ ವಿರುದ್ಧ ವೆಸ್ಟ್ ಇಂಡೀಸ್ ಕ್ರಿಕೆಟ್‌ ತಂಡ ಐತಿಹಾಸಿಕ ಗೆಲುವು ಸಾಧಿಸಿದೆ. 27 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ಗೆದ್ದಿದೆ. 2ನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆಲ್ಲುತ್ತಿದ್ದಂತೆ ವಿಜಯೋತ್ಸವ ಶುರುವಾಗಿದೆ. ವೆಸ್ಟ್‌ ಇಂಡೀಸ್ ಟೆಸ್ಟ್‌ನಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಕಾಮೆಂಟರಿ ಬಾಕ್ಸ್‌ನಲ್ಲಿದ್ದ ವೆಸ್ಟ್ ಇಂಡೀಸ್ ಲೆಜೆಂಡ್ರಿ ಕ್ರಿಕೆಟರ್ ಬ್ರಿಯಾನ್ ಲಾರಾ ಕಣ್ಣೀರಿಟ್ಟಿದ್ದಾರೆ.

Advertisement

ಆಸ್ಟ್ರೇಲಿಯಾ ಅನ್ನೋ ಬಲಿಷ್ಠ ತಂಡದ ವಿರುದ್ಧ ವೆಸ್ಟ್ ಇಂಡಿಸ್ ಯುವಕರ ಪಡೆ ಗೆಲುವು ಸಾಧಿಸುತ್ತೆ ಎಂದು ಯಾರು ಭಾವಿಸಿರಲಿಲ್ಲ. ವೇಗಿ ಶಮರ್ ಜೋಸೆಫ್ 7 ವಿಕೆಟ್ ಕಬಳಿಸುವುದರೊಂದಿಗೆ ವೆಸ್ಟ್ ಇಂಡೀಸ್ ಟೆಸ್ಟ್‌ನಲ್ಲಿ 8ರನ್‌ಗಳ ಭರ್ಜರಿ ಜಯ ಸಾಧಿಸಿತು.

ಆಸ್ಟ್ರೇಲಿಯಾ ವಿರುದ್ಧ ವೆಸ್ಟ್ ಇಂಡೀಸ್ ಗೆಲುವಿನ ಕ್ಷಣವನ್ನು ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ಕಾದು ಕುಳಿತಿದ್ದರು. ಇದೊಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಇತಿಹಾಸದಲ್ಲೇ ಐತಿಹಾಸಿಕ ದಿನ ಎಂದು ಬಣ್ಣಿಸಿದ್ದಾರೆ. ವೆಸ್ಟ್ ಇಂಡೀಸ್ ಗೆಲುವು ಸಾಧಿಸುತ್ತಿದ್ದಂತೆ ಸಂತಸದಲ್ಲಿ ಖುಷಿಯನ್ನು ನಿಯಂತ್ರಿಸಲು ಸಾಧ್ಯವಾಗದೇ ಕಣ್ಣೀರು ಸುರಿಸಿದ್ದಾರೆ.

Advertisement

ವೆಸ್ಟ್ ಇಂಡೀಸ್‌ನ ಮಾಜಿ ದಿಗ್ಗಜ ಬ್ಯಾಟರ್ ಬ್ರಿಯಾನ್ ಲಾರಾ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಾಮೆಂಟೇಟರಿ ಮಾಡುತ್ತಿದ್ದರು. ಗಬ್ಬಾದಲ್ಲಿ ವೆಸ್ಟ್ ಇಂಡೀಸ್ ತಂಡ ಐತಿಹಾಸಿಕ ಜಯ ದಾಖಲಿಸಿದ ಕೂಡಲೇ ಬ್ರಿಯಾನ್ ಲಾರಾ ಜೋರಾಗಿ ಜಿಗಿದು ಸಹ ವಿವರಣೆಗಾರ ಆಸ್ಟ್ರೇಲಿಯಾದ ಮಾಜಿ ನಾಯಕ ಗಿಲ್‌ಕ್ರಿಸ್ಟ್ ಅವರನ್ನು ಅಪ್ಪಿಕೊಂಡರು. ಈ ಸಮಯದಲ್ಲಿ, ಬ್ರಿಯಾನ್ ಲಾರಾ ತುಂಬಾ ಭಾವುಕರಾಗಿದ್ದರು. ಮತ್ತೊಂದೆಡೆ, ವೆಸ್ಟ್ ಇಂಡೀಸ್‌ನ ಐತಿಹಾಸಿಕ ವಿಜಯದ ನಂತರ, ತಂಡದ ಮಾಜಿ ಅನುಭವಿ ಆಟಗಾರ ಕಾರ್ಲ್ ಹೂಪರ್ ಕೂಡ ತುಂಬಾ ಭಾವುಕರಾದರು. ಈ ಇಬ್ಬರು ಲೆಜೆಂಡರಿ ಆಟಗಾರರು ಭಾವುಕರಾದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

Advertisement
Tags :
Advertisement