ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪುತ್ತೂರಿಗೆ ಭೇಟಿ ನೀಡಿದ ಬ್ರಿಜೇಶ್ ಚೌಟ: ಮಾಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

ಮಂಗಳೂರು ಲೋಕ ಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆಯ ಬಳಿಕ ಗುರುವಾರ ಪುತ್ತೂರಿಗೆ ಬೇಟಿ ನೀಡಿದ ಬ್ರಿಜೇಶ್ ಚೌಟ ಅಮರ್ ಜವಾನ್ ಜ್ಯೋತಿಗೆ ಪುಷ್ಪ ನಮನ ಸಲ್ಲಿಸಿದರು. ಮಾಜಿ ಸೈನಿಕರು ಗೌರವ ವಂದನೆ ನೀಡಿದರು. ಶ್ರೀ ಮಾಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು.
08:20 PM Mar 14, 2024 IST | Ashika S

ಪುತ್ತೂರು: ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆಯ ಬಳಿಕ ಗುರುವಾರ ಪುತ್ತೂರಿಗೆ ಭೇಟಿ ನೀಡಿದ ಬ್ರಿಜೇಶ್ ಚೌಟ ಅಮರ್ ಜವಾನ್ ಜ್ಯೋತಿಗೆ ಪುಷ್ಪ ನಮನ ಸಲ್ಲಿಸಿದರು. ಮಾಜಿ ಸೈನಿಕರು ಗೌರವ ವಂದನೆ ನೀಡಿದರು. ಶ್ರೀ ಮಾಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು.

Advertisement

ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಮಾತನಾಡಿ ಸಾಮಾನ್ಯ ಮನೆತನದ ಸಾಮಾನ್ಯ ಕಾರ್ಯಕರ್ತನಿಗೆ ಪಕ್ಷ ಜವಾಬ್ದಾರಿಯನ್ನು ನೀಡಿದೆ. ಹಿರಿಯರು ರಕ್ತ ಮತ್ತು ಬೆವರನ್ನು ಒಂದು ಮಾಡಿ ಪಕ್ಷವನ್ನು ಕಟ್ಟಿದ್ದಾರೆ. ಎಲ್ಲರ ಶ್ರಮ, ತ್ಯಾಗ, ಬಲಿದಾನಗಳ ಅರಿವು ನನಗೆ ಇದೆ. ಕಾರ್ಯಕರ್ತರ ವಿಶ್ವಾಸವನ್ನು ತೆಗೆದುಕೊಂಡು, ವಿಶ್ವಾಸಕ್ಕೆ ಚ್ಯುತಿ ಬರದಂತೆ, ಸಂಘಟನೆಯ ಆಧಾರದಲ್ಲಿ ಪಕ್ಷವನ್ನು ಹಾಗೂ ಜಿಲ್ಲೆಯ ಅಭಿವೃದ್ಧಿಯನ್ನು ಜತೆಜತೆಗೆ ಮಾಡುವ ಸಂಕಲ್ಪವನ್ನು ಮಾಡಲಾಗಿದೆ. ೨೦೪೭ರ ವೇಳೆಗೆ ಈ ದೇಶ ವಿಕಸಿತ ಭಾರತವಾಗಿ, ಪರಮ ವೈಭವದ ಸ್ಥಿತಿಗೆ ತಲುಪಬೇಕಾಗಿದೆ.

ಈ ಸಂಕಲ್ಪದ ಸಾಕಾರಕ್ಕಾಗಿ ಎಲ್ಲರೂ ಒಂದಾಗಿ ಕೆಲಸ ಮಾಡುತ್ತೇವೆ. ಪುತ್ತಿಲ ಪರಿವಾರಕ್ಕೆ ಮಾತುಕತೆಯ ಎಲ್ಲಾ ದ್ವಾರಗಳು ತೆರೆದಿದ್ದು, ಜಿಲ್ಲಾಧ್ಯಕ್ಷರು ಹೇಳಿದ ಮಾತಿಗೆ ನಾವೆಲ್ಲರೂ ಬದ್ಧರಾಗಿದ್ದೇವೆ. ಸಂಘಟನೆ ತೀರ್ಮಾನ ತೆಗೆದುಕೊಳ್ಳುತ್ತದೆ ಅದಕ್ಕೆ ಒಟ್ಟಾಗಿ ಕೆಲಸ ಮಾಡುತ್ತೇವೆ. ಜಿಲ್ಲೆಯಲ್ಲಿ ಪಕ್ಷದ ಅಧ್ಯಕ್ಷರು ಸರ್ವೋಚ್ಛರಾಗಿದ್ದು, ಅವರ ಕೆಳಗೆ ನಾವು ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.

Advertisement

ವಿಭಾಗ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಮುಖಂಡರಾದ ಸಹಜ್ ರೈ, ಚನಿಲ ತಿಮ್ಮಪ್ಪ ಶೆಟ್ಟಿ, ಚಂದ್ರಶೇಖರ್ ಬಪ್ಪಳಿಗೆ, ಯುವರಾಜ್ ಪೆರ್ವತೋಡಿ, ಹರೀಶ್ ಬಿಜಾತ್ರೆ, ನಿತೇಶ್ ಕುಮಾರ್ ಶಾಂತಿವನ, ಮತ್ತಿತರರು ಉಪಸ್ಥಿತರಿದ್ದರು.

Advertisement
Tags :
LatetsNewsMANGALOARNewsKannadaಬ್ರಿಜೇಶ್ ಚೌಟ
Advertisement
Next Article