For the best experience, open
https://m.newskannada.com
on your mobile browser.
Advertisement

317 ಕೆಜಿ ತೂಕದ ಬ್ರಿಟನ್‌ನ ಅತಿ ಭಾರದ ವ್ಯಕ್ತಿ ನಿಧನ

ಬ್ರಿಟನ್‌ನ ಅತಿ ಭಾರದ ವ್ಯಕ್ತಿ ಜೇಸನ್ ಹಾಲ್ಟನ್ ನಿಧನ ಹೊಂದಿದ್ದಾರೆ. ತಮ್ಮ 34ನೇ ಹುಟ್ಟುಹಬ್ಬದ ಒಂದು ವಾರ ಮೊದಲು ಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆ.
10:51 AM May 07, 2024 IST | Nisarga K
317 ಕೆಜಿ ತೂಕದ ಬ್ರಿಟನ್‌ನ ಅತಿ ಭಾರದ ವ್ಯಕ್ತಿ ನಿಧನ
317 ಕೆಜಿ ತೂಕದ ಬ್ರಿಟನ್‌ನ ಅತಿ ಭಾರದ ವ್ಯಕ್ತಿ ನಿಧನ

ಲಂಡನ್: ಬ್ರಿಟನ್‌ನ ಅತಿ ಭಾರದ ವ್ಯಕ್ತಿ ಜೇಸನ್ ಹಾಲ್ಟನ್ ನಿಧನ ಹೊಂದಿದ್ದಾರೆ. ತಮ್ಮ 34ನೇ ಹುಟ್ಟುಹಬ್ಬದ ಒಂದು ವಾರ ಮೊದಲು ಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆ.

Advertisement

ಹಾಲ್ಟನ್‌ ಅವರ ಮೂತ್ರಪಿಂಡಗಳು ಕೆಲಸ ಮಾಡುವುದನ್ನು ನಿಲ್ಲಿಸಿತ್ತು. ಒಂದು ವಾರದೊಳಗೆ ಹಾಲ್ಟನ್ ಸಾಯುತ್ತಾನೆ ಎಂದು ವೈದ್ಯರು ಹೇಳಿದ್ದರು.ಹಾಲ್ಟನ್ ಒಂದು ದಿನಕ್ಕೆ 10,000 ಕ್ಯಾಲೊರಿಗಳನ್ನು ಹೊಂದಿರುವ ಆಹಾರ ಸೇವಿಸುತ್ತಿದ್ದರು. ಉಪಹಾರಕ್ಕಾಗಿ ಡೋನರ್ ಕಬಾಬ್‌ಗಳನ್ನು ತಿನ್ನುತ್ತಿದ್ದ ಅವರ ಆಹಾರದ ಖರ್ಚೇ ಒಂದು ವರ್ಷಕ್ಕೆ 10 ಸಾವಿರ ಡಾಲರ್ ಮೀರುತ್ತಿತ್ತು.

ಹಾಲ್ಟನ್ ವಿಶೇಷವಾಗಿ ಅಳವಡಿಸಿದ ಬಂಗಲೆಯಲ್ಲಿ ವಾಸಿಸುತ್ತಿದ್ದರು. ಅವರ ಬಳಕೆಗಾಗಿ ಗಟ್ಟಿಮುಟ್ಟಾದ ವಿಶೇಷ ಪೀಠೋಪಕರಣಗಳನ್ನು ನಿರ್ಮಾಣ ಮಾಡಲಾಗಿತ್ತು. ಅವರ ಜೀವನದ ಕೊನೆಯ ಭಾಗದಲ್ಲಿ ಹಾಸಿಗೆ ಹಿಡಿದಿದ್ದರು. ಅವರ ಬಳಿ ಅತ್ತಂದಿತ್ತ ಚಲಿಸಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೇ, ಹಾಲ್ಟನ್ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

Advertisement

Advertisement
Tags :
Advertisement