For the best experience, open
https://m.newskannada.com
on your mobile browser.
Advertisement

ಮೊಬೈಲ್‌ಗಾಗಿ ತಮ್ಮನನ್ನೆ ಕೊಂದ ಪಾಪಿ ಅಣ್ಣ

ಆನೇಕಲ್ ತಾಲ್ಲೂಕಿನ ನೆರಿಗಾ ಗ್ರಾಮದಲ್ಲಿ ನಡೆದಿದ್ದ 15 ವರ್ಷದ ಬಾಲಕನ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮೃತ ಬಾಲಕ ಪ್ರಾಣೇಶ್‌ ಆಂಧ್ರದಲ್ಲಿ 7ನೇ ತರಗತಿ ಓದುತ್ತಿದ್ದ. ಅಜ್ಜಿಯ ಜೊತೆಗೆ ವಾಸವಿದ್ದ ಪ್ರಾಣೇಶ್‌, ಬೇಸಿಗೆ ರಜೆ ಹಿನ್ನೆಲೆಯಲ್ಲಿ ನೆರಿಗಾ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದ ತಂದೆ-ತಾಯಿ ಬಳಿಗೆ ಬಂದಿದ್ದ.18 ವರ್ಷದ ಶಿವಕುಮಾರ್ ತಮ್ಮನನ್ನೇ ಕೊಲೆಗೈದ ಆರೋಪಿ.
02:43 PM May 19, 2024 IST | Nisarga K
ಮೊಬೈಲ್‌ಗಾಗಿ ತಮ್ಮನನ್ನೆ ಕೊಂದ ಪಾಪಿ ಅಣ್ಣ
ಮೊಬೈಲ್‌ಗಾಗಿ ತಮ್ಮನನ್ನೆ ಕೊಂದ ಪಾಪಿ ಅಣ್ಣ

ಬೆಂಗಳೂರು: ಆನೇಕಲ್ ತಾಲ್ಲೂಕಿನ ನೆರಿಗಾ ಗ್ರಾಮದಲ್ಲಿ ನಡೆದಿದ್ದ 15 ವರ್ಷದ ಬಾಲಕನ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮೃತ ಬಾಲಕ ಪ್ರಾಣೇಶ್‌ ಆಂಧ್ರದಲ್ಲಿ 7ನೇ ತರಗತಿ ಓದುತ್ತಿದ್ದ. ಅಜ್ಜಿಯ ಜೊತೆಗೆ ವಾಸವಿದ್ದ ಪ್ರಾಣೇಶ್‌, ಬೇಸಿಗೆ ರಜೆ ಹಿನ್ನೆಲೆಯಲ್ಲಿ ನೆರಿಗಾ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದ ತಂದೆ-ತಾಯಿ ಬಳಿಗೆ ಬಂದಿದ್ದ.18 ವರ್ಷದ ಶಿವಕುಮಾರ್ ತಮ್ಮನನ್ನೇ ಕೊಲೆಗೈದ ಆರೋಪಿ.

Advertisement

ಕೊಲೆ ಮಾಡಿರುವ ಆರೋಪಿ 3 ತಿಂಗಳ ಹಿಂದೆ ನೆರಿಗಾ ಗ್ರಾಮಕ್ಕೆ ಬಂದಿದ್ದ ಕುಟುಂಬದ ಜೊತೆ ಆರೋಪಿ ಕೂಡ ಗಾರೇ ಕೆಲಸ ಮಾಡುತ್ತಿದ್ದ. ಇಬ್ಬರಿಗೂ ಆನ್‌ಲೈನ್‌ ಗೇಮ್‌ಗಳ ಬಹಳ ಹುಚ್ಚಿತ್ತು. ಹೀಗಾಗಿ ಇಬ್ಬರು ಮೊಬೈಲ್​ಗಾಗಿ ಆಗಾಗ ಗಲಾಟೆ ಮಾಡಿಕೊಳ್ಳುತ್ತಿದ್ದರು.

ಕಳೆದ ಮೇ 15ನೇ ತಾರೀಖು ತಮ್ಮನನ್ನೇ ಕೊಲೆ ಮಾಡಲು ಅಣ್ಣ ಸ್ಕೆಚ್ ಹಾಕಿದ್ದಾನೆ. ಕೆಲಸದ ಸ್ಥಳದಿಂದ ಸುತ್ತಿಗೆ ಜೇಬಿನಲ್ಲಿ ಇಟ್ಟುಕೊಂಡು ಬಂದಿದ್ದಾನೆ. ಬಯಲು ಶೌಚಾಲಯಕ್ಕೆ ಹೋಗಿದ್ದ ಪ್ರಾಣೇಶನನ್ನು ಹಿಂಬಾಲಿಸಿಕೊಂಡು ಅಲ್ಲೇ ಸುತ್ತಿಗೆಯಿಂದ ತಲೆ ಹಾಗೂ ಎದೆ ಭಾಗಕ್ಕೆ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಪ್ರಾಣೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

Advertisement

Advertisement
Tags :
Advertisement