ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅಮೆರಿಕಾದಲ್ಲಿ ಬುಬೊನಿಕ್‌ ಪ್ಲೇಗ್‌ ಪತ್ತೆ; ಬೆಕ್ಕಿನಿಂದ ಹರಡಿದ ಸೋಂಕು

ಸದ್ಯ ಕೋವಿಡ್‌ ನಿಂದ ಮುಕ್ತಿಪಡೆದು ಮನಸ್ಸಿಗೆ ಶಾಂತಿ ಸಿಕ್ಕಿತು ಎನ್ನುವಷ್ಟರಲ್ಲಿ ಇದೀಗ ಅಮೆರಿಕದ ಒರೆಗಾನ್‌ ರಾಜ್ಯದಲ್ಲಿ ಅಪರೂಪದ ಕಾಯಿಲೆಯೊಂದರ ಪ್ರಕರಣ ದಾಖಲಾಗಿದೆ. ಒಬ್ಬ ವ್ಯಕ್ತಿಗೆ ಪ್ಲೇಗ್‌ ರೋಗ ಪತ್ತೆಯಾಗಿದ್ದು ಇದು ಸಾಕು ಬೆಕ್ಕಿನಿಂದ ಹರಡಿದೆ ಎಂದು ಹೇಳಲಾಗಿದೆ.
01:09 PM Feb 20, 2024 IST | Gayathri SG

ಸದ್ಯ ಕೋವಿಡ್‌ ನಿಂದ ಮುಕ್ತಿಪಡೆದು ಮನಸ್ಸಿಗೆ ಶಾಂತಿ ಸಿಕ್ಕಿತು ಎನ್ನುವಷ್ಟರಲ್ಲಿ ಇದೀಗ ಅಮೆರಿಕದ ಒರೆಗಾನ್‌ ರಾಜ್ಯದಲ್ಲಿ ಅಪರೂಪದ ಕಾಯಿಲೆಯೊಂದರ ಪ್ರಕರಣ ದಾಖಲಾಗಿದೆ. ಒಬ್ಬ ವ್ಯಕ್ತಿಗೆ ಪ್ಲೇಗ್‌ ರೋಗ ಪತ್ತೆಯಾಗಿದ್ದು ಇದು ಸಾಕು ಬೆಕ್ಕಿನಿಂದ ಹರಡಿದೆ ಎಂದು ಹೇಳಲಾಗಿದೆ.

Advertisement

ಯೂರೋಪಿನಲ್ಲಿ ಕಾಣಿಸಿಕೊಂಡು ಭಾರಿ ಹಾನಿಯನ್ನುಂಟುಮಾಡಿದ್ದ ಈ ಕಾಯಿಲೆ ದೇಶದ ಅರ್ಧದಷ್ಟು ಜನರನ್ನು ಬಲಿ ಪಡೆದಿತ್ತು. ಇದನ್ನು ಬ್ಲಾಕ್‌ ಡೆತ್‌ ಎಂದು ಗುರುತಿಸಲಾಗಿದೆ.ರೋಗಿಗೆ ಮತ್ತು ರೋಗಿ ಸಂಪರ್ಕದಲ್ಲಿದ್ದವರನ್ನು ಗುರುತಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಈ ರೋಗಕ್ಕೆ ಕಾರಣವಾದ ಬೆಕ್ಕಿಗೂ ಕೂಡ ಚಿಕಿತ್ಸೆ ನೀಡಲಾಗುತ್ತಿದೆ.

ವಿಚಿತ್ರ ಏನೆಂದರೆ ಪ್ಲೇಗ್‌ ಸೋಂಕು ಹರಡಿದ 8 ದಿನಗಳ ನಂತರ ಮಾನವರಲ್ಲಿ ರೋಗದ ಲಕ್ಷಣ ಕಾಣಿಸಿಕೊಳ್ಳುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಜೊತೆಗೆ ರೋಗದ ಲಕ್ಷಣಗಳಾದ ಜ್ವರ,ದೌರ್ಬಲ್ಯ,ಶೀತ ಮತ್ತು ಕೀಲು ನೋವು ಕಾಣಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.

Advertisement

ಪ್ಲೇಗ್‌ ಸೋಂಕನ್ನು ಆರಂಭಿಕ ಹಂತದಲ್ಲೆ ಗುರುತಿಸಿ ಚಿಕಿತ್ಸೆ ನೀಡಬೇಕು ಇಲ್ಲದಿದ್ದರೆ ಇದು ಸೆಪ್ಟಿಸಿಮಿಕ್‌ಗೆ ಬದಲಾಗುವ ಸಾಧ್ಯತೆ ಇದೆ. ಇದು ರಕ್ತದಲ್ಲಿ ಸೋಂಕನ್ನು ಉಂಟುಮಾಡುವುದರ ಜೊತೆಗೆ ಶ್ವಾಸಕೋಶಕ್ಕೂ ಹಾನಿ ಉಂಟುಮಾಡುತ್ತದೆ. 14ನೇ ಶತಮಾನದಲ್ಲಿ ಯೂರೊಪಿಗೆ ಕಾಲಿಟ್ಟಿದ್ದ ಈ ಸೋಂಕು 5 ಮಿಲಿಯನ್‌ ಜನರನ್ನು ಬಲಿ ಪಡೆದಿತ್ತು.ಆದರೆ ಒರೆಗಾನ್‌ ನಲ್ಲಿ ಕಂಡುಬಂದಿರುವುದು ವಿಚಿತ್ರ.

Advertisement
Tags :
AMERICALatestNewsNewsKannada
Advertisement
Next Article