For the best experience, open
https://m.newskannada.com
on your mobile browser.
Advertisement

ಬೈಕ್​​​ ಸವಾರನ ಮೇಲೆ ಏಕಾಏಕಿ ದಾಳಿ ಮಾಡಿದ ದನ: ವೈರಲ್‌ ವಿಡಿಯೋ

ನಡುರಸ್ತೆಯಲ್ಲಿ ಮಲಗಿದ್ದ ದನವೊಂದು ಏಕಾಏಕಿ ದ್ವಿಚಕ್ರ ವಾಹನ ಸವಾರನ ಮೇಲೆ ದಾಳಿ ಮಾಡಿದೆ. ಆ ವ್ಯಕ್ತಿಯನ್ನು ಬೈಕ್‌ನಿಂದ ತಳ್ಳಿ ಹಾಕಿ, ಕೊಂಬಿನಿಂದ ಆತನ ಮೇಲೆ ದಾಳಿ ಮಾಡಿದೆ. ಸದ್ಯ ಈ ವಿಡಿಯೋ @gharkekalesh ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.
03:57 PM Jan 09, 2024 IST | Ashitha S
ಬೈಕ್​​​ ಸವಾರನ ಮೇಲೆ ಏಕಾಏಕಿ ದಾಳಿ ಮಾಡಿದ ದನ  ವೈರಲ್‌ ವಿಡಿಯೋ

ವೈರಲ್: ನಡುರಸ್ತೆಯಲ್ಲಿ ಮಲಗಿದ್ದ ದನವೊಂದು ಏಕಾಏಕಿ ದ್ವಿಚಕ್ರ ವಾಹನ ಸವಾರನ ಮೇಲೆ ದಾಳಿ ಮಾಡಿದೆ. ಆ ವ್ಯಕ್ತಿಯನ್ನು ಬೈಕ್‌ನಿಂದ ತಳ್ಳಿ ಹಾಕಿ, ಕೊಂಬಿನಿಂದ ಆತನ ಮೇಲೆ ದಾಳಿ ಮಾಡಿದೆ. ಸದ್ಯ ಈ ವಿಡಿಯೋ @gharkekalesh ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

Advertisement

ವೈರಲ್ ವೀಡಿಯೊ ದನ ನಡುರಸ್ತೆಯಲ್ಲಿ ನಿಂತಿರುವುದನ್ನು ಕಾಣಬಹುದು. ರಸ್ತೆಯ ಇನ್ನೊಂದು ಬದಿಯಲ್ಲಿ ಟ್ರಾಫಿಕ್​​​ ಸಿಗ್ನಲ್​ನಿಂದಾಗಿ ವಾಹನಗಳು ನಿಂತಿರುವುದು ಕಾಣಬಹುದು. ಬೈಕ್‌ ಬರುತ್ತಿದ್ದಂತೆ ಏಕಾಏಕಿ ಓಡಿ ಬಂದು ದಾಳಿ ಮಾಡಿದೆ.ಆ ವ್ಯಕ್ತಿಯನ್ನು ಬೈಕ್‌ನಿಂದ ತಳ್ಳಿ ಕೆಳಗೆ ಎಸೆದಿದೆ.

ವ್ಯಕ್ತಿಯನ್ನು ರಕ್ಷಿಸಲು ಸ್ಥಳೀಯರು ಮುಂದಾಗಿದ್ದಾರೆ. ಆದರೆ ಸ್ಥಳೀಯರ ಮೇಲೂ ದನ ದಾಳಿ ಮಾಡಲು ಮುಂದಾಗಿದೆ. ಅವರೆಲ್ಲರೂ ಪ್ರಾಣ ಉಳಿಸಿಕೊಳ್ಳಲು ಓಡಿಹೋಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆದರೆಈ ಘಟನೆ ಎಲ್ಲಿ ನಡೆದಿದೆ ಎಂದು ಸ್ಪಷ್ಟವಾಗಿ ತಿಳಿದುಬಂದಿಲ್ಲ.

Advertisement

Advertisement
Tags :
Advertisement