ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಾರುಕಟ್ಟೆಗೆ ಬರಲಿದೆ ಎಮ್ಮೆ ಹಾಲು: ರೇಟ್‌ ಎಷ್ಟು ಗೊತ್ತಾ?

ಕೆಎಂಎಫ್‌ ಈಗಾಲೇ ಹಲವು ರೀತಿ ಹಾಲು, ಹಾಲಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದೀಗ ಕೆಎಂಎಫ್‌ ಎಮ್ಮೆಯ ಹಾಲು ಮಾರಾಟ ಮಾಡಲು ಸಿದ್ಧವಾಗಿದೆ.
03:04 PM Dec 19, 2023 IST | Ashika S

ಬೆಂಗಳೂರು: ಕೆಎಂಎಫ್‌ ಈಗಾಲೇ ಹಲವು ರೀತಿ ಹಾಲು, ಹಾಲಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದೀಗ ಕೆಎಂಎಫ್‌ ಎಮ್ಮೆಯ ಹಾಲು ಮಾರಾಟ ಮಾಡಲು ಸಿದ್ಧವಾಗಿದೆ.

Advertisement

ಡಿಸೆಂಬರ್ 21 ಮತ್ತು 22 ರಿಂದ ರಾಜ್ಯಾದ್ಯಂತ ಮಾರುಕಟ್ಟೆಗಳಲ್ಲಿ ಎಮ್ಮೆಯ ಹಾಲು ಮಾರಾಟ ಪ್ರಾರಂಭವಾಗಲಿದ್ದು, ಅದರ ಬೆಲೆ ಲೀಟರ್ ಗೆ ಸುಮಾರು 70-75 ರೂಪಾಯಿಗಳಾಗಿರುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದೆ, ಕೆಎಂಎಫ್ ಸುಮಾರು 4,000-5,000 ಲೀಟರ್ ಎಮ್ಮೆ ಹಾಲನ್ನು ಮಾರಾಟ ಮಾಡುತ್ತಿತ್ತು, ನಂತರ ಪೂರೈಕೆ ಕೊರತೆಯಿಂದಾಗಿ ಸ್ಥಗಿತಗೊಂಡಿತು. ಎಂದು ಅವರು ಹೇಳಿದರು. ಎಲ್ಲಾ ಒಕ್ಕೂಟಗಳಲ್ಲಿ ಹಾಲು ಪೂರೈಸಲು ಸಾಕಷ್ಟು ಎಮ್ಮೆಗಳಿಲ್ಲದ ಕಾರಣ ವಿಜಯಪುರ ಮತ್ತು ಬೆಳಗಾವಿಯ ರೈತರಿಂದ ಹಾಲು ಖರೀದಿಸಲಾಗುತ್ತದೆ.

Advertisement

ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಎಮ್ಮೆಗಳಿದ್ದು, ಅಲ್ಲಿಂದಲೇ ಹಾಲು ಸಂಗ್ರಹಿಸಲಾಗುವುದು. ಮಾರುಕಟ್ಟೆ ಮತ್ತು ಬೇಡಿಕೆಗೆ ಅನುಗುಣವಾಗಿ ಸಂಗ್ರಹಣೆ ಹೆಚ್ಚಲಿದೆ ಎಂದು ಜಗದೀಶ್ ತಿಳಿಸಿದರು.

Advertisement
Tags :
LatetsNewsNewsKannadaಎಮ್ಮೆಯ ಹಾಲುಕೆಎಂಎಫ್ಬಿಡುಗಡೆಮಾರುಕಟ್ಟೆಹಾಲಿನ ಉತ್ಪನ್ನಹಾಲು
Advertisement
Next Article