ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬೆಂಗಳೂರಲ್ಲಿಂದು ಬುಲ್ಸ್‌ vs ಡೆಲ್ಲಿ ಫೈಟ್

ಗೆಲ್ಲಬಹುದಾಗಿದ್ದ ಪಂದ್ಯಗಳನ್ನು ಕೊನೆ ಕ್ಷಣದ ಒತ್ತಡದಿಂದಾಗಿ ಕೈಚೆಲ್ಲಿ 10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಜಯದ ಖಾತೆ ಇನ್ನೂ ಬೆಂಗಳೂರು ಬುಲ್ಸ್‌ ತೆರೆದಿಲ್ಲ.
01:12 PM Dec 08, 2023 IST | Ramya Bolantoor

ಬೆಂಗಳೂರು: ಗೆಲ್ಲಬಹುದಾಗಿದ್ದ ಪಂದ್ಯಗಳನ್ನು ಕೊನೆ ಕ್ಷಣದ ಒತ್ತಡದಿಂದಾಗಿ ಕೈಚೆಲ್ಲಿ 10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಜಯದ ಖಾತೆ ಇನ್ನೂ ಬೆಂಗಳೂರು ಬುಲ್ಸ್‌ ತೆರೆದಿಲ್ಲ. ಇನ್ನು ಇಂದು ಬೆಂಗಳೂರು ಬುಲ್ಸ್‌ ತಂಡ ಇನ್ನು ತವರಿನ ಅಂಗಳದಲ್ಲಿ ಅದೃಷ್ಟ ಪರೀಕ್ಷೆಗಿಳಿಯಲಿದೆ. ಇಂದು ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬುಲ್ಸ್‌ಗೆ ಟೂರ್ನಿಯ ತನ್ನ 3ನೇ ಪಂದ್ಯದಲ್ಲಿ 8ನೇ ಆವೃತ್ತಿಯ ಚಾಂಪಿಯನ್‌ ದಬಾಂಗ್‌ ಡೆಲ್ಲಿ ಸವಾಲು ಎದುರಾಗಲಿದೆ.

Advertisement

ಸೌರಭ್‌ ನಂದಲ್‌ ನಾಯಕತ್ವದ ಬೆಂಗಳೂರು ಬುಲ್ಸ್‌ ಮೊದಲೆರಡು ಪಂದ್ಯಗಳಲ್ಲಿ ಗುಜರಾತ್‌ ಜೈಂಟ್ಸ್‌ ಹಾಗೂ ಬೆಂಗಾಲ್‌ ವಾರಿಯರ್ಸ್‌ ವಿರುದ್ಧ ಸೋಲನುಭವಿಸಿದೆ. ಆದರೆ ಇವೆರಡೂ ಬುಲ್ಸ್‌ಗೆ ಗೆಲುವಿನ ನಿರೀಕ್ಷೆ ಹುಟ್ಟಿಸಿದ್ದ ಪಂದ್ಯಗಳು.

ಆರಂಭದಲ್ಲಿ ಪಡೆದಿದ್ದ ಮುನ್ನಡೆಯನ್ನು ಉಳಿಸಿಕೊಳ್ಳಲಾಗದೆ ಕೊನೆ ಕ್ಷಣದಲ್ಲಿ ತಂಡಕ್ಕೆ ಸೋಲು ಎದುರಾಗಿದ್ದವು. ಇಂದು ಪಂದ್ಯ ಸಂಜೆ 7:30ಕ್ಕೆ ಪ್ರಾರಂಭವಾಗಲಿದೆ. ಹೀಗಾಗಿ ಇಂದಿನ ಪಂದ್ಯ ರೋಚಕತೆಯಿಂದ ನಡೆಯುವ ಸಾದ್ಯತೆಯಿದೆ. ಇನ್ನು ನಟ ಸುದೀಪ್‌ ಇಂದು ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿ ಬೆಂಗಳೂರು ಬುಲ್ಸ್‌-ದಬಾಂಗ್‌ ಡೆಲ್ಲಿ ಪಂದ್ಯ ವೀಕ್ಷಿಸಲಿದ್ದಾರೆ.

Advertisement

Advertisement
Tags :
KARNATAKALatestNewsNewsKannadasportsಬೆಂಗಳೂರು
Advertisement
Next Article