ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನಮ್ಮ ಗೆಲುವನ್ನು ಯಾವ ದುಷ್ಟ ಶಕ್ತಿಯೂ ತಡೆಯಲಾರದು : ವಿಜಯೇಂದ್ರ

ಲೋಕಸಭಾ ಚುನಾವಣೆ ಹಿನ್ನಲೆ, ಈ ಬಾರಿ ರಾಜ್ಯದ 28ಕ್ಕೆ 28ಕ್ಷೇತ್ರಗಳಲ್ಲಿ ಬಿಜೆಪಿಯ ಗೆಲುವು ಖಚಿತ ಎಂದು ಭರವಸೆ ನೀಡಿದ್ದಾರೆ .ಬಿಜೆಪಿ ಸರ್ಕಾರ ಜನಪರ ಸರ್ಕಾರ. ಕೇಂದ್ರ ಸರ್ಕಾರ ಜನರಿಗಾಗಿ ದುಡಿದಿದೆ. ಹಾಗೂ ಜನತೆಗೆ ಕೂಡ ಮೋದಿಯವರನ್ನೆ ಮತ್ತೊಮ್ಮೆ ಪ್ರಧಾನಿಯಾಗಿ ನೋಡಬೇಕು ಎಂಬ ಆಸೆ ಇದೆ ಹಾಗಾಗಿ ಈ ಬಾರಿಯ ಬಿಜೆಪಿ ಗೆಲುವನ್ನು ತಡೆಯಲು ಯಾವ ದುಷ್ಟಶಕ್ತಿಯಿಂದಲು ಸಾಧ್ಯವಿಲ್ಲ ಎಂದರು.
02:47 PM Mar 17, 2024 IST | Nisarga K
ನಮ್ಮ ಗೆಲುವನ್ನು ಯಾವ ದುಷ್ಟ ಶಕ್ತಿಯೂ ತಡೆಯಲಾರದು : ವಿಜಯೇಂದ್ರ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನಲೆ, ಈ ಬಾರಿ ರಾಜ್ಯದ 28ಕ್ಕೆ 28ಕ್ಷೇತ್ರಗಳಲ್ಲಿ ಬಿಜೆಪಿಯ ಗೆಲುವು ಖಚಿತ ಎಂದು ಭರವಸೆ ನೀಡಿದ್ದಾರೆ .ಬಿಜೆಪಿ ಸರ್ಕಾರ ಜನಪರ ಸರ್ಕಾರ. ಕೇಂದ್ರ ಸರ್ಕಾರ ಜನರಿಗಾಗಿ ದುಡಿದಿದೆ. ಹಾಗೂ ಜನತೆಗೆ ಕೂಡ ಮೋದಿಯವರನ್ನೆ ಮತ್ತೊಮ್ಮೆ ಪ್ರಧಾನಿಯಾಗಿ ನೋಡಬೇಕು ಎಂಬ ಆಸೆ ಇದೆ ಹಾಗಾಗಿ ಈ ಬಾರಿಯ ಬಿಜೆಪಿ ಗೆಲುವನ್ನು ತಡೆಯಲು ಯಾವ ದುಷ್ಟಶಕ್ತಿಯಿಂದಲು ಸಾಧ್ಯವಿಲ್ಲ ಎಂದರು.

Advertisement

ಬೆಂಗಳೂರು ಕೇಂದ್ರ ಜಿಲ್ಲೆ ಲೋಕಸಭಾ ಕ್ಷೇತ್ರದ ಚುನಾವಣಾ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಬಿ.ವೈ. ವಿಜಯೇಂದ್ರ ಮೋದಿಯವರನ್ನು ಶ್ಲಾಘಿಸುವುದಲ್ಲದೆ ಅವರ ಕಾರ್ಯಗಳನ್ನು ವಿವರಿಸಿದ್ದಾರೆ. ಮತ್ತು ಕಾರ್ಯಕರ್ತರಿಗೆ ಕಿವಿಮಾತು ನೀಡಿದ ಅವರು ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು ಎಂದರೆ ನಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು.ಕಾರ್ಯಕರ್ತರು ಮನೆ ಮನೆಗೆ ತೆರಳಿ ಬಿಜೆಪಿ ಪರ‌ ಮತಯಾಚನೆ ಮಾಡೋಣ. ಸುಳ್ಳು ಭರವಸೆ ನೀಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡೋಣ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

ಕಾರ್ಯಕ್ರಮದಲ್ಲಿ ಮಾತಾನಾಡಿ, ಸಂಸದ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪಿ.ಸಿ. ಮೋಹನ್ ಅವರ ಗೆಲುವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.ಹಾಗೂ ಮೋದಿಯವರನ್ನು ಪ್ರಧಾನಿ ಆಗದಂತೆ ತಡೆಯಲು ಸಾಧ್ಯವಿಲ್ಲ ಎಂದರು.
ಶಾಸಕರಾದ ಎಸ್. ಸುರೇಶ್ ಕುಮಾರ್, ಎಸ್. ರಘು, ಮಂಜುಳಾ ಲಿಂಬಾವಳಿ, ಶರಣು ತಳ್ಳಿಕೇರಿ ಹಾಗೂ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಸೇರಿದಂತೆ ಮಾಜಿ ಪಾಲಿಕೆ ಸದಸ್ಯರು, ಪದಾಧಿಕಾರಿಗಳು, ಕಾರ್ಯಕರ್ತರು ಭಾಗಿಯಾಗಿದ್ದಾರೆ.

Advertisement

Advertisement
Tags :
bengaluruBJPBYvijeyendraCongressELECTIONLatestNewslokasabha electionNewsKannadaPOLITICS
Advertisement
Next Article