For the best experience, open
https://m.newskannada.com
on your mobile browser.
Advertisement

ರಾಮೇಶ್ವರಂ ಕೆಫೆ ಬಾಂಬರ್‌ ಎನ್‌ ಐಎ ಕೋರ್ಟ್​ಗೆ ಹಾಜರು: ವಿಡಿಯೋ ರಿಲೀಸ್‌

ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ, ಶಂಕಿತ ಉಗ್ರನನ್ನು ಎನ್‌ ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಅಬ್ದುಲ್ ಮತೀನ್ ತಾಹಾ, ಮುಜವೀರ್ ಹುಸೇನ್ ಸಾಜೀಬ್‌ ಅನ್ನು ವಶಕ್ಕೆ ಪಡೆದಿದ್ದು, ಎನ್‌ ಐಎ ಕೋರ್ಟ್‌ಗೆ ಹಾಜರು ಪಡಿಸಲಾಗಿದೆ.
06:00 PM Apr 12, 2024 IST | Ashitha S
ರಾಮೇಶ್ವರಂ ಕೆಫೆ ಬಾಂಬರ್‌ ಎನ್‌ ಐಎ ಕೋರ್ಟ್​ಗೆ ಹಾಜರು  ವಿಡಿಯೋ ರಿಲೀಸ್‌

ನವದೆಹಲಿ: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ, ಶಂಕಿತ ಉಗ್ರನನ್ನು ಎನ್‌ ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಅಬ್ದುಲ್ ಮತೀನ್ ತಾಹಾ, ಮುಜವೀರ್ ಹುಸೇನ್ ಸಾಜೀಬ್‌ ಅನ್ನು ವಶಕ್ಕೆ ಪಡೆದಿದ್ದು, ಎನ್‌ ಐಎ ಕೋರ್ಟ್‌ಗೆ ಹಾಜರು ಪಡಿಸಲಾಗಿದೆ.

Advertisement

ಕಳೆದ ಒಂದು ತಿಂಗಳಿಂದ ದೇಶದ ಹಲವೆಡೆ ಶೋಧ ಕಾರ್ಯ ನಡೆಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ ಕೋಲ್ಕತ್ತಾದಲ್ಲಿ ಯಶಸ್ವಿಯಾಗಿದೆ. ರಹಸ್ಯ ಕಾರ್ಯಾಚರಣೆ ಮಾಡಿ ಬಂಧಿಸಿರುವ ಇಬ್ಬರು ಆರೋಪಿಗಳನ್ನು ಎನ್‌ ಐಎ ಅಧಿಕಾರಿಗಳು ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಕೋಲ್ಕತ್ತಾದಲ್ಲಿ ಎನ್​ಐಎ ಅಧಿಕಾರಿಗಳು ಉಗ್ರರಾದ ಮುಜವೀರ್ ಹುಸೇನ್ ಸಾಜೀಬ್ ಹಾಗೂ ಅಬ್ದುಲ್​ ಮತೀನ್ ಬಂಧಿಸಿರೋ ವಿಡಿಯೋ ಬಹಿರಂಗವಾಗಿದೆ. ಸದ್ಯ NIA ಅಧಿಕಾರಿಗಳು ಕೋಲ್ಕತ್ತಾ ಕೋರ್ಟ್‌ಗೆ ಹಾಜರುಪಡಿಸಿ ಬಾಡಿ ವಾರಂಟ್ ಪಡೆಯಲಿದ್ದಾರೆ. ಇದಾದ ಮೇಲೆ ಉಗ್ರರನ್ನು ಬೆಂಗಳೂರಿಗೆ ಕರೆ ತಂದು ವಿಚಾರಣೆ ನಡೆಸಲಿದ್ದಾರೆ.

Advertisement

Advertisement
Tags :
Advertisement