ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕೆಫೆ ಸ್ಫೋಟ ಪ್ರಕರಣ: ರಾಜ್ಯದ ಹಲವು ಕಡೆ ಎನ್ ಐಎ ದಾಳಿ

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಐದು ಕಡೆ NIA ದಾಳಿ ನಡೆದಿದೆ. ಮಾತ್ರವಲ್ಲ ಶಿವಮೊಗ್ಗ ಹುಬ್ಬಳ್ಳಿಯಲ್ಲಿ ಕೂಡ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅನುಮಾನಾಸ್ಪದರ ಮನೆ ಮೇಲೆ ಮುಂಜಾನೆ ದಾಳಿ ನಡೆದಿದ್ದು, ಪ್ರಮುಖವಾಗಿ ಶಂಕಿತ ಉಗ್ರ ಮಹೆಬೂಬ್ ಪಾಷಾ ಮನೆ ಮೇಲೆ ಎನ್ ಐಎ ದಾಳಿ ನಡೆಸಿದೆ.
11:00 AM Mar 27, 2024 IST | Ashitha S

ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಐದು ಕಡೆ NIA ದಾಳಿ ನಡೆದಿದೆ. ಮಾತ್ರವಲ್ಲ ಶಿವಮೊಗ್ಗ ಹುಬ್ಬಳ್ಳಿಯಲ್ಲಿ ಕೂಡ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅನುಮಾನಾಸ್ಪದರ ಮನೆ ಮೇಲೆ ಮುಂಜಾನೆ ದಾಳಿ ನಡೆದಿದ್ದು, ಪ್ರಮುಖವಾಗಿ ಶಂಕಿತ ಉಗ್ರ ಮಹೆಬೂಬ್ ಪಾಷಾ ಮನೆ ಮೇಲೆ ಎನ್ ಐಎ ದಾಳಿ ನಡೆಸಿದೆ.

Advertisement

ಬೆಂಗಳೂರಿನ ಗುರಪ್ಪನಪಾಳ್ಯದ ಮೆಹಬೂಬ್ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.

ತಮಿಳುನಾಡಿನಲ್ಲಿ ಕೂಡ ಎನ್‌ಐಎ ದಾಳಿ ನಡೆದಿದೆ. ಇಬ್ಬರು ಶಂಕಿತರು ಚೆನ್ನೈನಲ್ಲಿ ತಂಗಿದ್ದಾರೆ ಎಂಬ ಗುಪ್ತಚರ ಮಾಹಿತಿಯ ಆಧಾರದಲ್ಲಿ ತಮಿಳುನಾಡಿನಲ್ಲಿ ದಾಳಿ ನಡೆದಿದೆ. ಈಗಾಗಲೇ ಪ್ರಮುಖ ಶಂಕಿತನನ್ನು ಗುರುತಿಸಿರುವ ಕೇಂದ್ರೀಯ ಭಯೋತ್ಪಾದನಾ ನಿಗ್ರಹ ತನಿಖಾ ಸಂಸ್ಥೆ ಇನ್ನೂ ಆತನನ್ನು ಪತ್ತೆ ಹಚ್ಚಿ ಬಂಧಿಸಿಲ್ಲ. ಟೋಪಿ ಮತ್ತು ಮುಖವಾಡ ಧರಿಸಿದ ಉಗ್ರ ಮಾರ್ಚ್ 1ರಂದು ಕೆಫೆಗೆ ಬಂದು ಸ್ಫೋಟ ನಡೆಸಿದ್ದ.

Advertisement

ಈ ಕೃತ್ಯದಿಂದ 9 ಮಂದಿ ಗಾಯಗೊಂಡಿದ್ದರು. ಪ್ರಕರಣ ತನಿಖೆಯನ್ನು ನಡೆಸುತ್ತಿರುವ ಅಧಿಕಾರಿಗಳು ಈಗಾಗಲೇ ಹಲವು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದೀಗ ಬೆಂಗಳೂರಿನ ಐದು ನಿವಾಸಗಳ ಮೇಲೆ ದಾಳಿ ಮಾಡಲಾಗಿದೆ.

Advertisement
Tags :
GOVERNMENTindiaKARNATAKALatestNewsNewsKarnatakaಕೆಫೆ ಸ್ಫೋಟಬೆಂಗಳೂರು
Advertisement
Next Article