For the best experience, open
https://m.newskannada.com
on your mobile browser.
Advertisement

ಕೆಫೆ ಸ್ಫೋಟ ಕೇಸ್​; ತಮಿಳುನಾಡಿನಿಂದ ಬಂದು ಬಾಂಬ್​ ಇಟ್ಟ ಶಂಕಿತ !

ನಗರದ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತನ ಜಾಡು ಹಿಡಿದ ಎನ್​ಐಎಗೆ ಚೆನ್ನೈ ಲಿಂಕ್ ಸಿಕ್ಕಿದ್ದು, ತಮಿಳುನಾಡಿನಿಂದ ಬಂದು ಬಾಂಬ್ ಇಟ್ಟು ಶಂಕಿತ ಪರಾರಿಯಾಗಿದ್ದಾನೆ.
09:42 AM Mar 23, 2024 IST | Ashitha S
ಕೆಫೆ ಸ್ಫೋಟ ಕೇಸ್​  ತಮಿಳುನಾಡಿನಿಂದ ಬಂದು ಬಾಂಬ್​ ಇಟ್ಟ ಶಂಕಿತ

ಬೆಂಗಳೂರು: ನಗರದ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತನ ಜಾಡು ಹಿಡಿದ ಎನ್​ಐಎಗೆ ಚೆನ್ನೈ ಲಿಂಕ್ ಸಿಕ್ಕಿದ್ದು, ತಮಿಳುನಾಡಿನಿಂದ ಬಂದು ಬಾಂಬ್ ಇಟ್ಟು ಶಂಕಿತ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

Advertisement

ಇನ್ನೂ ಸ್ಫೋಟಕ್ಕೂ ಮುನ್ನ 2 ತಿಂಗಳು ಇತ ತಮಿಳುನಾಡಿನಲ್ಲಿದ್ದ. ಶಂಕಿತ ಧರಿಸಿದ್ದ ಟೋಪಿಯ ಮೂಲ ಪತ್ತೆ ಹಚ್ಚಿದ್ದ ಎನ್​ಐಎಗೆ ಇದನ್ನು ತಮಿಳುನಾಡಿನ ಮಾಲ್​ವೊಂದರಲ್ಲಿ ಖರೀದಿಸಲಾಗಿರುವ ಮಾಹಿತಿ ದೊರೆತಿದ್ದು, ಜೊತೆಗೆ ಟೊಪ್ಪಿ ಖರೀದಿ ವೇಳೆ ಶಂಕಿತನ ಜೊತೆಗೆ ಮತ್ತೋರ್ವ ವ್ಯಕ್ತಿ ಇರುವುದು ಮಾಲ್​​ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತೊಂದೆಡೆ ಪತ್ತೆಯಾದ ಕ್ಯಾಪ್​​ನಲ್ಲಿ ಶಂಕಿತನ ಕೂದಲು ಪತ್ತೆಯಾಗಿದ್ದು, ಎನ್​ಐಎ ಅಧಿಕಾರಿಗಳು ಡಿಎನ್​​ಎ ಟೆಸ್ಟ್​ಗೆ ನೀಡಿದ್ದಾರೆ.

ಮುಖ್ಯವಾಗಿ ಎನ್ಐಎ ತನಿಖೆ ವೇಳೆ ಆ ಇಬ್ಬರು ಕರ್ನಾಟಕದವರೆಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಜೊತೆಗೆ ಅವರು ಶಿವಮೊಗ್ಗೆ ಜಿಲ್ಲೆಯ ಮುಸಾವೀರ್ ಮತ್ತು ಹುಸೇನ್ ಶಬೀದ್ ಎಂಬ ಕುರಿತು ಸುಳಿವು ದೊರೆತಿದೆ. ಇವರು ಎರಡು ತಿಂಗಳು ತಮಿಳುನಾಡಿನ ಲಾಡ್ಜ್​​ನಲ್ಲಿ ಉಳಿದುಕೊಂಡಿರುವುದು ಕೂಡ ಪತ್ತೆಯಾಗಿದೆ. ಹಾಗಾದರೆ ಶಂಕಿತರಿಗೂ ತಮಿಳುನಾಡಿಗೂ ಏನು ಸಂಬಂಧ ಎಂಬ ಬಗ್ಗೆ ತನಿಖೆ ಶುರುವಾಗಿದ್ದು, ಸದ್ಯ ಸಿಸಿಟಿವಿಗಳ ಆಧರಿಸಿ ಆರೋಪಿಗಳ ಜಾಲ ಪತ್ತೆ ಹಚ್ಚಲಾಗುತ್ತಿದೆ.

Advertisement

Advertisement
Tags :
Advertisement