ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ದಕ್ಷಿಣ ಕನ್ನಡ ಸಾಧ್ಯತೆಗಳ ಸಾಗರ : ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ದಕ್ಷಿಣ ಕನ್ನಡದ ಬಿಜೆಪಿ ಅಭ್ಯರ್ಥಿ ತಮ್ಮ ಕ್ಷೇತ್ರವನ್ನು ಸಾಧ್ಯತೆಗಳ ಸಾಗರ ಎಂದು ಕರೆದು, ಲಭ್ಯವಿರುವ ಸಂಪನ್ಮೂಲಗಳು ಹಾಗು ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಅಗತ್ಯ ಎಂದಿದ್ದಾರೆ.
07:24 PM Apr 24, 2024 IST | Nisarga K
ದಕ್ಷಿಣ ಕನ್ನಡ ಸಾಧ್ಯತೆಗಳ ಸಾಗರ : ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಮಂಗಳೂರು: ದಕ್ಷಿಣ ಕನ್ನಡದ ಬಿಜೆಪಿ ಅಭ್ಯರ್ಥಿ ತಮ್ಮ ಕ್ಷೇತ್ರವನ್ನು ಸಾಧ್ಯತೆಗಳ ಸಾಗರ ಎಂದು ಕರೆದು, ಲಭ್ಯವಿರುವ ಸಂಪನ್ಮೂಲಗಳು ಹಾಗು ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಅಗತ್ಯ ಎಂದಿದ್ದಾರೆ.

Advertisement

ಚುನಾವಣಾ ಪ್ರಚಾರದ ಕೊನೆಯ ದಿನವಾದ ಬುಧವಾರ ಮಾಧ್ಯಮದೊಂದಿಗೆ ಮಾತನಾಡಿದ ಚೌಟ, ನವಯುಗ ನವಪಥ ಪ್ರಣಾಳಿಕೆ ಗಮನಾರ್ಹ ಬದಲಾವಣೆ ತರುವ ೯ ವಿಷಯಗಳನ್ನು ಒಳಗೊಂಡಿದೆ ಎಂದರು. ʼಪ್ರಣಾಳಿಕೆಯು ಸಾರಿಗೆ ಸೌಕರ್ಯ ಅಭಿವೃದ್ಧಿ, ಗ್ರಾಮೀಣ ಜನರ ಅಗತ್ಯತೆಗಳ ಪೂರೈಕೆ, ಕೈಗಾರಿಕೆಗಳಿಗೆ ಉತ್ತೇಜನ, ಹೂಡಿಕೆ ಆಕರ್ಷಣೆ, ಸ್ಟಾರ್ಟ್ಪ್‌ಗಳಿಗೆ ಉತ್ತೇಜನ ಹಾಗು ಉದ್ಯೋಗಾವಕಾಶ ಕಲ್ಪಿಸುವತ್ತ ಗಮನ ಹರಿಸಿದೆʼ ಎಂದು ಅವರು ಮಾಹಿತಿ ನೀಡಿದರು.

ಈ ವೇಳೆ ನಗರವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಬಗ್ಗೆ ಮಾತನಾಡಿದ ಅವರು, ತುಳುನಾಡಿದ ಸಂಸ್ಕೃತಿ ಹಾಗು ಪರಂಪರೆಯ ಬಗ್ಗೆ ವಿಶೇಷ ಗಮನ ಹರಿಸಲಾಗುತ್ತದೆ ಎಂದರು. ಇದರೊಂದಿಗೆ ಮೀನುಗಾರರು ಹಾಗು ಕೃಷಿಕರ ಕಡೆ ಗಮನ ಹರಿಸುವತ್ತ ಒತ್ತು ನೀಡಲಾಯಿತು.

Advertisement

ದೇವಸ್ಥಾನಗಳನ್ನು ಅಭಿವೃದ್ಧಿಪಡಿಸಿ, ಫಿಲಂ ಸಿಟಿ ಸ್ಥಾಪಿಸಿ, ಮೀನುಗಾರಿಕಾ ಕಾಲೇಜುಗಳನ್ನು ವಿಶ್ವವಿದ್ಯಾಲಯವಾಗಿ ಪರಿವರ್ತಿಸಿ ಸಂಶೋಧನೆಗೆ ಆದ್ಯತೆ ನೀಡಲಾಗುವುದು ಎಂದು ಚೌಟ ಭರವಸೆ ನೀಡಿದರು.

Advertisement
Tags :
Captain Brijesh ChautaLatestNewsmangaluruNewsKarnatakaOceanPossibilities
Advertisement
Next Article