ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

‘ಕ್ಯಾಪ್ಟನ್​ ಮಿಲ್ಲರ್​’ ಸಿನಿಮಾಗೆ ಸಿಕ್ಕಾಯಿತು ‘ಯು/ಎ’ ಪ್ರಮಾಣಪತ್ರ

ಧನುಷ್ ನಟನೆಯ ‘ಕ್ಯಾಪ್ಟನ್​ ಮಿಲ್ಲರ್​’ ಸಿನಿಮಾ ಜನವರಿ 12ರಂದು ತೆರೆ ಕಾಣಲಿದ್ದು ,ಈ ಸಿನಿಮಾಗೆ ಸೆನ್ಸಾರ್​ ಪ್ರಕ್ರಿಯೆ ಪೂರ್ಣಗೊಂಡಿವೆ. ಸಿನಿಮಾ ನೋಡಿದ  ಸೆನ್ಸಾರ್​  ಮಂಡಳಿ ಸದಸ್ಯರು ‘ಯು/ಎ’ ಪ್ರಮಾಣಪತ್ರ ನೀಡಿದ್ದಾರೆ.
06:46 PM Jan 04, 2024 IST | Ashika S

ಬೆಂಗಳೂರು: ಧನುಷ್ ನಟನೆಯ ‘ಕ್ಯಾಪ್ಟನ್​ ಮಿಲ್ಲರ್​’ ಸಿನಿಮಾ ಜನವರಿ 12ರಂದು ತೆರೆ ಕಾಣಲಿದ್ದು ,ಈ ಸಿನಿಮಾಗೆ ಸೆನ್ಸಾರ್​ ಪ್ರಕ್ರಿಯೆ ಪೂರ್ಣಗೊಂಡಿವೆ. ಸಿನಿಮಾ ನೋಡಿದ  ಸೆನ್ಸಾರ್​  ಮಂಡಳಿ ಸದಸ್ಯರು ‘ಯು/ಎ’ ಪ್ರಮಾಣಪತ್ರ ನೀಡಿದ್ದಾರೆ.

Advertisement

ಈ ಚಿತ್ರದಲ್ಲಿಶಿವರಾಜ್​ಕುಮಾರ್​  ಕೂಡ ಒಂದು ಪ್ರಮುಖ ಪಾತ್ರ ಮಾಡಿರುವುದರಿಂದ ಚಲನ ಚಿತ್ರದ ನಿರೀಕ್ಷೆ ಜೋರಾಗಿದೆ.  ಶಿವರಾಜ್​ಕುಮಾರ್​ ಅವರಿಗೆ ಪರಭಾಷೆಯಲ್ಲೂ ಡಿಮ್ಯಾಂಡ್​ ಇದೆ. ಕಳೆದ ವರ್ಷ ರಜನಿಕಾಂತ್​ ನಟನೆಯ ‘ಜೈಲರ್​’ ಸಿನಿಮಾದಲ್ಲಿ ಶಿವಣ್ಣ ಒಂದು ಪಾತ್ರ ಮಾಡಿದ್ದರು.

‘ಕ್ಯಾಪ್ಟನ್​ ಮಿಲ್ಲರ್​’ ಸಿನಿಮಾಗೆ ಅರುಣ್​ ಮಾದೇಶ್ವರನ್​ ನಿರ್ದೇಶನ ಮಾಡಿದ್ದಾರೆ. ಜಿ.ವಿ. ಪ್ರಕಾಶ್​ ಕುಮಾರ್​ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.

Advertisement

ಸೆನ್ಸಾರ್​ ಪ್ರಮಾಣ ಪತ್ರ ಪಡೆದ ಬಳಿಕ ‘ಕ್ಯಾಪ್ಟನ್​ ಮಿಲ್ಲರ್​’ ಸಿನಿಮಾದ ಅವಧಿ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಚಿತ್ರದ ಅವಧಿ 2 ಗಂಟೆ 37 ನಿಮಿಷ ಇದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ತಮಿಳಿನ ಜೊತೆಗೆ ಕನ್ನಡ, ತೆಲುಗು ಮುಂತಾದ ಭಾಷೆಗಳಿಗೆ ಡಬ್​ ಆಗಿ ರಿಲೀಸ್​ ಆಗುತ್ತಿದೆ.

Advertisement
Tags :
‘ಯು/ಎ’LatetsNewsNewsKannadaಕ್ಯಾಪ್ಟನ್ ಮಿಲ್ಲರ್ಧನುಷ್ಪ್ರಕ್ರಿಯೆಪ್ರಮಾಣಪತ್ರಸೆನ್ಸಾರ್​​
Advertisement
Next Article