ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಹೆಬ್ಬಾಳ ಫ್ಲೈ ಓವರ್ ಮೇಲೆ​​ ವ್ಯಕ್ತಿಯನ್ನು ನೂಕಿಕೊಂಡು ಹೋದ ಕಾರು: ವಿಡಿಯೋ ​

ಹೆಬ್ಬಾಳ  ಫ್ಲೈ ಓವರ್ ಮೇಲೆ ವ್ಯಕ್ತಿ ಯೋರ್ವನನ್ನು ಚಾಲಕ ಕಾರಿನಿಂದ ಸ್ವಲ್ಪ ದೂರದವರೆಗೆ ನೂಕಿಕೊಂಡು ಹೋದ ಭಯಾನಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
01:22 PM Dec 04, 2023 IST | Ashika S

ಬೆಂಗಳೂರು: ಹೆಬ್ಬಾಳ  ಫ್ಲೈ ಓವರ್ ಮೇಲೆ ವ್ಯಕ್ತಿ ಯೋರ್ವನನ್ನು ಚಾಲಕ ಕಾರಿನಿಂದ ಸ್ವಲ್ಪ ದೂರದವರೆಗೆ ನೂಕಿಕೊಂಡು ಹೋದ ಭಯಾನಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Advertisement

ಬೆಂಗಳೂರಿನ ಕಡೆಗೆ ಬರುವ ಹೆಬ್ಬಾಳ  ಫ್ಲೈ ಓವರ್ ಮೇಲೆ ಇಟಿಯಾಸ್ ವಾಹನವನ್ನು ನಿಲ್ಲಿಸಲಾಗಿತ್ತು. ಇಟಿಯಾಸ್​ ವಾಹನದ ಚಾಲಕ ಇದೇ ಫ್ಲೈ ಓವರ್​ ಮೇಲೆ ಬರುತ್ತಿದ್ದ ಇನ್ನೋವಾ ಕಾರಿಗೆ ಅಡ್ಡ ಹೋಗಿದ್ದಾನೆ. ಈ ವೇಳೆ ಚಾಲಕ ಕಾರನ್ನು ನಿಲ್ಲಿಸಿದ್ದಾನೆ. ಆದರೂ ಕೂಡ ಇಟಿಯಾಸ್​ ವಾಹನ ಚಾಲಕ ಪಕ್ಕಕ್ಕೆ ಹೋಗಿಲ್ಲ. ಆಗ ಚಾಲಕ ಇನ್ನೋವಾ ಕಾರಿನಿಂದ, ಇಟಿಯಾಸ್​ ಚಾಲಕನನ್ನು ಸ್ವಲ್ಪ ದೂರದವರೆಗೆ ನೂಕಿಕೊಂಡು ಹೋಗಿದ್ದಾನೆ. ಬಳಿಕ ಕಾರು ನಿಲ್ಲಿಸಿ ಚಾಲಕ ಇಟಿಯಾಸ್​ ವಾಹನ ಚಾಲಕನ ಮೇಲೆ ಹಲ್ಲೆ ಮಾಡಿದ್ದಾನೆ. ​

ಈ ದೃಶ್ಯಾವಳಿಗಳು ಕಾರಿನ ಡ್ಯಾಶ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೋವನ್ನು ಪ್ರದೀಪ್​ ಹೆರಳೆ ಎಂಬುವರು ಎಕ್ಸ್​ನಲ್ಲಿ ಪೋಸ್ಟ್ ಮಾಡಿ,ಬೆಂಗಳೂರು ಸಂಚಾರ ಪೊಲೀಸರಿಗೆ ಟ್ಯಾಗ್​ ಮಾಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Advertisement

“ಈ ಬಗ್ಗೆ ಅಂದು ಟ್ರಾಫಿಕ್​ ಪೊಲೀಸರಿಗೂ ಮಾಹಿತಿ ನೀಡಿದ್ದೇನೆ. ಗಾಡಿಯಲ್ಲಿ ಪ್ಯಾಸೆಂಜರ್ ಇದ್ದರೂ ಕೂಡ ಕೆಎ 05, ಎಎಲ್ 7999 ವಾಹನ ಚಾಲಕನ ಅತಿರೇಕದ ವರ್ತನೆ ತೋರಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

Advertisement
Tags :
LatestNewsNewsKannadaಘಟನೆಚಾಲಕವ್ಯಕ್ತಿಹೆಬ್ಬಾಳ  ಫ್ಲೈ ಓವರ್
Advertisement
Next Article