For the best experience, open
https://m.newskannada.com
on your mobile browser.
Advertisement

ಶವ ಕೊಂಡೊಯ್ಯುವಾಗ ಕಾರಿನ ಟೈರ್ ಬ್ಲ್ಯಾಸ್ಟ್‌: ಮೂವರ ದುರ್ಮರಣ

ಅಜ್ಜಿಯ ಶವ ಕೊಂಡೊಯ್ಯುವಾಗ ಕಾರಿನ ಟೈರ್ ಬ್ಲ್ಯಾಸ್ಟ್‌ ಆಗಿದ್ದು ಕಾರು ಪಲ್ಟಿಯಾಗಿ , 3  ಮಂದಿ ಸ್ಥಳದಲ್ಲೇ ದುರ್ಮರಣಕ್ಕೀಡಾಗ ಘಟನೆ ಚಿತ್ರದುರ್ಗದ ಮೊಳಕಾಲ್ಮೂರು ತಾಲ್ಲೂಕಿನ ರಾಂಪುರ ಬಳಿ ನಡೆದಿದೆ.
06:35 PM Jan 19, 2024 IST | Ashika S
ಶವ ಕೊಂಡೊಯ್ಯುವಾಗ ಕಾರಿನ ಟೈರ್ ಬ್ಲ್ಯಾಸ್ಟ್‌  ಮೂವರ ದುರ್ಮರಣ

ಚಿತ್ರದುರ್ಗ:  ಅಜ್ಜಿಯ ಶವ ಕೊಂಡೊಯ್ಯುವಾಗ ಕಾರಿನ ಟೈರ್ ಬ್ಲ್ಯಾಸ್ಟ್‌ ಆಗಿದ್ದು ಕಾರು ಪಲ್ಟಿಯಾಗಿ , 3  ಮಂದಿ ಸ್ಥಳದಲ್ಲೇ ದುರ್ಮರಣಕ್ಕೀಡಾಗ ಘಟನೆ ಚಿತ್ರದುರ್ಗದ ಮೊಳಕಾಲ್ಮೂರು ತಾಲ್ಲೂಕಿನ ರಾಂಪುರ ಬಳಿ ನಡೆದಿದೆ.

Advertisement

ಅಜ್ಜಿಗೆ ಅನಾರೋಗ್ಯವೆಂದು ಚಿಕಿತ್ಸೆ ಕೊಡಿಸುವುದಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೇ ಅಜ್ಜಿ ಸಾವನ್ನಪ್ಪಿದ್ದಾರೆ. ಅಜ್ಜಿಯ ಮೃತ ದೇಹವನ್ನು ಕಾರಿನಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ಕೊಂಡೊಯ್ಯುವಾಗ ರಾಂಪುರ ಬಳಿಯ ಗ್ರ್ಯಾಂಡ್ ಪೋರ್ಡ್ ಹೋಟೆಲ್ ಬಳಿ ಈ ಘಟನೆ  ನಡೆದಿದೆ.

ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದರೆ, ಉಳಿದ 3 ಮಂದಿಯ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಸ್ಥಳೀಯ ರಾಂಪುರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

Advertisement

ಮೃತರೆಲ್ಲರೂ‌ ಸಿರುಗುಪ್ಪ ಮೂಲದವರಾಗಿದ್ದಾರೆ.  ಸುರೇಶ್ (40) ,  ಮಲ್ಲಿ (25),  ಭೂಮಿಕ (9) ಮೃತ ದುರ್ದೈವಿಗಳು. ಇನ್ನು ನಾಗಮ್ಮ (31), ತಾಯಮ್ಮ (56), ಧನರಾಜ್ (39) ಹಾಗೂ ಚಾಲಕ ಶಿವು (26) ಗಂಭೀರ ಗಾಯಾಳುಗಳು ಎಂದು ಗುರುತಿಸಲಾಗಿದೆ.

Advertisement
Tags :
Advertisement