ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ತರಗತಿಯಲ್ಲಿಯೇ ವಿದ್ಯಾರ್ಥಿಗಳ ಡೇಟಿಂಗ್‌ ಪ್ರೊಫೈಲ್‌ ಪ್ರದರ್ಶನ ಮಾಡಿದ ಪ್ರಾಧ್ಯಾಪಕಿ: ಕೇಸ್‌ ದಾಖಲು

ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರು ಡೇಟಿಂಗ್‌ ಆಪ್‌ ಗಳನ್ನು ಬಳಸುವುದು ಸಾಮಾನ್ಯವಾಗಿದೆ. ಆದರೆ ಒಪಿ ಜಿಂದಾಲ್‌ ಗ್ಲೋಬಲ್‌ ಯುನಿವರ್ಸಿಟಿ ಕಾಲೇಜಿನಲ್ಲಿ ಮಹಿಳಾ ಪ್ರೊಫೆಸರ್‌ ಒಬ್ಬರು ವಿದ್ಯಾರ್ಥಿನಿಯರ ಡೇಟಿಂಗ್‌ ಪ್ರೊಫೈಲ್‌ ಗಳನ್ನು ತರಗತಿಯಲ್ಲಿಯೇ ಪ್ರದರ್ಶನ ಮಾಡಿ ಅವರ ಖಾಸಗಿತನಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ.
08:30 AM Dec 25, 2023 IST | Ashika S

ಗುರುಗ್ರಾಮ್: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರು ಡೇಟಿಂಗ್‌ ಆಪ್‌ ಗಳನ್ನು ಬಳಸುವುದು ಸಾಮಾನ್ಯವಾಗಿದೆ. ಆದರೆ ಒಪಿ ಜಿಂದಾಲ್‌ ಗ್ಲೋಬಲ್‌ ಯುನಿವರ್ಸಿಟಿ ಕಾಲೇಜಿನಲ್ಲಿ ಮಹಿಳಾ ಪ್ರೊಫೆಸರ್‌ ಒಬ್ಬರು ವಿದ್ಯಾರ್ಥಿನಿಯರ ಡೇಟಿಂಗ್‌ ಪ್ರೊಫೈಲ್‌ ಗಳನ್ನು ತರಗತಿಯಲ್ಲಿಯೇ ಪ್ರದರ್ಶನ ಮಾಡಿ ಅವರ ಖಾಸಗಿತನಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ.

Advertisement

ಹರಿಯಾಣ ರಾಜ್ಯ ಮಹಿಳಾ ಆಯೋಗದ (ಎಚ್‌ಎಸ್‌ಸಿಡಬ್ಲ್ಯು) ಅಧ್ಯಕ್ಷೆ ರೇಣು ಭಾಟಿಯಾ ನೀಡಿದ ದೂರಿನ ಮೇರೆಗೆ ಹರ್ಯಾಣದ ಸೋನಿಪತ್ ಪೊಲೀಸರು ನಗರದ ಓಪಿ ಜಿಂದಾಲ್ ಗ್ಲೋಬಲ್ ಯೂನಿವರ್ಸಿಟಿಯ ಪ್ರಾಧ್ಯಾಪಕಿ ಸಮೀನಾ ದಳವಾಯಿ ವಿರುದ್ಧ ಕೇಸು ದಾಖಲಿಸಿದ್ದಾರೆ.

ಜಿಂದಾಲ್ ಗ್ಲೋಬಲ್ ಲಾ ಸ್ಕೂಲ್‌ನ ಮಹಿಳಾ, ಕಾನೂನು ಮತ್ತು ಸಾಮಾಜಿಕ ಬದಲಾವಣೆಯ ಕೇಂದ್ರದ ಪ್ರಾಧ್ಯಾಪಕಿ ಮತ್ತು ಸಹಾಯಕ ನಿರ್ದೇಶಕಿ ಸಮೀನಾ ದಳವಾಯಿ ಬಂಬಲ್ (ಡೇಟಿಂಗ್ ಅಪ್ಲಿಕೇಶನ್) ವಿದ್ಯಾರ್ಥಿನಿಯರ ಹಲವಾರು ಪ್ರೊಫೈಲ್‌ಗಳನ್ನು ಪ್ರದರ್ಶಿಸಿದ್ದಾರೆ ಎಂದು ರೇಣು ಭಾಟಿಯಾ ದೂರಿನಲ್ಲಿ ಆರೋಪಿಸಿದ್ದಾರೆ. ಈ ವಿಚಾರವನ್ನು ಬಲಪಂಥೀಯ ಹೋರಾಟಗಾರ್ತಿ ರಶ್ಮಿ ಸಾವಂತ್‌ ಜಾಲತಾಣದಲ್ಲಿ ಹಂಚಿಕೊಂಡಿದ್ದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಈ ಘಟನೆಯು 23 ಸೆಪ್ಟೆಂಬರ್, 2023 ರಂದು ಒಪಿ ಜಿಂದಾಲ್ ಗ್ಲೋಬಲ್ ಯೂನಿವರ್ಸಿಟಿಯ ತರಗತಿಯಲ್ಲಿ ಸಂಭವಿಸಿದೆ, ಅಲ್ಲಿ ಸಮೀನಾ ದಳವಾಯಿ ಈ ಕೃತ್ಯಗಳನ್ನು ಎಸಗಿದ್ದಾರೆ, ಎಂದು ಸೋನಿಪತ್ ಪೊಲೀಸ್ ಕಮಿಷನರ್‌ಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.

Advertisement
Tags :
LatetsNewsNewsKannadaಗ್ಲೋಬಲ್‌ ಯುನಿವರ್ಸಿಟಿಜಿಂದಾಲ್‌ಡೇಟಿಂಗ್ ಆಪ್ಮಹಿಳಾ ಪ್ರೊಫೆಸರ್‌ಯುವಕಯುವತಿ
Advertisement
Next Article