For the best experience, open
https://m.newskannada.com
on your mobile browser.
Advertisement

ಎ.19ರಿಂದ 21ರವರೆಗೆ ಫಿಝ್ಜಾ ಬೈ ನೆಕ್ಸಸ್ ಮಾಲ್ ನಲ್ಲಿ "ಕ್ಯಾಶ್ಯೂ ಹಬ್ಬ"

'ಪಾಂಡೇಶ್ವರದಲ್ಲಿನ ಫಿಝ ಬೈ ನೆಕ್ಸಸ್ ಮಾಲ್ ನಲ್ಲಿ ನಾಳೆಯಿಂದ(ಏ.19) ಎ.21ರವರೆಗೆ ಗೋಡಂಬಿ ಹಬ್ಬವನ್ನು ಆಚರಿಸಲಾಗುತ್ತದೆ' ಎಂದು ಕೆ.ಸಿ.ಎಂ.ಎ. ಸದಸ್ಯ ಅದಿತ್ ಕಲ್ಬಾವಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
12:35 PM Apr 18, 2024 IST | Ashitha S
ಎ 19ರಿಂದ 21ರವರೆಗೆ ಫಿಝ್ಜಾ ಬೈ ನೆಕ್ಸಸ್ ಮಾಲ್ ನಲ್ಲಿ  ಕ್ಯಾಶ್ಯೂ ಹಬ್ಬ

ಮಂಗಳೂರು: "ಪಾಂಡೇಶ್ವರದಲ್ಲಿನ ಫಿಝ್ಜಾ ಬೈ ನೆಕ್ಸಸ್ ಮಾಲ್ ನಲ್ಲಿ ನಾಳೆಯಿಂದ(ಏ.19) ಎ.21ರವರೆಗೆ ಗೋಡಂಬಿ ಹಬ್ಬವನ್ನು ಆಚರಿಸಲಾಗುತ್ತದೆ" ಎಂದು ಕೆ.ಸಿ.ಎಂ.ಎ. ಸದಸ್ಯ ಅದಿತ್ ಕಲ್ಬಾವಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

Advertisement

"ಕರ್ನಾಟಕ ಕ್ಯಾಶ್ಯೂ ಮ್ಯಾನುಫ್ಯಾಕ್ಚರರ್ ಅಸೋಸಿಯೇಷನ್ ಸಹಯೋಗದಲ್ಲಿ ನಡೆಯುವ ಈ ಹಬ್ಬದಲ್ಲಿ ಹಲವಾರು ಬಗೆಯ ಗೇರು ಬೀಜ ಮತ್ತು ರುಚಿಕರ ಗೋಡಂಬಿ ತಿಂಡಿ ತಿನಿಸು ಸವಿಯಬಹುದಾಗಿದೆ" ಎಂದವರು ಹೇಳಿದರು.

Prs

Advertisement

"ಫಿಝ್ಜಾ ಬೈ ನೆಕ್ಸಸ್ ಮಾಲ್ ಒಂದನೇ ಮಹಡಿಯಲ್ಲಿ ನಡೆಯುವ ಈ ಹಬ್ಬದಲ್ಲಿ ಎಕ್ಸ್ ಪೋರ್ಟ್ ಕ್ವಾಲಿಟಿಯ ಗೋಡಂಬಿ ಮತ್ತು ಖಾದ್ಯಗಳ ರುಚಿ ಗ್ರಾಹಕರಿಗೆ ಲಭಿಸಲಿದೆ. ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಬೆಂಕಿ ಇಲ್ಲದೆ ಅಡುಗೆ ಮಾಡುವ ಸ್ಪರ್ಧೆ ಮತ್ತು ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಹಾಗೂ ಇನ್ನಿತರ ಮೋಜು ಮಸ್ತಿ ಆಟೋಟಗಳನ್ನು ಆಯೋಜಿಸಲಾಗಿದೆ. ಆಸಕ್ತರು ಮಾಲ್ ಕಚೇರಿ ಸಂಪರ್ಕಿಸಬಹುದಾಗಿದೆ" ಎಂದು ಅಸಿಸ್ಟೆಂಟ್ ಮೆನೇಜರ್ ಶ್ರೀನಿಧಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಚೈತನ್ಯ, ಸುನಿಲ್, ಅನಿಷಾ, ವೇಣು ಶರ್ಮಾ ಮತ್ತಿತರರು ಉಪಸ್ಥಿತರಿದ್ದರು.

Advertisement
Tags :
Advertisement