For the best experience, open
https://m.newskannada.com
on your mobile browser.
Advertisement

ಕುಡಿದ ಅಮಲಿನಲ್ಲಿ ಬಿಯರ್ ಬಾಟಲಿಯಿಂದ ಇರಿದು ಕ್ಯಾಷಿಯರ್ ನ ಕೊಲೆ

ವ್ಯಕ್ತಿಯೋರ್ವ ಹೋಟೆಲ್ ಕ್ಯಾಷಿಯರ್ ಗೆ ಬೀರ್ ಬಾಟಲಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ಕುಶಾಲನಗರದಲ್ಲಿ ನೆನ್ನೆ ರಾತ್ರಿ ನಡೆದಿದೆ.
09:22 AM Apr 22, 2024 IST | Ashika S
ಕುಡಿದ ಅಮಲಿನಲ್ಲಿ ಬಿಯರ್ ಬಾಟಲಿಯಿಂದ ಇರಿದು ಕ್ಯಾಷಿಯರ್ ನ ಕೊಲೆ

ಕುಶಾಲನಗರ: ವ್ಯಕ್ತಿಯೋರ್ವ ಹೋಟೆಲ್ ಕ್ಯಾಷಿಯರ್ ಗೆ ಬಿಯರ್ ಬಾಟಲಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ಕುಶಾಲನಗರದಲ್ಲಿ ನೆನ್ನೆ ರಾತ್ರಿ ನಡೆದಿದೆ.

Advertisement

ಕುಶಾಲನಗರದ ಹೃದಯಭಾಗದಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ನೆನ್ನೆ ರಾತ್ರಿ ಈ ಕೃತ್ಯ ನಡೆದಿದ್ದು ಕ್ಯಾಷಿಯರ್ ಸಂತೋಷ್ ಎಂಬಾತ ಜನತಾ ಕಾಲೋನಿಯ ಹರ್ಷ ಎಂಬಾತನಿಂದ ಹತರಾಗಿದ್ದಾರೆ. ಕಂಠಪೂರ್ತಿ ನಶೆ ಏರಿಸಿದ್ದ ಹರ್ಷ, ಕುಡಿತದ ಅಮಲಿನಲ್ಲಿ ಕ್ಯಾಷಿಯರ್ ಸಂತೋಷ್ ಜೊತೆಗೆ ಕಲಹನಿರತನಾಗಿದ್ದಾನೆ.

ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಇದರಿಂದ ಹರ್ಷ ಬಿಯರ್ ಬಾಟಲಿಯಿಂದ ಸಂತೋಷ್ ನ ತಲೆ ಮತ್ತು ಕುತ್ತಿಗೆಗೆ ಬಲವಾಗಿ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಗಾಯಳು ಸಂತೋಷ್ ಜೀವ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

Advertisement

ಆರೋಪಿ ಹರ್ಷನನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Advertisement
Tags :
Advertisement