For the best experience, open
https://m.newskannada.com
on your mobile browser.
Advertisement

ದ.ಕ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಕಥೊಲಿಕ್‌ ಸಭಾ ಮಂಗ್ಳುರ್ ಪ್ರದೇಶ್ ಆಯ್ಕೆ

2023ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಸಂಘ ಸಂಸ್ಥೆ ವಿಭಾಗದಿಂದ ಕಥೋಲಿಕ ಕ್ರೈಸ್ತ ಸಂಘಟನೆಯಾದ ‘ಕಥೊಲಿಕ್‌ ಸಭಾ ಮಂಗ್ಳುರ್ ಪ್ರದೇಶ್ (ರಿ)ಆಯ್ಕೆಯಾಗಿದೆ.
03:25 PM Nov 01, 2023 IST | Gayathri SG
ದ ಕ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಕಥೊಲಿಕ್‌ ಸಭಾ ಮಂಗ್ಳುರ್ ಪ್ರದೇಶ್ ಆಯ್ಕೆ

ಮಂಗಳೂರು: 2023ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಸಂಘ ಸಂಸ್ಥೆ ವಿಭಾಗದಿಂದ ಕಥೋಲಿಕ ಕ್ರೈಸ್ತ ಸಂಘಟನೆಯಾದ ‘ಕಥೊಲಿಕ್‌ ಸಭಾ ಮಂಗ್ಳುರ್ ಪ್ರದೇಶ್ (ರಿ)ಆಯ್ಕೆಯಾಗಿದೆ.

Advertisement

44 ವರ್ಷಗಳ ಇತಿಹಾಸ ಹೊಂದಿರುವ ಕಥೊಲಿಕ್‌ ಸಭಾ ಮಂಗ್ಳುರ್ ಪ್ರದೇಶ್ (ರಿ) ಧರ್ಮಕ್ಷೇತ್ರದಾದ್ಯಂತ ಒಟ್ಟು 111 ಘಟಕಗಳನ್ನು ಹೊಂದಿದೆ. 1979ರಲ್ಲಿ ಕೇಂದ್ರದ ಮಾಜಿ ಸಚಿವ ದಿ. ಆಸ್ಕರ್‌ ಫೆರ್ನಾಂಡಿಸ್ ರವರ ಮುಂದಾಳತ್ವದಲ್ಲಿ ಈ ಸಂಘಟನೆಯು ಆರಂಭಗೊಂಡಿತು. ಅವರೇ ಮೊದಲ ಸ್ಥಾಪಕ ಅಧ್ಯಕ್ಷರಾಗಿ ನೇತೃತ್ವ ವಹಿಸಿಕೊಂಡರು. ಸಾಮಾಜಿಕ ಹಾಗೂ ಧಾರ್ಮಿಕ ಕಳಕಳಿ ಹೊಂದಿರುವ ಈ ಸಂಘಟನೆಯು ಮಂಗಳೂರು ಮತ್ತು ಉಡುಪಿ ಪ್ರಾಂತ್ಯದಲ್ಲಿ ಸಕ್ರಿಯವಾಗಿದೆ.

ಸದ್ಯ ಕಥೊಲಿಕ್‌ ಸಭಾ ಮಂಗ್ಳುರ್ ಪ್ರದೇಶ್ (ರಿ) ಇದರ ಕೇಂದ್ರೀಯ ಅಧ್ಯಕ್ಷರಾಗಿ ಆಲ್ವಿನ್‌ ಜೆರೋಮ್‌ ಡಿಸೋಜ ಪಾನೀರ್‌ ಅವರು ಕಾರ್ಯನಿರ್ವಹಿಸುತ್ತಿದ್ದು, ವಂ. ಫಾ.ಜೆ.ಬಿ ಸಲ್ಡಾನ್ಹಾ ಅವರು ಆಧ್ಯಾತ್ಮಿಕ ನಿರ್ದೇಶಕರಾಗಿದ್ದಾರೆ.

Advertisement

Advertisement
Tags :
Advertisement