For the best experience, open
https://m.newskannada.com
on your mobile browser.
Advertisement

ಎಲ್​ಪಿಜಿ ಸಿಲಿಂಡರ್ ಬೆಲೆ ಇಳಿಕೆ: ಮಹಿಳಾ ದಿನಾಚರಣೆ ದಿನ ಮೋದಿ ಗಿಫ್ಟ್

ಶಿವರಾತ್ರಿ ಹಾಗೂ ಮಹಿಳಾ ದಿನಾಚರಣೆ ದಿನದಂದೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನರಿಗೆ ಸಂತಸದ ಸುದ್ದಿಯೊಂದನ್ನು ಕೊಟ್ಟಿದೆ. ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ ಬರೊಬ್ಬರಿ 100 ರೂಪಾಯಿಗಳನ್ನು ಕಡಿಮೆ ಮಾಡಲಾಗಿದೆ ಎಂದು ಸ್ವತಹ ಪ್ರಧಾನಿ ಮೋದಿಯವರು ಟ್ವಿಟ್ ಮಾಡಿದ್ದಾರೆ.
10:09 AM Mar 08, 2024 IST | Ashitha S
ಎಲ್​ಪಿಜಿ ಸಿಲಿಂಡರ್ ಬೆಲೆ ಇಳಿಕೆ  ಮಹಿಳಾ ದಿನಾಚರಣೆ ದಿನ ಮೋದಿ ಗಿಫ್ಟ್

ನವದೆಹಲಿ: ಶಿವರಾತ್ರಿ ಹಾಗೂ ಮಹಿಳಾ ದಿನಾಚರಣೆ ದಿನದಂದೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನರಿಗೆ ಸಂತಸದ ಸುದ್ದಿಯೊಂದನ್ನು ಕೊಟ್ಟಿದೆ. ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ ಬರೊಬ್ಬರಿ 100 ರೂಪಾಯಿಗಳನ್ನು ಕಡಿಮೆ ಮಾಡಲಾಗಿದೆ ಎಂದು ಸ್ವತಹ ಪ್ರಧಾನಿ ಮೋದಿಯವರು ಟ್ವಿಟ್ ಮಾಡಿದ್ದಾರೆ.

Advertisement

ಎಲ್​​ಪಿಜಿ ಹೆಚ್ಚು ಹೆಚ್ಚಾಗಿ ಕೈಗೆಟುಕುವಂತೆ ಮಾಡುವ ಮೂಲಕ ಮಹಿಳೆಯರ ಯೋಗಕ್ಷೇಮ, ಕುಟುಂಬದ ಆರೋಗ್ಯಕರ ವಾತಾವರಣ ಕಾಪಾಡಲು ನಾವು ಮುಂದಾಗಿದ್ದೇವೆ. ಮಹಿಳೆಯರನ್ನು ಸಬಲೀಕರಣಗೊಳಿಸುವ ಮತ್ತು ಅವರಿಗೆ ಸರಳವಾಗಿ ಬದುಕುವ ಖಾತ್ರಿಪಡಿಸುವುದು ನಮ್ಮ ಬದ್ಧತೆಗೆ ಅನುಗುಣವಾಗಿದೆ ಎಂದು ಪ್ರಧಾನಿ ಮೋದಿ ಟ್ವಿಟ್ ಮೂಲಕ ತಿಳಿಸಿದ್ದಾರೆ.

Advertisement

Advertisement
Tags :
Advertisement